ಔರಾದ್ : ತಾಲೂಕಿನ ಸಂತಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಸಯ್ಯ ಸ್ವಾಮಿ ಅವರನ್ನು ಭಾರತೀಯ ಬಸವ ಬಳಗದಿಂದ ಭಾನುವಾರ ಸತ್ಕರಿಸಲಾಯಿತು.
ಯಾದಗಿರಿ ಡಿಎಚ್ಒ ಡಾ. ಮಹೇಶ ಬಿರಾದಾರ್ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ರೈತರ ಅಭಿವೃದ್ಧಿಗಾಗಿ ಸ್ವಾಮಿ ಅವರು ಸೇವೆ ಸಲ್ಲಿಸಲಿದ್ದಾರೆ. ರೈತರು ಸ್ವಾಮಿ ಅವರೊಂದಿಗೆ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ಭಾರತೀಯ ಬಸವ ಬಳಗದ ಜಿಲ್ಲಾಧ್ಯಕ್ಷ ಡಾ. ಸಂಜೀವಕುಮಾರ ಜುಮ್ಮಾ ಮಾತನಾಡಿ, ಬಸಯ್ಯ ಸ್ವಾಮಿ ಅವರು ಸರಳ ವ್ಯಕ್ತಿಯಾಗಿದ್ದಾರೆ. ಪಿಕೆಪಿಎಸ್ ಅಧ್ಯಕ್ಷರಾಗಿರುವುದು ಈ ಭಾಗದ ರೈತರ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಮುಖರಾದ ವಿದ್ಯಾಸಾಗರ ಬ್ಯಾಳೆ, ಸುಭಾಷ್ ಗೋರನಾಳೆ, ಸುನಿಲ ಪಾಟೀಲ್, ಪ್ರಕಾಶ್ ಬ್ಯಾಳೆ, ಡಾ ಸಂಗಮೇಶ ಬಾಬುರಾವ, ನಾಸಿಗೆರ್, ಪುಟ್ಟು ಪಾಟೀಲ್ ಸೇರಿದಂತೆ ಅನೇಕರಿದ್ದರು.