ಬಾದಾಮಿ ಬನಶಂಕರಿದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಹಂಪಿ ಶ್ರೀ ಗಾಯತ್ರಿ ಪೀಠದಿಂದ ಶ್ರೀ ಬನಶಂಕರಿ ಕ್ಷೇತ್ರಕ್ಕೆ ಪಲ್ಲಕ್ಕಿಯೊಂದಿಗೆ ಪಾದಯಾತ್ರೆ ಮೂಲಕ ಶ್ರೀ ಬನಶಂಕರಿ ದೇವಿಗೆ ಪೀತಾಂಬರ ಸೀರೆ ಸಮರ್ಪಣೆಯ ಮೆರವಣಿಗೆಯೂ ಗುಡೂರ ಗ್ರಾಮದಲ್ಲಿ ಅದ್ದೂರಿಯಾಗಿ ನಡೆಯಿತು.
ಗುಡೂರ ಎಸ್ ಸಿ ಗ್ರಾಮದ ಶ್ರೀ ಬನಶಂಕರಿ ದೇವಾಲಯದಲ್ಲಿ ಬೆಳಗಿನ ಜಾವ ಶ್ರೀ ಬನಶಂಕರಿ ದೇವಿಗೆ ಅಭಿಷೇಕ ಮಾಡಿ ಆಭರಣಗಳನ್ನು ಹಾಕಿ ಮಹಾ ಮಂಗಳಾರತಿ ಮಾಡಲಾಯಿತು. ನಂತರ ಪೀತಾಂಬರ ಸೀರೆಯನ್ನು ಹೊತ್ತ ಪಲ್ಲಕ್ಕಿಯ ಮೆರವಣಿಗೆಯೂ ಹಂಪಿ ಹೇಮಕೂಟ ಗಾಯತ್ರಿ ಪೀಠದ ಪೂಜ್ಯರಾದ ಶ್ರೀ ದಯಾನಂದಪುರಿ ಸ್ವಾಮಿಜಿ ನೇತೃತ್ವದಲ್ಲಿ ಸಾಗಿತು.
ಪಿತಾಂಬರ ಸೀರೆ ಸಮರ್ಪಣೆ ಕಾರ್ಯ ದೇವಾಂಗ ಸಮಾಜದ ಕುಲದೇವತೆ ನಾಡಿನ ಶಕ್ತಿ ಸ್ವರೂಪಿಣಿ ಶ್ರೀ ಬನಶಂಕರಿ ದೇವಿಗೆ ಬನದಹುಣ್ಣಿಮೆಯೆಂದು ದೇವಾಂಗ ಸಮಾಜದ ಮೂಲ ಕುಲಕಸಬಿನ ವೃತ್ತಿ, ಕಾಯಕ ನೇಕಾರಿಕೆಯಾಗಿದ್ದರಿಂದ ಸೇವಾ ರೂಪದಲ್ಲಿ ತಿಂಗಳುಗಳ ಕಾಲ ಮಡಿಯಿಂದ ನೈದ ಪೀತಾಂಬರ ಸೀರೆಯನ್ನು ಬನದಹುಣ್ಣಿಮೆಯಂದು ಸಮರ್ಪಿಸಿ ಸದ್ಭಕ್ತರನ್ನು ಕರುಣಿಸು ಎಂದು ಪ್ರಾರ್ಥಿಸಲಾಗುತ್ತದೆ.
ಶ್ರೀ ಮಳಿಯಪ್ಪಜ್ಜನ ದೇವಸ್ಥಾನದಿಂದ ಹೋರಟ ಪಾದಯಾತ್ರೆ ಮೆರವಣಿಗೆ ಬಸ್ ನಿಲ್ದಾಣ., ಪೋಲಿಸ್ ಹೋರ ಠಾಣೆ., ಶ್ರೀ ಹುಲ್ಲೇಶ್ವರ ದೇವಾಲಯ., ನಾಗಪ್ಪನ ಕಟ್ಟಿ., ವಿಜಯ ಮಾಂತೇಶ್ವರ ಬ್ಯಾಂಕ್., ಕಾಯಿಪಲ್ಯ ಮಾರುಕಟ್ಟೆ., ಮಾಬುಸಾಬನ ಕಟ್ಟೆಯ ಮಾರ್ಗವಾಗಿ ಶ್ರೀ ಬನಶಂಕರಿ ದೇವಿ ದೇವಾಲಯ ತಲುಪಿತು. ನಂತರ ದೇವಾಂಗ ಸಮಾಜದ ವತಿಯಿಂದ ಭಕ್ತರು ಹಾಗೂ ಪಾದಯಾತ್ರಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು ಮೆರವಣಿಗೆಯೂದ್ದಕ್ಕೂ ಜಯ ಘೋಷಣೆ ಮೊಳಗಿತು. ಆರತಿ ಹಾಗು ಕುಂಬ ಹೊತ್ತ ಮಹಿಳೆಯರು ಮೆರವಣಿಗೆಗೆ ಸಾಕ್ಷಿಯಾಯಿತು.
ಶ್ರೀ ಬನಶಂಕರಿ ದೇವಿ ಜಾತ್ರೆಗಾಗಿ ವಿವಿಧ ಭಾಗದಿಂದ ಭಕ್ತರು ಪಾದಯಾತ್ರೆ ಮೂಲಕ ಸಂಚರಿಸುತಿದ್ದು., ಇಲ್ಲಿ ಮಕ್ಕಳಿಂದ ವೃದ್ಧರವರೆಗೂ ಸಾವಿರಾರು ಜನರು ಪಾದಯಾತ್ರೆಯಲ್ಲಿ ಭಾಗಿಯಾಗುತ್ತಾರೆ. ಗುಡೂರ ಎಸ್ ಸಿ ಗ್ರಾಮದ ಮಾರ್ಗವಾಗಿ ಸಂಚರಿಸುವ ಪಾದಯಾತ್ರಿಗಳಿಗೆ ಮಧ್ಯಅಲ್ಲಲ್ಲಿ ಗ್ರಾಮದ ಭಕ್ತರಿಂದ ಪಾದಯಾತ್ರಿಗಳಿಗೆ ಉಚಿತ ಪ್ರಸಾದ., ತಂಪು ಪಾನಕ., ವಿಶ್ರಾಂತಿ ಕೊಠಡಿ., ಸಿಹಿ ವಿತರಣೆಯ ವ್ಯವಸ್ಥೆಯನ್ನು ಮಾಡಲಾಗಿತ್ತು.
ಶ್ರೀ ಬನಶಂಕರಿ ದೇವಿ ಕ್ಷೇಮಾಭಿವೃದ್ಧಿ ಸಂಘ., ಶ್ರೀ ದೇವಲ ಮಹರ್ಷಿ ತರುಣ ಸಂಘ., ಬನಶ್ರೀ ಮಹಿಳಾ ಸಂಘ ಸೇರಿದಂತೆ ಮಹಿಳೆಯರು ಯುವಕರು ಸದ್ಭಕ್ತರು ಇತರರಿದ್ದರು.
ವರದಿ : ಎಂ.ಡಿ ಸೊಹೆಲ್ ಬೈರಕದಾರ್