ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿರಾದಾರಗೆ ಗ್ರಾಮಸ್ಥರ ಸತ್ಕಾರ
ಔರಾದ್ : ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್ (ಪಿಎಲ್‍ಡಿ) ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ತೇಗಂಪೂರ ಗ್ರಾಮದ ನಿವಾಸಿ ರಘುನಾಥ ಬಿರಾದಾರ್ ಅವರನ್ನು ಗ್ರಾಮಸ್ಥರು ಸೋಮವಾರ ಸತ್ಕರಿಸಿದ್ದಾರೆ. ಸತ್ಕಾರ ಸ್ವೀಕರಿಸಿ ಮಾತನಾಡಿ ಬಿರಾದಾರ್, ನನ್ನ ರಾಜಕೀಯ ಗ್ರಾಮ ಪಂಚಾಯತಿಯ ಸದಸ್ಯನ ಮೂಲಕ ಆರಂಭಗೊಂಡಿತು. ಗ್ರಾಪಂ ಆದ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ನಂತರ ಮೂರು ಬಾರಿ ಪಿಎಲ್‍ಡಿ ಬ್ಯಾಂಕ್ ನಿರ್ದೇಶಕನಾಗಿ ಆಯ್ಕೆಯಾಗಿದ್ದು, ಎರಡನೇ ಅವಧಿಗೆ ಅಧ್ಯಕ್ಷನಾಗಿ ಸೇವೆ ಮಾಡುವ ಅವಕಾಶ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸುಧೀರ್ಘ ಸಕ್ರಿಯ ರಾಜಕಾರಣದ ಜೊತೆಗೆ ವಿವಿಧ ಅವಧಿಯಲ್ಲಿ ಬ್ಯಾಂಕ್ ನಿರ್ದೇಶಕನಾಗಿ 10 ವರ್ಷ ಕಾಲ ಸೇವೆ ಮಾಡಿದ್ದೇನೆ. ಎಲ್ಲ ನಿರ್ದೇಶಕ ಬೆಂಬಲದಿಂದ ಎರಡನೇ ಬಾರಿ ಅಧ್ಯಕ್ಷನಾಗಿದ್ದು, ಈಗ ಎಲ್ಲಾ ನಿರ್ದೇಶಕರು ನನ್ನ ಮೇಲೆ ವಿಶ್ವಾಸ ಇಟ್ಟು ಅಧ್ಯಕ್ಷನಾಗುವ ಅವಕಾಶ ಮಾಡಿದ್ದಾರೆ. ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ವಹಿಸಿಕೊಂಡಿರುವುದು ಸಂತಸ ತಂದಿದೆ’ ಎಂದರು.
ಪಿಎಲ್‍ಡಿ ಬ್ಯಾಂಕ್ ತಾಲೂಕಿನ ರೈತರಿಗೆ ಬೇಡಿಕೆ ಅನುಸಾರ ಬೆಳೆಸಾಲ, ಕೃಷಿ ಯಂತ್ರೋಪಕರಣ, ಜಮೀನು ಅಭಿವೃದ್ಧಿ ಸೇರಿ ಹಲವು ಉದ್ದೇಶಗಳಿಗೆ ಸಾಲ ನೀಡುತ್ತಾ ಬರುತ್ತಿದೆ. ಇದರಿಂದ ಬ್ಯಾಂಕ್‍ನೊಂದಿಗೆ ತಾಲೂಕಿನ ರೈತರ ಉತ್ತಮ ಬಾಂಧವ್ಯವಿದೆ. ಸಾಲ ಮರುಪಾವತಿ ಸಕಾಲದಲ್ಲಿ ಮಾಡಲು ಜಾಗೃತಿ ಮೂಡಿಸಲಾಗಿದೆ. ಬಾಕಿ ಸಾಲವನ್ನು ವಸೂಲಿ ಮಾಡುವ ಪ್ರಕ್ರಿಯೆ ನಿರಂತರವಾಗಿ ನಡೆದುಕೊಂಡು ಬಂದಿದೆ. ಬ್ಯಾಂಕ್ ಉತ್ತಮ ಮೂಲಸೌಲಭ್ಯ ಹೊಂದಿದೆ. ಸಾಲ ಸೌಲಭ್ಯದ ಜತೆಗೆ ಇ-ಸ್ಟಾಂಪ್ ಸೇವೆ ನೀಡಲಾಗುತ್ತಿತ್ತು. ಬ್ಯಾಂಕ್ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.
ಎಲ್ಲರಿಗಾಗಿ ನಾನು; ನನಗಾಗಿ ಎಲ್ಲರೂ. ಇದು ಸಹಕಾರ ತತ್ವದ ಮುಖ್ಯ ಸಂದೇಶ. ಇಂತಹ ಶ್ರೇಷ್ಠ ತತ್ವದ ಬುನಾದಿಯ ಮೇಲೆ ಸಹಕಾರ ಕ್ಷೇತ್ರ ಕಟ್ಟಲಾಗಿದೆ ಎಂದರು.
ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಪತ್ರಕರ್ತ ಚನ್ನಬಸವ ಮೊಕ್ತೆದಾರ್, ಶಿವರಾಜ ಮೊಕ್ತೆದಾರ್, ಕಿರಣ ಪಾಟೀಲ್, ನಾಗೇಶ ಮೊಕ್ತೆದಾರ್ ಸೇರಿದಂತೆ ಅನೇಕರಿದ್ದರು.
ಸತ್ಕಾರ : ನೂತನ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾದ ರಘುನಾಥ ಬಿರಾದಾರ್ ಅವರನ್ನು ಗ್ರಾಮದ ಪ್ರಮುಖರಾದ ಸಂಗಪ್ಪ ಮೊಕ್ತೆದಾರ್, ಶಿವರಾಯ ಬಿರಾದಾರ್, ಮಲ್ಲಿಕಾರ್ಜುನ ಮೊಕ್ತೆದಾರ್, ಸಂಗಪ್ಪ ಚಿಟಮೇ, ಗುರುನಾಥ ಬಿರಾದಾರ್, ಧನರಾಜ ಚಿಟಮೇ, ಮಲ್ಲಿಕಾರ್ಜುನ ಚಿಟಮೇ ಸತ್ಕರಿಸಿದರು.
ವರದಿ : ರಾಚಯ್ಯ ಸ್ವಾಮಿ