ಅಪ್ಪ…, ಅಪ್ಪನ ತ್ಯಾಗದ ಹಿಂದೆ ನಮ್ಮ ಬದುಕು ಅಪ್ಪನ ಶ್ರಮದ ಹಿಂದೆ ನಮ್ಮ ಗೆಲುವು,ಅಪ್ಪನ ಕಷ್ಟಗಳ ಹಿಂದೆ ನಮ್ಮ ಸುಖ ಅಪ್ಪನ ನೋವುಗಳ ಹಿಂದೆ ನಮ್ಮ ಸಂತೋಷ,
ಅಪ್ಪನ ಬೆವರಿನ ಹನಿಗಳು ಹಿಂದೆ ನಮ್ಮ ಬೆಳವಣಿಗೆ ಅಪ್ಪನ ಉಪವಾಸದ ಹಿಂದೆ ನಮ್ಮ ಹೊಟ್ಟೆಗೆ ಅನ್ನ,
ಅಪ್ಪನ ಸೂಡುವ ಬಿಸಿಲಿನ ಕೆಲಸದ ಹಿಂದೆ ನಮ್ಮ ಸುಖದ ಜೀವನ,ನೋವಿನಲ್ಲೂ ಹೇಳಿಕೊಳ್ಳರದ ಅಪ್ಪ ನಮ್ಮಗೆ ನೆರಳು, ತನಗೆ ಊಟ ಸಿಗದೇ ಇದ್ದರೂ ನಮ್ಮ ಹೊಟ್ಟೆ ತುಂಬಿಸುವ ಅಪ್ಪ…,,
ಅಪ್ಪ ಅಪ್ಪ ಅಪ್ಪ ಅಪ್ಪನ ಬಗ್ಗೆ ಸಾಲುಗಳು ಸಾಲದು,
ತನಗೆ ನೋವುಗಳಾದರು ಹೇಳಿಕೊಳ್ಳದ ಅಪ್ಪ ನಮ್ಮ ತಪ್ಪುಗಳು ತನ್ನ ಮೇಲೆ ಹಾಕಿಕೊಂಡು ಜನರ ಮುಂದೆ ಅವಮಾನಕ್ಕೆ ಗುರಿಯಾಗುವ ಅಪ್ಪ….,
ನನ್ನ ಉಸಿರು ನಿಂತರು ಮಕ್ಕಳನ್ನು ಜ್ವಾಪನದ ಗುಡಿಯಲ್ಲಿ ಇಡುವ, ಸುಖದ ಸರಮಾಲೆ ನಮ್ಮ ಕೊರಳಿಗೆ ಹಾಕುವ ಜೀವಮಾನವೆಲ್ಲ ನನ್ನ ಮಕ್ಕಳು ಸುಖವಾಗಿರಲು ಬಯಸಿ ತನ್ನನ್ನು ತಾನೇ ಕಷ್ಟ ದುಃಖ ನೋವಲ್ಲಿ, ಆರೋಗ್ಯವನ್ನು ಕಾಪಾಡಿಕೊಳ್ಳದೆ ಜೀವನ ಪರ‍್ಯಂತ ದುಡಿದು ಮಕ್ಕಳಿಗೆ ಎಲ್ಲಾ ತರಹದ ವವ್ಯಸ್ತೆ ಮಾಡುವ ಅಪ್ಪ… ನಿನ್ನ ತ್ಯಾಗಕ್ಕೆ ನಮ್ಮ ನುಡಿ ಸಾಲದು ಸಾಲದು…,
ಬೆಳಿಗ್ಗೆ ಎದ್ದು ಬರಿಗೈಯಿಂದ ಹೊಟ್ಟೆಗೆ ಅನ್ನ ಇಲ್ಲದೆ ಮೈಲ್ ದೂರ ನಡೆದುಕೊಂಡು ಹೋಗಿ, ಪಡ ಪಡನೇ ಬಡೆಯುವ ಬಿಸಿಲಿನಲ್ಲಿ ತನ್ನ ದೇಹಕ್ಕೆ ಲೆಕ್ಕಿಸದೆ ತಲೆಗೆ ಮೆದುಳಿಗೆ ಸೂರ್ಯದಯವಾಗಿ ಮುಳುಗುವವರೆಗೂ ದಿನವೆಲ್ಲಾ ಬೆಂಕಿ ಸೂರ್ಯನ ಕಿರಣ ತನ್ನ ಮೈಮೇಲೆ ಕಳೆದುಕೊಂಡು, ಕೆಲಸ ಮಾಡಿ ತನ್ನ ಮಕ್ಕಳಿಗೆ ಸಂಜೆ ಏನಾದರೂ ಸಿಹಿ ಮನೆಗೆ ಒಯಬೇಕು ಎನ್ನುವ ಒಂದೇ ಚಲ ಇಟ್ಟುಕೊಂಡು, ಕೊಲಿ ಮಾಡಿ ದುಡ್ಡುದು ಒಯುವ ಅಪ್ಪ ,
ಮಕ್ಕಳಿಗೆ ಆಟಗಾರ ಕಲೆಗಾರ ಗೂಡಿನ ಹಕ್ಕಿಗಾರ ತನ್ನ ರೆಕ್ಕೆಯಲ್ಲಿ ಮುಚ್ಚಿಕೊಳ್ಳುವ ಬೆಟ್ಟ ಗುಡ್ಡ ಕಿಂತ ದೊಡ್ಡ ರೆಕ್ಕೆಯಾಗಿ ನೆರಳು ಕೂಡುವ ಅಪ್ಪ,,, ಅಪ್ಪನ ಬಗ್ಗೆ ಪದಗಳೇ ಇಲ್ಲಾ..,
ಕಣ್ಣಲ್ಲಿ ನೀರು ಬಂದರೂ ಮರೆಮಾಡಿಕೊಂಡು ಮನಸಲ್ಲಿ ನೋವು ಇಟ್ಕೊಂಡು ಮುಖದಮೇಲೆ ಸಂತೋಷದ ಜೊತೆಗೆ ಸಂಸಾರ ಮಾಡುವ ಅಪ್ಪ ನಿನ್ನ ತ್ಯಾಗಕ್ಕೆ ಏನೆಂದು ಹೇಳಬೇಕು…,
ಗಾಯವಾದರು ನೋವನ್ನು ತಾಳಿ ನಾನು ಕೂತು ಬಿದ್ದರೆ ಕುಟುಂಬಕ್ಕೆ ಯಾರು ನೋಡೋರಿಲ್ಲ ಎಂದು ಯೋಚನೆ ಮಾಡಿ ಗಾಯವಾದ ನೋವನ್ನು ಗಾಯ ಸ್ವಸ್ತಮಾಡಿಕೊಳ್ಳದೆ ದುಡಿಯಲು ಹೊರಟ ನೀವು ನಿಮ್ಮ ಬಲಿದಾನಕ್ಕೆ ಎಸ್ಟು ಪದಗಳು ಬಳಿಸಿದರೂ ಸಾಲದು ಅಪ್ಪ…,ತಾಯಿಯ ಗರ್ಭದಿಂದ ಬಂದಮೇಲೆ ತನ್ನ ಕಣ್ಣಿಂದ ಇಡೀ ಜಗತ್ತನ್ನೇ ತೋರಿಸಿದ ನೀನು, ನನಗೆ ಜೀವದಾನ ನೀಡಿರುವ ಭಿಕ್ಷೆ ಅಪ್ಪ ಅದನ್ನು ಹೇಗೆ ಮರಿಯಲಿ.
ನಾನು ನನ್ನ ಸುಖಕ್ಕಾಗಿ ನನ್ನ ಎಲ್ಲಾ ಆಸೆಗಳನ್ನು ಪೂರ್ತಿಗೊಳ್ಳಿಸಿಕೊಳ್ಳಲ್ಲೂ, ಅಪ್ಪ ನಿನಗೆ ಹಗಲಿರುಳು ರಾತ್ರಿ ಎನ್ನದೆ ಕೆಲಸ ಮಾಡಲು ಹೋಗು ಎಂದ್ದವನು ನಾನು, ಒತ್ತಾಯ ಮಾಡಿದವನು ನಾನು, ನನಗೆ ಕರುಣೆನೆ ಬರಲಿಲ್ಲವೆ ಅಪ್ಪ ಈ ತಪ್ಪಿಗೆ ನೀನು ಕೂಡುವ ಶಿಕ್ಷೆಗೆ ನನ್ನ ಒಪ್ಪಿಗೆ ಅಪ್ಪ.
ನಾನು ನನ್ನ ಸ್ನೇಹಿತರ ಜೊತೆ ಹೊರಗಡೆ ಹೋಗಲು ನಿನ್ನ ಹತ್ರ ಹಣ ಕೇಳಿದಾಗ ತನ್ನ ಹತ್ರ ಇಲ್ಲದಿದ್ದರೂ ಬೇರೆಯವರ ಹತ್ರ ಸಾಲ ಮಾಡಿ ತಂದು ಕೊಟ್ಟವನು ನೀನು ಅಪ್ಪ… ನಾನು ಹೆಂತ ಸ್ವರ್ತಿಯಾದೆ ಅಪ್ಪ ಇಂತಹ ನನ್ನ ತಪ್ಪಿಗೆ ನಿನ್ನ ಮೌನವೇಕೆ ಅಪ್ಪ…
ನಾನು ಕೆಲಸ ಮಾಡದೆ ಮನೆಯಲ್ಲಿ ಗೆಳೆಯರ ಜೊತೆ ದಿನ ನಿತ್ಯ ನೀನು ಗಳಿಸಿದ ಹಣವನ್ನು ಲೆಕ್ಕವಿಲ್ಲದ ಹೊರಗಡೆ ಹೋಗಿ ಪುಗಸಟ್ಟೆ ಓಡಾಡಿಕೊಂಡು ದುಡ್ಡು ಖರ್ಚು ಮಾಡಿದೆ,
ಒಂದು ಮಾತು ಬೈಯದೆ ಮೌನವಾಗಿ ಉಳಿದೆ ಆ ದಿನಗಳು ಮನಸಿಗೆ ತುಂಬಾ ನೋವುಂಟ ಮಾಡಿತ್ತು ಅಪ್ಪ,
ಯಾಕೆ ನೀನು ನನಗೆ ಹೊಡೆಯಲಿಲ್ಲ ಬೈಯಲಿಲ್ಲ..ಯಾವುದಕ್ಕೂ ಒಂದು ಮಾತು ಆಡದೆ ನಿನ್ನ ಜೀವಮಾನವೆಲ್ಲೇ ಪ್ರತಿಯೊಂದಕ್ಕೂ ನಮ್ಮನ್ನು ಎತ್ತಿಕೊಂಡು ಸುಖದಲ್ಲಿ ಕಳೆದಿರುವ ದಿನಗಳು ಈಗ ನೆನಪಾಯಿತು ಅಪ್ಪ,
ನಮಗೆ ದೇವರು ನೀನೆ ಅಪ್ಪ. ನನಗೆ ತಾಯಿ ನೀನೆ ತಂದೆ ನೀನೆ ಅಪ್ಪ.
ನನ್ನಗೆ ಜೀವ ನೀನೆ ಅಪ್ಪಾ. ನನಗೆ ಬದುಕುವುದು ಕಲಿಸಿ ಕೊಟ್ಟವನು ನೀನೇ ಅಪ್ಪಾ.
ನಾನು ಸಾಯಲು ಬಯಸಿದ್ದಾಗ ನಿನ್ನ ಕಷ್ಟಕಾಲದ ದಿನಗಳು ನನಗೆ ತಿಳಿಸಿ ಧೈರ್ಯ ತುಂಬಿ ಮತ್ತೆ ಬದುಕಲು ಕಲಿಸಿಕೊಟ್ಟವನು ನೀನೇ ಅಪ್ಪಾ. ಸಾವಿರ ಸಾವಿರ ಲಕ್ಷ ಪದಗಳಿಂದ ನಿನ್ನ ಬಗ್ಗೆ ಹೊಗಳಿದರು ಕಮ್ಮಿಯಿಲ್ಲ ಅಪ್ಪಾ.. ಇಡೀ ದಿನ ತಿಂಗಳು ಸಾಲದು ಅಪ್ಪ ನಿನ್ನು ನಮಗೋಸ್ಕರ ಮಾಡಿದ ತ್ಯಾಗದ ಬಗ್ಗೆ ಹೇಳಿಕೊಳ್ಳಕ್ಕೆ. ಹೇಳಲು ಬಹಳ, ಆದರೆ ಇದರಲ್ಲಿ ಮಕ್ಕಳ ಕೊಡುಗೆ ಏನು ಬರಿ (೦), ತಾಯಿ ತಂದೆಯೇ ನಮ್ಮ ದೇವರು ದೇವರಿಗೆ ನಮ್ಮ ಸರ‍್ಪಣೆ ಯಾವಾಗಲೂ ನೀಡಬೇಕು. ತಂದೆಯ ದೇವರು ತಾಯಿ ನಮ್ಮ ಮಡಿಲು ಮರೆಯಲಾಗದ ಅವರ ತ್ಯಾಗ ಎಂದೆಂದಿಗೂ ಅಮರ ಅಮರ.
ಬರಹಗಾರರು :- ಪ್ರದೀಪ್ ಕುಮಾರ್ ದಾದಾನೂರ್ ಬೀದರ್.