ಸಚೀನ ಆತ್ಮಹತ್ಯೆಯ ತನಿಖೆ ಮತ್ತು ಅವರ ಪರಿವಾರಕ್ಕೆ ನ್ಯಾಯ ಒದಗಿಸುವಂತೆ ರೈಲ್ವೆ ಇಲಾಖೆಯ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ

ಬೀದರ: ಸಚೀನ ಪಾಂಚಾಳ ಇವರ ಆತ್ಮಹತ್ಯೆಯು ನಿಗೂಢ ಸಾವಿನ ಗ್ಗೆ ವಿಷಯ ತಿಳಿದು ಬಂದಿದ್ದು, ವಿಷಾಧದ ಸಂಗತಿಯಾಗಿದೆ. ಬಡ ಸಮಾಜದಲ್ಲಿ ಹುಟ್ಟಿ, ಯುವಕ ತನ್ನ ಉಪಜೀವನಕ್ಕಾಗಿ ಮಾಡುವ ಕೆಲಸದ ವ್ಯವಹಾರದಲ್ಲಿ ಏನೋ ಏರುಪೇರಾಗಿದೆಯೋ? ಇದು ನಿಗೂಢ ಸಾವಿನಲ್ಲಿ ಅಂತ್ಯವಾಗಿದೆ. ಸಚೀನ ಇವರ ಮೇಲೆ ಅವಲಂಬಿತ ಪರಿವಾರದ ಸದಸ್ಯರು ಅನಾಥರಾಗಿ ಬೀದಿ ಪಾಲಾಗುವ ಸನ್ನಿವೇಶನ ಪರಿಸ್ಥಿತಿ ಬಂದೊದಗಿದೆ. ಕಾರಣ ದಯಾಳುಗಳಾದ ತಾವು ಈ ಘಟನೆಯ ಬಗ್ಗೆ ಕುಲಂಕುಶವಾಗಿ ತನಿಖೆ ನಡೆಸಿ, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವಂತೆ ಒತ್ತಾಯಿಸಿ ಇಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕ ವತಿಯಿಂದ ಸೌಮ್ಯಲತಾ ಎಸ್.ಕೆ ಪೋಲೀಸ್ ವರಿಷ್ಟಧಿಕಾರಿಗಳು ರೈಲ್ವೆ ಇಲಾಖೆಯಿವರಿಗೆ ಸಚೀನ ಪಂಚಾಳರವರ ಆತ್ಮಹತ್ಯೆ ನಿಗೂಢ ಸಾವಿನ ತನಿಖೆ ಮಾಡಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಕೋಡಿಸಬೇಕೆಂದು ಮನವಿ ಮಾಡಲಾಯಿತು.

ಈ ಸಂಧರ್ಭದಲ್ಲಿ ಮಾತ್ರ ಘಟಕ ಜಿಲ್ಲಾಧ್ಯಕ್ಷರಾದ ದತ್ತಾತ್ರಿ ವಿಶ್ವಕರ್ಮ, ಯುವ ಘಟಕದ ಜಿಲ್ಲಾಧ್ಯಕ್ಷರಾದ ಪ್ರಶಾಂತ ವಿಶ್ವಕರ್ಮ, ಉಪಾಧ್ಯಕ್ಷರಾದ ಸೋಮನಾಥ ಪಾಂಚಾಲ್, ಪಾಂಡುನಾಗ್ ಪಾಂಚಾಲ್, ಮಹದೇವ್ ಪಂಚಾಲ್, ಸಂಜುಕುಮಾರ್ ಪಾಂಚಾಲ್, ಮಂಜುನಾಥ್ ಪಂಚಾಲ್, ಗಣಪತ್ ರಾವ್ ಪಂಚಾಲ್ ಉಪಸ್ಥಿತರಿದ್ದರು

error: Content is protected !!