ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಿಂದ ಸತ್ಯಂಪೇಟೆ ಶೇಖಪುರ್ ಹಾಲ್ಗೆರ ಯಮನೂರು ಮರ್ಕಲ್ ಕೊಲ್ಲೂರು ಎಂ. ದೇವದುರ್ಗ ತಾಲೂಕಿಗೆ ಸಂಪರ್ಕಿಸುವ ಮುಖ್ಯ ಹೆದ್ದಾರಿ ಈ ರಸ್ತೆಯ ಮೇಲೆ ಹತ್ತಾರು ಹಳ್ಳಿಯ ಜನರು ತಮ್ಮ ದಿನನಿತ್ಯ ಬದುಕಿಗಾಗಿ ಹಾಗೂ ವಿದ್ಯಾರ್ಥಿಗಳು ರೋಗಿಗಳು ಮತ್ತು ಜನಸಾಮಾನ್ಯರು ಜೀವ ಕೈಯಲ್ಲಿ ಹಿಡಿದು ಓಡಾಡು ವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಕೂಡಲೆ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ಶಹಪುರ್ ಮತ್ತು ಸುರಪುರ ಕ್ಷೇತ್ರದ ಶಾಸಕರುಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಹಳ್ಳಿಯ ಜನರಿಗೆ ಅನುವು ಮಾಡಿಕೊಡಬೇಕು ಒಂದು ವೇಳೆ ಇದನ್ನು ಗಂಭೀರವಾಗಿ ಪರಿಗಣಿಸದೆ ಇದ್ದರೆ ರಸ್ತೆ ತಡೆದು ಉಗ್ರ ಹೋರಾಟ ಮಾಡುವುದಾಗಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿ ಯಿಂದ ಭೀಮರಾಯ ಪೂಜಾರಿ ಜಿಲ್ಲಾ ಸಹ ಕಾರ್ಯದರ್ಶಿಗಳು ಎಚ್ಚರಿಸಿದ್ದಾರೆ.