ಪವಿತ್ರ ಪ್ರವಾದಿ ರವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ರಾಮಗಿರಿ ಮಹಾರಾಜ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಪ್ರವಾದಿ ಮೊಹ್ಮದ ಪೈಗಂಬರರು ಇಡೀ ಜಗತ್ತಿಗೆ ಶಾಂತಿಯ ಸಂದೇಶ ಸಾರಿದವರು ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಮಹಾರಾಷ್ಟ್ರದ ರಾಮಗೀರಿ ಮಹಾರಾಜ ಎಂಬ ಸ್ವಾಮಿಯ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ತಹಶೀಲ್ದಾರ ಮುಖಾಂತರ ಅಂಜುಮನ್ ಇಸ್ಲಾಂ ಕಮೀಟಿ ಮತ್ತು ತಾಲೂಕಿನ ವಿವಿಧ ಜನಪರ ಸಂಘಟನೆಗಳಿಂದ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

 

ಇದೆ ಸಂಧರ್ಭದಲ್ಲಿ ಕೋಲ್ಕತ್ತಾದ ಆರ್.ಜಿ.ಕರ್ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕರ್ತವ್ಯ ನಿರತ ಯುವ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಮನವಿ ಸಲ್ಲಿಸಲಾಯಿತು.

 

ಶುಕ್ರವಾರ ನಮಾಜ್ ನಂತರ ಮಳೆಯನ್ನು ಲೆಕ್ಕಿಸಿದೆ ರಾಮದುರ್ಗ ಪಟ್ಟಣದಲ್ಲಿ ಜನರು ಪಟ್ಟಣದ ಜಾಮಿಯಾ ಮಸೀದಿಯಿಂದ ಡಾ ಬಿ ಆರ್ ಅಂಬೇಡ್ಕರ ಮಾರ್ಗವಾಗಿ ಪ್ರತಿಭಟನೆ ಮುಖಾಂತರ ತಹಶೀಲ್ದಾರ ಕಛೇರಿಗೆ ತಲುಪಿ ಮನವಿ ಸಲ್ಲಿಸಿದರು.

 

ಭಾರತ ದೇಶದಲ್ಲಿ ಹಲವಾರು ಜಾತಿಗಳು, ಧರ್ಮಗಳು ಇದ್ದರೂ ಎಲ್ಲ ಧರ್ಮಗಳು ಹೇಳುವುದು ಒಂದೇ! ನಾವೇಲ್ಲರೂ ಸಹೋದರರು, ಶಾಂತಿ ಸಹಬಾಳ್ವೆಯಿಂದ ಬಾಳೋಣ ಎಂದು ಎಲ್ಲ ಧರ್ಮಗಳು, ಧರ್ಮಗಳು ಗ್ರಂಥಗಳು ಹೇಳುತ್ತಿವೆ ಆದರೆ ಮಹಾರಾಷ್ಟ್ರದ ಒಬ್ಬ ಮತಾಂದ, ಧಾರ್ಮಿಕ ವ್ಯಕ್ತಿ ಇನ್ನೊಂದು ಧರ್ಮದ ಮೇಲೆ ಅಪಮಾನ ಮಾಡುವ ರೀತಿ ಸರಿಯಾದ ಕ್ರಮವಲ್ಲ. ಈ ರೀತಿಯ ಘಟನೆಗಳನ್ನು ಉದ್ಭವಿಸುವ ಕೃತ್ಯಗಳನ್ನು ನಾವು ಖಂಡಿಸುತ್ತೇವೆ.

 

ಮಹಾರಾಷ್ಟ್ರದ ರಾಮಗಿರಿ ಮಹಾರಾಜ ಎನ್ನುವ ಒಬ್ಬ ಅವಿವೇಕಿ ವ್ಯಕ್ತಿ ಇಸ್ಲಾಂ ಧರ್ಮದ ಗುರುಗಳಾದ ಪ್ರವಾದಿ ಮೊಹ್ಮದ ಪೈಗಂಬರ್ ಅವರನ್ನು ಅವಹೇಳನಕಾರಿಯಾಗಿ ಮಾತನಾಡಿದ್ದಲ್ಲದೇ ಕೆಟ್ಟ ಕಾಮೆಂಟಗಳನ್ನು ಮಾಡಿದ್ದು ಇಡೀ ದೇಶವೇ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ. ಈಗಾಗಲೇ ಈ ಕೃತ್ಯವನ್ನು ಖಂಡಿಸಿ ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರ ಜನತೆ ಖಂಡಿಸಿದ್ದಾರೆ. ಆದರೂ ಮಹಾರಾಷ್ಟ್ರದ ಅಡಳಿತವು ಆಕ್ಷೇಪಾರ್ಹ ಹೇಳಿಕೆ ನೀಡಿದ ನೀಚ ವ್ಯಕ್ತಿ ರಾಮಗೀರಿ ಮಹಾರಾಜನನ್ನು ಬಂಧಿಸಿಲ್ಲ.

 

ಈ ರೀತಿಯ ಘಟನೆಗಳು ನಡೆದರೆ ಏನಾಗುತ್ತದೆ ಅನ್ನುವ ಪರಿಕಲ್ಪನೆಯು ಇಲ್ಲದ ವ್ಯಕ್ತಿಗಳು ತಮ್ಮ ಬೆಳೆ ಬೇಯಿಸಿಕೊಳ್ಳಲು ಬೇರೆಯವರನ್ನು ಬಲಿ ಕೊಡುತ್ತಿದ್ದಾರೆ. ಆದ್ದರಿಂದ ಪ್ರವಾದಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಮಹಾರಾಷ್ಟ್ರದ ರಾಮಗೀರಿ ಮಹಾರಾಜನನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ಗುರಿಪಡಿಸಿ ಇಂತಹ ಘಟನೆಗಳು ನಡೆಯದಂತೆ ಮಹಾರಾಷ್ಟ್ರ ಸರಕಾರಕ್ಕೆ ಎಚ್ಚರಿಕೆ ನೀಡಬೇಕೆಂದು ಮನವಿ ಸಲ್ಲಿಸಲಾಯಿತು.

 

ಈ ಸಂಧರ್ಭ ಅಂಜುಮನ್ ಇಸ್ಲಾಂ ಕಮೀಟಿ ಅಧ್ಯಕ್ಷ ಶಬ್ಬೀರ ಖಾಜಿ, ಉಪಾಧ್ಯಕ್ಷ ಫೈರೋಜ್ ಪಠಾನ್ , ಶಫಿ ಬೆನ್ನಿ, ಡೊಂಗ್ರಿಸಾಬ ಕಡಪೆ , ಬಶೀರ ಅಹ್ಮದ ಭೈರಕದಾರ,   ಕಾರ್ಮಿಕ ಮುಖಂಡ  ನಾಗಪ್ಪ ಸಂಗೊಳ್ಳಿ, ಗೈಬುಸಾಬ ಜೈನೆಖಾನ,  ಜನಪರ ಟ್ರಸ್ಟ್ ಅಧ್ಯಕ್ಷ ಸುಭಾಷ್ ಗೋಡಕೆ, ಶಫಿ ಸುರಕೋಡ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.

 

 

Md ಸೋಹಿಲ್ ಭೈರಕದಾರ ಜೆಕೆ ನ್ಯೂಸ್ ಕನ್ನಡ ರಾಮದುರ್ಗ