ಚಡಚಣ: ಸಮೀಪದ ಬರಡೋಲ ಗ್ರಾಮ ಪಂಚಾಯ್ತಿ ವತಿಯಿಂದ ಗ್ರಾಮದಲ್ಲಿ ಬುಧವಾರ ಆಯೋಜಿಸಲಾದ ವಿಶೇಷ ಗ್ರಾಮ ಸಭೆಯಲ್ಲಿ ಸರ್ಕಾರದ 400 ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಗ್ರಾಮಸ್ಥರ ಒಪ್ಪಗೆ ಮೇರೆಗೆ ಹಂಚಿಕೆ ಮಾಡಲಾಯಿತು.
ಪ್ರಸ್ತಾವಿಕವಾಗಿ ಮಾತನಾಡಿದ ಪಿಡಿಓ ಶ್ರೀಕಾಂತ ಅಂಬಿಗೇರ,ಸರ್ಕಾರ ಬಸವ ವಸತಿ ಯೋಜನೆಯಡಿ 2024-25 ನೇ ಸಾಲಿನ ಹೆಚ್ಚುವರಿಯಾಗಿ 278 ಮನೆಗಳನ್ನು ಮಂಜೂರು ಮಾಡಿದ್ದು,ಅದರಲ್ಲಿ 248 ಸಾಮನ್ಯ ಫಲಾನುಭವಿಗಳು ಹಾಗೂ 30 ಮನೆಗಳನ್ನು ಅಲ್ಪ ಸಂಖ್ಯಾತರಿಗೆ ಮೀಸಲಿರಿಸಲಾಗಿದೆ.ಅಂಬೇಡ್ಕರ್ ವಸತಿ ಯೋಜನೆಯಡಿ 122 ಮನೆಗಳು ಮಂಜೂರಾಗಿದ್ದು,ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ 101 ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 21 ಮನೆಗಳನ್ನು ಮಂಜೂರು ಮಾಡಿದೆ.ಸರ್ಕಾರ ಆದೇಶದನುಗುಣವಾಗಿ ಗ್ರಾಮ ಸಭೆಯಲ್ಲಿ ಮನೆ ಹಂಚಿಕೆ ಮಾಡಲಾಗುವದು ಎಂದು ತಿಳಿಸಿದರು
ನೋಡಲ್ ಅಧಿಕಾರಿ ಎಂ.ಎಸ್.ಗಂಗನಳ್ಳಿ ಮಾತನಾಡಿ,ಗ್ರಾಮ ಸಭೆಯ ಕುರಿತು ಮುಂಚಿತವಾಗಿ ಸಾರ್ವಜನಿಕರಿಗೆ ಮಾಹಿತಿ ನೀಲಾಗಿದೆ,ಸರ್ಕಾರದ ಯೋಜನೆಗಳನ್ನು ಸದುಪಯೋಪಡಿಸಿಕೊಂಡು ಗುಡಿಸಲು ಮುಕ್ತ ಗ್ರಾಮವನ್ನಾಗಿಸಲು ಸಾರ್ವಜನಿಕರು ಸಹಕರಿಸಬೇಕು ಎಂದ ಅವರು,ಅರ್ಹ ಫಲಾನುಭವಿಗಳ ಆಯ್ಕೆಗೆ ಗ್ರಾಮಸ್ಥರು ಸಹಕರಿಸುವಂತೆ ಮನವಿ ಮಾಡಿದರು.
ಗ್ರಾಮ ಸಭೆಯಲ್ಲಿ ಸುಧಿರ್ಘ ಚರ್ಚೆಯ ನಂತರ ಬಡವರು,ಹಿಂದುಳಿದವರು ಹಾಗೂ ಅಲ್ಪ ಸಂಖ್ಯಾತರಿಗೆ ಗ್ರಾಮಸ್ಥರ ಸರ್ವ ಸಮ್ಮತ ಒಪ್ಪಗೆಯ ಮೇರೆಗೆ ಮನೆ ಹಂಚಿಕೆ ಮಾಡಲಾಯಾತು.
ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಾಪುರಾಯ ಬಿರಾದಾರ ವಹಿಸಿದ್ದರು.ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಚಾಂದಬಿಬಿ ಬಡಿಗೇರ, ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ,ಲಾಲಸಾಬ ಬಡಿಗೇರ,ಶಿವರಾಯಗೌಡ ಬಿರಾದಾರ,ಸುರೇಶ ಪಟ್ಟಣಶೆಟ್ಟಿ,ಪಾಂಡುರಂಗ ಬಜಂತ್ರಿ ಸೇರಿದಂತೆ ಗ್ರಾಮ ಪಂಚಾಯ್ತಿ ಸದಸ್ಯರು ಇದ್ದರು.
ಈ ಗ್ರಾಮ ಸಭೆಯಲ್ಲಿ ಬರಡೋಲ,ವಿಠ್ಠಲ ನಗರ ಹಾಗೂ ಗೋಡಿಹಾಳ ಗ್ರಾಮಗಳ ಗ್ರಾಮಸ್ಥರು,ಮಹಿಳೆಯರು ಸಹಶ್ರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ರವಿ ಚೌಹಾಣ್