ಔರಾದ ತಾಲೂಕಿನ ಸಂತಪೂರ ಅನುಭವಮಂಟಪದಲ್ಲಿ ೮೭ನೆಯ ತಿಂಗಳ ಅನುಭವಮಂಟಪ ಕಾರ್ಯಕ್ರಮ ಜರುಗಿತು. ದಿವ್ಯಸಾನಿಧ್ಯ ವಹಿಸಿ, ಬಸವಾದಿ ಶರಣರ ತತ್ವಾದರ್ಶಗಳನ್ನು ಆಚರಣೆಯಲ್ಲಿ ತಂದರೆ ಬದುಕು ಸಮೃದ್ಧವಾಗುತ್ತದೆ. ಶರಣರು ನಮಗೆ ಸಹಜ ಆಚರಣೆಯ ಮಾರ್ಗ ತೋರಿದ್ದಾರೆ. ಆಡಂಬರ, ಡಂಬಾಚಾರದ ಭಕ್ತಿಯಿಂದ ಪರಮಾತ್ಮ ಒಲಿವುದಿಲ್ಲ. ೧೨ನೇ ಶತಮಾನದಲ್ಲಿ ಒಕ್ಕಲಿಗ ಕಾಯಕ ಮಾಡುವ ಮುದ್ದಣ್ಣ ತಮ್ಮ ವಚನದಲ್ಲಿ ಬಹು ಸುಂದರ ಮಾತನ್ನು ಹೇಳುತ್ತಾರೆ. `ಅಂಗವೇ ಭೂಮಿಯಾಗಿ, ಲಿಂಗವೇ ಬೆಳೆಯಾಗಿ, ವಿಶ್ವಾಸವೆಂಬ ಭತ್ತ ಒಲಿದು ಉಂಡು ಸುಖಿಯಾಗಬೇಕೆಂದ ಕಾಮಭೀಮಜೀವಧನದೊಡೆಯ’ ನಮ್ಮ ಅಂಗವೆ ಭೂಮಿಯಾಗಬೇಕು. ಅಂಗವೆAಬ ಭೂಮಿಯಲ್ಲಿ ಲಿಂಗವೆAಬ ಬೆಳೆ ಬೆಳೆಸುವ ವಿಧಾನ ಶರಣ ಒಕ್ಕಲಿಗ ಮುದ್ದಣ್ಣ ಹೇಳುತ್ತಾರೆ. ನಾವು ವಿಶ್ವಾಸವಿಟ್ಟು ಕಾರ್ಯ ಮಾಡಿದರೆ ಅದನ್ನು ಪೂರ್ತಿಯಾಗುತ್ತದೆ. ಜೀವನದಲ್ಲಿ ಸುಖ-ದುಃಖಗಳು ಬರುತ್ತವೆ. ಅದನ್ನು ಸಮಾನ ಮನಸ್ಥಿತಿಯಿಂದ ಸ್ವೀಕರಿಸಬೇಕು ಅಂದಾಗಲೇ ನಮ್ಮ ಜೀವನ ಸುಖಿಯಾಗುತ್ತದೆ. ಬಸವತತ್ವದ ಆಚರಣೆ ಬದುಕಿನಲ್ಲಿ ಅಳವಡಿಸಿಕೊಂಡಾಗ ನಮ್ಮ ಬದುಕು ಸಮೃದ್ಧವಾಗುತ್ತದೆ ಎಂದು ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಆಶೀರ್ವಚನ ನೀಡಿದರು.
ಸೋಮಶೇಖರ ಬಿರಾದಾರ ಅವರು ಸಮಾರಂಭ ಉದ್ಘಾಟಿಸಿದರು. ವಿಜಯಕುಮಾರ ಪಾಟೀಲ, ಡಾ.ಪ್ರವೀಣ ಬ್ಯಾಳೆ ತಮ್ಮ ಅನುಭವ ಹಂಚಿಕೊಂಡರು. ಪಂಢರಿ ಆಡೆ, ಸುನೀಲ ಕಸ್ತೂರೆ, ಓಂಕಾರ ಬ್ಯಾಳೆ, ಗಣೇಶ ಬ್ಯಾಳೆ ಮುಂತಾದ ಸಾಧಕರಿಗೆ ವಿಶೇಷ ಸನ್ಮಾನ ನೆರವೇರಿತು. ಬಸವರಾಜ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಲಾವಣ್ಯ ಸೋಮಶೇಖರ ಬಿರಾದಾರ ಭಕ್ತಿದಾಸೋಹ ನೆರವೇರಿಸಿದರು. ಶಿವಕುಮಾರ ಹಿರೇಮಠ ಸ್ವಾಗತಿಸಿದರು. ಸಂಗಮೇಶ ಬ್ಯಾಳೆ ನಿರೂಪಿಸಿದರು. ಶಿವಕಾಂತ ಸ್ವಾಮಿ ಶರಣು ಸಮರ್ಪಣೆ ಮಾಡಿದರು.
ಸರಕಾರ ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಸೂರ್ಯಕಾಂತ ಸೇರಿದಂತೆ ಅನೇಕರಿದ್ದರು.
ಹಾವಗಿರಾವ ಶೆಂಬೆಳ್ಳಿ, ಗೋವಿಂದರೆಡ್ಡಿ, ಬಸವರಾಜ ಪಾಟೀಲ, ನಾಗಶೆಟ್ಟಿ ಬಿಜಲವಾಡೆ, ವಿಜಯಕುಮಾರ ನಿಟ್ಟೂರೆ ಅವರಿಂದ ವಚನ ಸಂಗೀತ ಜರುಗಿತು.
ವರದಿ : ರಾಚಯ್ಯ ಸ್ವಾಮಿ