ವಿದ್ಯಾಕಾಶಿ ಎಂದೇ ಪ್ರಸಿದ್ಧವಾದ ಧಾರವಾಡ ಜಿಲ್ಲೆಯು ಹಲವಾರು ದಾರ್ಶನಿಕ ಕವಿ, ಲೇಖಕರು ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರನ್ನು ದೇಶಕ್ಕೇ ಅರ್ಪಿಸಿದ ಪುಣ್ಯ ಭೂಮಿ ಇದು.. ಇಂತಹ ಜಿಲ್ಲೆಯಲ್ಲಿ ವಾತಾವರಣ ಚನ್ನಾಗಿದೇ ನಾವೆಲ್ಲರೂ ಅನೋನ್ಯವಾಗಿ ಖುಷಿಯಿಂದ ಜೀವನ ಮಾಡುತ್ತಿದ್ದೇವೆ ಅಂದುಕೊಳ್ಳುವಷ್ಟರಲ್ಲಿ, ಜಿಲ್ಲೆಯ ಪ್ರತಿಷ್ಠಿತ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಆಘಾತಕಾರಿ ಸಂಗತಿ ಒಂದು ಹೊರ ಬಿದ್ದಿದೆ..!
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಶೋಷಿತ ವರ್ಗದ ನೌಕರರನ್ನೇ ಗುರಿಯಾಗಿಸಿಕೊಂಡು ದಿನಂಪ್ರತಿ ಮಾನಸಿಕ ಹಿಂಸೆ ಮತ್ತು ಕಿರುಕುಳ ನೀಡುತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ರವಿಕುಮಾರ ಮಾಳಿಗೇರ ಇವರು ನಿರಂತರವಾಗಿ ಶೋಷಿತ ವರ್ಗದ ನೌಕರರನ್ನೇ ಗಣನೆಗೆ ತೆಗೆದುಕೊಂಡು ಅನಾವಶ್ಯಕವಾಗಿ ಅವಾಚ್ಯ ಶಬ್ದಗಳ ಜೊತೆಗೆ ನಿಂದಿಸುವುದು, ಬೇಕಾಯ್ದೆಶಿರಿ ಕಿರುಕುಳ ನೀಡುವುದರ ಜೊತೆಗೆ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಾ ಆಡಳಿತ ಮಂಡಳಿಯಲ್ಲಿ ಹಿಟ್ಲರ್ ಸಂಸ್ಕೃತಿಯನ್ನು ಮುಂದುವರಿಸಿದ್ದಾರೆ.
ಇದಕ್ಕಿಂತ ಪೂರ್ವದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿದ್ದಾಗ ಕೂಡ ಅಲ್ಲಿಯೂ ಇದೇ ದುರ್ಬುದ್ದಿಯ ಚಾಳಿಯನ್ನು ಮುಂದುವರೆಸಿದ್ದಕ್ಕೆ 01/07/2022 ರಂದು ಸಿಂಡಿಕೇಟ್ ಸದಸ್ಯತ್ವದಿಂದ ವಜಾಗೊಂಡಿದ್ದರು ಕೂಡ ತಮ್ಮ ಬುದ್ದಿಯನ್ನು ತಿದ್ದಿಕೊಳ್ಳದೇ ಇರುವ ರವಿಕುಮಾರ ಮಾಳಿಗೇರ ಅವರು ಕೃಷಿ ವಿಶ್ವವಿದ್ಯಾಲಯದಲ್ಲಿಯೂ ಸಂಭಂದವಿಲ್ಲದ ಕಾರ್ಯಗಳಲ್ಲಿ ಅಕ್ರಮವಾಗಿ ಹಸ್ತಕ್ಷೇಪ ಮಾಡಿ ಆಡಳಿತ ಕುಂಠಿತವಾಗುವ ವಾತಾವರಣ ಸೃಷ್ಟಿಸುತ್ತಿರುವದರಿಂದ ಈತನ ಗೂಂಡಾವರ್ತನೆ ತಾಳದೇ ಮಾನ್ಯ ಗೌರವಾನ್ವಿತ ರಾಜ್ಯಪಾಲರ ವಿಶೇಷ ಅಧಿಕಾರಿಗಳಿಗೆ ಕೃಷಿ ವಿಶ್ವವಿದ್ಯಾಲಯದ SC/ST ನೌಕರರು ಸಾಕಷ್ಟು ಭಾರೀ ಮನವಿ ಸಲ್ಲಿಸುವದರ ಜೊತೆಗೆ ಮಾನ್ಯ ಕುಲಪತಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನ ಆಗದೇ ಇರುವುದನ್ನು ಅರಿತು ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಧಾರವಾಡ ಜಿಲ್ಲಾ ಘಟಕಕ್ಕೇ ಮನವಿಯನ್ನು ಸಲ್ಲಿಸಿ ನೈತಿಕ ಬೆಂಬಲ ನೀಡುವಂತೆ ಕೋರಿದ್ದಾರೆ..
ಈ ವಿಷಯನ್ನು ಗಂಭೀರವಾಗಿ ಪರಿಗಣಿಸಿ ದಲಿತ ಜಿಲ್ಲಾ ಸಂಘಟನೆಯು ಮಾನ್ಯ ಕುಲಪತಿಗಳಿಗೆ ಆಡಳಿತ ಮಂಡಳಿಯಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿ ಮಾಡಿ ರವಿಕುಮಾರ ಮಾಳಿಗೇರ ಇವರನ್ನು ಕೂಡಲೇ ಆಡಳಿತ ಮಂಡಳಿಯಿಂದ ವಜಾ ಮಾಡಲು ಒಂದು ವಾರದ ಗಡುವು ನೀಡಿ ಮನವಿಯನ್ನು ಸಲ್ಲಿಸಿದರು.
ಈ ಸಂಧರ್ಭದಲ್ಲಿ ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ಅಂಬೇಡ್ಕರವಾದದ ಧಾರವಾಡ ಜಿಲ್ಲಾ ಸಂಚಾಲಕರಾದ ಮಂಜುನಾಥ ಶರೇವಾಡ, ಲಕ್ಷ್ಮಣ ದೊಡ್ಡಮನಿ, ಪ್ರಕಾಶ ಸಿದ್ದಪ್ಪನವರ, ಪ್ರವೀಣ ಬೆಳಗಾಂವಕರ, ನಿಂಗರಾಜ ಅದರಕಂಡಿ, ಸಂಜು ಯಲ್ಲಾಪುರ, ರೆಹಮಾನ ನಿಚ್ಚನಿಕಿ ಹಾಗೂ ಹಲವಾರು ಪದಾಧಿಕಾರಿಗಳು ಪಾಲ್ಗೊಂಡಿದ್ದರು..
