ಸರಕಾರಿ ಪ್ರೌಢ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಸ್ವ-ರಕ್ಷಣಾ ಕೌಶಲ್ಯಗಳ ತರಬೇತಿ ನೀಡುವುದಾಗಿ ರಾಜ್ಯ ಯೋಜನಾ ನಿರ್ದೇಶಕರ ಕಛೇರಿ ಬೆಂಗಳೂರು ರವರ ಪತ್ರದ ಮೂಲಕ ಆದೇಶವನ್ನು ದಿನಾಂಕ:06-11-2024 ರಂದು ಹೋರಡಿಸಿರುತ್ತಾರೆ.ಹಾಗೆಯೇ, ರಾಜ್ಯ ಕಛೇರಿ, ಪತ್ರದ ಆದೇಶದ ಮೇರೆಗೆ ಅನುಷ್ಠಾನ ಮತ್ತು ನಿರ್ವಹಣೆಯಲ್ಲಿ ಸೂಚಿಸಿರುವಂತೆ : ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಸ್ಥಳೀಯ ಸ್ವ-ರಕ್ಷಣಾ ಕೌಶಲ್ಯ ತರಬೇತಿ ಪಡೆದ ಸಂಪನ್ಮೂಲ ವ್ಯಕ್ತಿಗಳಿಂದ ಮುಖ್ಯೋಪಧ್ಯಾಯರ/ದೈಹಿಕ ಶಿಕ್ಷಣಾ ಶಿಕ್ಷಕರ ನೇತೃತ್ವದಲ್ಲಿ ತರಬೇತಿ ನೀಡುವುದು. ಮತ್ತು ಶಾಲಾ ಮುಖ್ಯೋಪಾಧ್ಯಾಯರು ಅಕ್ಟೋಬರ್ ಮಾಹೆಯ ಕೊನೆಯ ವಾರದೊಳಗೆ ಅರ್ಹ ತರಬೇತುದಾರರನ್ನು ಆಯ್ಕೆ ಮಾಡಿಕೊಂಡು ಎಸ್.ಡಿ.ಎಂ.ಸಿ. ಸಭೆಯಲ್ಲಿ ಕರೆಸಿ ಶಿಕ್ಷಕರ ಸಮ್ಮುಖದಲ್ಲಿ ವಿಧ್ಯಾರ್ಥಿನಿಯರ ಹಿತ ರಕ್ಷಣೆಯನ್ನು ಕೇಂದ್ರವಾಗಿಟ್ಟುಕೊಂಡು ಸ್ವ-ರಕ್ಷಣಾ ತರಬೇತಿಯನ್ನು ಯಾವುದೇ ರೀತಿಯ ದೂರು ಬಾರದಂತೆ ಪರಿಣಾಮಕಾರಿಯಾಗಿ ಮಕ್ಕಳಿಗೆ ತರಬೇತಿ ನೀಡುವಂತೆ ಮಾರ್ಗದರ್ಶನ ನೀಡುವುದಾಗಿ ಸೂಚಿಸಲಾಗಿದೆ ಆದರೆ, ಮಾನ್ಯರಾದ ತಾವು ರಾಜ್ಯ ಯೋಜನಾ ನಿರ್ದೇಶಕರ ಕಛೇರಿ, ಬೆಂಗಳೂರು ರವರ ಆದೇಶವನ್ನು ಉಲ್ಲಂಘಿಸಿರುವುದಾಗಿ ಕಂಡುಬಂದಿದೆ. ಸದರಿ ಸರಕಾರದ ಆದೇಶದ ಪತ್ರದಲ್ಲಿರುವಂತೆ, ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ ಆಯಾ ಸರಕಾರಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಎಸ್.ಡಿ.ಎಂ.ಸಿ. ಸದಸ್ಯರುಗಳನ್ನೊಳಗೊಂಡಂತೆ. ಸ್ವ-ರಕ್ಷಣಾ ತರಬೇತಿ ನೀಡುವ ಶಿಕ್ಷಕರನ್ನು ಆಯ್ಕೆ ಮಾಡಲು ಅವಕಾಶ ಮಾಡಕೊಡಬೇಕೆಂದು ಉಪ ನಿರ್ದೇಶಕರು ಸಾರ್ವಜನಿಕರು ಶಿಕ್ಷಣ ಇಲಾಖೆ ಬೀದರ್ ಅಧಿಕಾರಿಗಳಿಗೆ ಸುವಿತ್ ಏನ್ ಮೊರೆ ಅಥ್ಲೆಟ್ 365 ಅಂತಾರಾಷ್ಟ್ರೀಯ ಒಲಿಂಪಿಕ್ ಕೋಮಿಟಿ ಹಾಗೂ ಕಾರ್ಯದರ್ಶಿಗಳು ಜಿಲ್ಲಾ ಒಲಿಂಪಿಕ್ ಸಂಸ್ಥೆ (ರಿ) ಯವರಿಂದ ಮನವಿ ಪತ್ರ ನೀಡಿದರು.
ವರದಿ : ಪ್ರದೀಪ್ ಕುಮಾರ್ ದಾದನೂರ್