ಎಬಿವಿಪಿಯಿಂದ ತಿರಂಗ ಯಾತ್ರೆ, ಪಟ್ಟಣದಲ್ಲೆಡೆ ರಾರಾಜಿಸಿದ ತಿರಂಗ ಧ್ವಜ

ಔರಾದ್ : ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸ ಹಾಗೂ ವ್ಯಕ್ತಿಗಳ ಚರಿತ್ರೆಗಳ ಕುರಿತು ಯುವ ಜನತೆ ಅರಿತುಕೊಳ್ಳಬೇಕೆಂದು ಎಬಿವಿಪಿಯ ವಕ್ತಾರ ಈಶ್ವರ ರುಮ್ಮಾ ಹೇಳಿದರು.

 

ಪಟ್ಟಣದಲ್ಲಿ ಸ್ವಾಮಿ ವಿವೇಕಾನಂದರ ಹಾಗೂ ಸುಭಾಷ್ ಚಂದ್ರ ಬೋಸ್ ಅವರ ಜಯಂತೋತ್ಸವದ ನಿಮಿತ್ತ ಶುಕ್ರವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಏರ್ಪಡಿಸಿದ ಎಬಿವಿಪಿಯಿಂದ ನಡೆದ ತಿರಂಗ ಯಾತ್ರೆಯಲ್ಲಿ ಮಾತನಾಡಿದರು.

 

ಭಾರತದ ಸ್ವಾತಂತ್ರ್ಯ ಯಜ್ಞದಲ್ಲಿ ಸಮಿಧೆಯಂತೆ ಉರಿದುಹೋದ ಅದೃಶ್ಯ ವ್ಯಕ್ತಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರು, ಹೋರಾಟ, ಆದರ್ಶಪ್ರಾಯದ ಜೀವನದ ಗುರಿ ಮತ್ತು ಉದ್ಧೇಶ, ಮಿಗಲಾಗಿ ಈ ದೇಶಕ್ಕಾಗಿ ಶ್ರಮಿಸಿರುವದು ಇತಿಹಾಸದ ಪುಟಗಳಲ್ಲಿದೆ ಎಂದರು.

 

ಸ್ವಾತಂತ್ರ್ಯಕ್ಕಾಗಿ ಅನೇಕ ಹೋರಾಟಗಾರರು ಪ್ರಾಣ ತ್ಯಾಗ ಮಾಡಿದ್ದಾರೆ. ತ್ಯಾಗ-ಬಲಿದಾನದಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಹೀಗಾಗಿ ಇಂಥ ಸಂದರ್ಭದಲ್ಲಿ ಹುತಾತ್ಮರನ್ನು ಸ್ಮರಿಸುವುದು ಪ್ರತಿಯೊಬ್ಬರ ಭಾರತೀಯನ ಕರ್ತವ್ಯ ಎಂದರು.

 

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೇಮಂತ ಮಾತನಾಡಿ, ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ವಿಚಾರಧಾರೆಯನ್ನು ತುಂಬುವ ಕಾರ್ಯ ಎಬಿವಿಪಿ ಮಾಡಿಕೊಂಡು ಬರುತ್ತಿದೆ. ನಮ್ಮ ದೇಶ, ನಮ್ಮ ದೇಶದ ಧ್ವಜಕ್ಕೆ ಗೌರವ ಸೂಚಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ರಾಷ್ಟ್ರೀಯತೆಯನ್ನು ಬೆಳೆಸಿಕೊಳ್ಳಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಬಲಿದಾನಗೈದ ವ್ಯಕ್ತಿಗಳನ್ನು ಸ್ಮರಿಸಿಕೊಳ್ಳಬೇಕು. ದೇಶ ಮೊದಲು ಎನ್ನುವ ಸಂಕಲ್ಪವನ್ನು ಮಾಡಬೇಕು ಎಂದರು.

ಹಣೇಗಾಂವ ಶ್ರೀಗಳಾದ ಶಂಕರಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಬಸವ ಸೇವಾ ಸಮಿತಿಯ ಧನರಾಜ ರಾಗಾ ತಿರಂಗಾ ಯಾತ್ರೆಗೆ ಚಾಲನೆ ನೀಡಿದರು.

 

ಪಟ್ಟಣದ ಸರಕಾರಿ ಆಸ್ಪತ್ರೆಯಿಂದ ಆರಂಭವಾದ ತಿರಂಗಾ ಯತ್ರೆ ಬಸ್ ನಿಲ್ದಾಣ, ತಾಪಂ ಕಚೇರಿ ಸೇರಿದಂತೆ ಮುಖ್ಯ ರಸ್ತೆಯ ಮಾರ್ಗವಾಗಿ ಕನ್ನಡಾಂಬೆ ವೃತ್ತದವರೆಗೆ ನಡೆಯಿತು.

 

ಪ್ರಮುಖರಾದ ಯುವ ಮುಖಂಡ ಗೌರವ ದೇಶಮುಖ, ನಗರ ಕಾರ್ಯದರ್ಶಿ ನಿತಿನ, ನಗರ ಅಧ್ಯಕ್ಷ ಡಿ ಡಿ ಬೊಳೆಗಾವೆ, ಹಿರಿಯರಾದ ಹಾವಪ್ಪ ದ್ಯಾಡೆ,ಅಶೋಕ ಶೇಂಬೆಳ್ಳಿ, ಅಂಬಾದಾಸ ನೇಳಗೆ, ಬಸವರಾಜ ಹಳ್ಳೆ , ವಿ ಎಚ್ ಪಿ ಅಧ್ಯಕ್ಷ ರಾಜಕುಮಾರ ನಾಯ್ಕ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಬಿರಾದಾರ, ಎಸ್ಸಿ ಎಸ್ಟಿ ನೌಕರ ಸಂಘದ ಅಧ್ಯಕ್ಷ ರಾಜಕುಮಾರ ಡೊಂಗರೆ, ಅನೀಲ ಕತ್ತೆ, ದೇವಿದಾಸ, ಗಿರಿ, ಜಿಲ್ಲಾ ಸಂಚಾಲಕರಾದ ಶಶಿಕಾಂತ ರಾಕಲೆ ,ನಗರ ಕಾರ್ಯದರ್ಶಿ ನಿತಿನ್, ಸ್ನೇಹ ಕಾಳಗಪೂರೆ ಇಂದ್ರಾಯಣಿ ಸಗರ,ದೀಪಕ ಹಿರೇಮಠ ,ಸಂಗಮೇಶ ದ್ಯಾಡೆ, ಸೇರಿದಂತೆ ಶಾಲಾ ಕಾಲೇಜಿನ ಪ್ರಾಂಶುಪಾಲರು ಉಪನ್ಯಾಸಕರು ಹಾಗೂ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡರು. ಶಿವಶರಣ ಚಾಂಬೊಳ ಸ್ವಾಗತಿಸಿದರು.

 

ವರದಿ : ರಾಚಯ್ಯ ಸ್ವಾಮಿ

error: Content is protected !!