ಬೀದರ್: ನೌಬಾದ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಯ ಜನರಿಗೆ ಉತ್ತಮ ಚಿಕಿತ್ಸೆ ನೀಡಲು ಎಸ್‌ಬಿ ಪಾಟೀಲ ಡೆಂಟಲ್ ಹಾಸ್ಪಿಟಲ್ ಎದುರುಗಡೆ ನೌಬಾದನಲ್ಲಿ ನೂತನವಾಗಿ ನಿರ್ಮಿಸಿದ ಆಕ್ಸಿಲೈಫ್ ಆಸ್ಪತ್ರೆ ಜನವರಿ ೨ ರಂದು ಬೆಳಿಗ್ಗೆ ೧೧-೩೦ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಂದ ಲೋಕರ‍್ಪಣೆಗೊಳ್ಳಲಿದೆ ಎಂದು ಆಸ್ಪತ್ರೆಯ ಅಧ್ಯಕ್ಷ ಚಂದ್ರಕಾಂತ ಗದ್ದಗಿ ಹೇಳಿದರು.
ಮಂಗಳವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕಳೆದ ಮೂವತ್ತು ವರ್ಷಗಳಿಂದ ವಸಂತ ನರಸಿಂಗ್ ಕಾಲೇಜು, ಎಂ.ಜಿ.ಕಾನೂನು ಮಹಾವಿದ್ಯಾಲಯ ಸೇರಿದಂತೆ ಇತರೆ ಶಾಲಾ ಕಾಲೇಜುಗಳನ್ನು ನಡೆಸುತ್ತ ಈ ಭಾಗದಲ್ಲಿ ಶೈಕ್ಷಣಿಕ ಸೇವೆ ಮಾಡುತ್ತ ಬರುತಿದ್ದು ಈಗ ಆರೋಗ್ಯ ಸೇವೆ ನೀಡಲು ಸೂಪರ ಸ್ಪೇಷಾಲಿಟಿ ಹಾಗೂ ಮಲ್ಟಿ ಆಸ್ಪತ್ರೆ ಪ್ರಾರಂಭಿಸಲಾಗುತ್ತಿದೆ.
ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕುಲ ಆಗಲೆಂದು ಈ ಆಸ್ಪತ್ರೆ ತೆರೆಯಲಾಗಿದೆ. ಸಾರ್ವಜನಿಕರ ಇದರ ಸದುಪಯೊಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಆಸ್ಪತ್ರೆಯ ವ್ಯವಸ್ಥಾಪಕ ಟ್ರಸ್ಟಿಗಳಾದ ಡಾ. ಪ್ರಿಯಾ ಗದ್ದಗಿ ಮೋದಿ ಮಾತನಾಡಿ, ಇಲ್ಲಿ ಎಲ್ಲಾ ರೀತಿಯ ಮಲ್ಟಿ ಸ್ಪೆಶಾಲಿಟಿ ಸೌಲಭ್ಯಗಳು ಲಭ್ಯ ಇರಲಿವೆ. ಅಂಬುಲೆನ್ಸ್ ವ್ಯವಸ್ಥೆ, ತುರ್ತು ಚಿಕಿತ್ಸಾ ಘಟಕ ಇರಲಿದೆ. ೫೦ ಹಾಸಿಗೆಯ ಈ ಆಸ್ಪತ್ರೆಯಲ್ಲಿ ಸುಮಾರು ೨೫ ರಿಂದ ೩೦ ಜನ ಸಿಬ್ಬಂದಿಗಳು,ನರ್ಸಿಂಗ್ ವೈದ್ಯರು ೨೪×೭ ಲಭ್ಯ ಇರಲಿದ್ದಾರೆ ಎಂದು ಮಾಹಿತಿ ನೀಡಿದರು. ಡಾ. ಅನಮೋಲ್ ಮೋದಿ ಮಾತನಾಡಿ ನೌಬಾದ ಸುತ್ತಮುತ್ತಲಿನ ಜನತೆ ಸಿಟಿ ಒಳಗೆ ಹೋಗದೆ ತಕ್ಷಣವೇ ನೌಬಾದನಲ್ಲೇ ಚಿಕಿತ್ಸೆ ಒದಗಿಸುವ ಉದ್ದೇಶ ಹೊಂದಿದ್ದೇವೆ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಸುದ್ದಿಗೋಷ್ಟಿಯಲ್ಲಿ ಶಿವಲಿಂಗ ವಿದ್ಯಾರನ್ಯ ಎಜುಕೇಶನ್ ಟ್ರಸ್ಟ್ ಹಾಗೂ ಚಿನ್ನಮ್ಮ ಗದ್ದಗಿ ಉಪಸ್ಥಿತರಿದ್ದರು.