ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣಾ ಮೂರ್ತಿ ಸ್ಥಾಪನೆಗೆ ಸ್ಥಳ ಮಂಜೂರು ಮಾಡಲು ಸಂಗೊಳ್ಳಿ ರಾಯಣ್ಣ ಅಭಿಮಾನಿಗಳಿಂದ ಆಗ್ರಹ ತಹಸೀಲ್ದಾರ್ ಗೆ ಮನವಿ

ಹುಮನಾಬಾದ : ನಗರದಲ್ಲಿ ಸಂಗೊಳ್ಳಿ ರಾಯಣ್ಣ ಅಭಿಮಾನಿ ಗಳು ಬೊಮ್ಮಗೊಂಡೇಶ್ವರ ದೇವಸ್ಥಾನದಿಂದ ಜೈಘೋಷ ಕೂಗುತ್ತಾ ತಹಸೀಲ್ದಾರ್ ಕಚೇರಿಗೆ ತೆರಳಿ ದೇಶದ ಸ್ವಾತಂತ್ರ್ಯಕ್ಕಾಗಿ ಅವಿರಥ ಹೋರಾಟವನ್ನು ಮಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನೆ ಮುಡುಪ್ಪಾಗಿಟ್ಟು ವೀರ ಮರಣವನ್ನು ಹೊಂದಿರುವ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡುವುದು ನಾಡಿನ ಸಮಸ್ತ ಜನತೆಯ ಗೌರವ ಹೆಚ್ಚುಸುತ್ತದೆ.

ಮೂರ್ತಿ ನಿರ್ಮಾಣ ಮಾಡುವುದು ಅತ್ಯಂತ ಅವಶ್ಯಕವಾಗಿದ್ದು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣಾ ಮೂರ್ತಿ ಸ್ಥಾಪನೆ ಮಾಡಲು ಸ್ಥಳ ಮಂಜೂರು ಮಾಡಬೇಕೆಂದು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣಾ ಅಭಿಮಾನಿ ಗಳು ಆಗ್ರಹಿಸಿ ಹುಮನಾಬಾದ ತಹಸಿಲ್ದಾರ ರವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಅಶೋಕ್ ಚಳಕಾಪುರೆ, ಆನಂದ ಖಂಡಗೊಂಡ, ಪಂಡಿತ್ ಬಾವಗಿ, ಮಲ್ಲಿಕಾರ್ಜುನ ಮೊಳಕೆರಾ, ವಿನಾಯಕ ಮಣಕೊಜಿ, ಪವನ್ ಗೊಂಡ, ಉಮೇಶ್ ದಾಡಗಿ, ಅನಿಲ್ ದೊಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.