ಘಟಪ್ರಭಾ ನಗರದ ಶ್ರೀ ಎಸ್ ಡಿ ಟಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಎಸ್ ಡಿ ಟಿ ಬಾಲಕಿಯರ ಪ್ರೌಢಶಾಲೆ ಘಟಪ್ರಭಾ ದಲ್ಲಿ ನಡೆದ 2024- 25ನೇ ಶೈಕ್ಷಣಿಕ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ನೆರವೇರಿತು. ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ:- ಶ್ರೀ ಮ,ನಿ,ಪ್ರ,ಸ್ವ, ಗುರು ಬಸವಲಿಂಗ ಮಹಾಸ್ವಾಮಿಗಳು ಅರಭಾವಿ ಮಠ. ಮುಖ್ಯ ಅತಿಥಿಗಳು:-ಶ್ರೀ ಅಪ್ಪಯ್ಯಪ್ಪ ಶಿ ಬಡಕುಂದ್ರಿ. ವಿಶೇಷ ಅತಿಥಿಗಳು:-ಡಾ. ಮೋಹನ್ ಬೆಸ್ಮೆ, ತಾಲೂಕ ತಂಡಾಧಿಕಾರಿಗಳು ಗೋಕಾಕ್.ಶ್ರೀ ಸಂಜೀವ್ ಸಂಸುದ್ದಿ,RFO ಸವದತ್ತಿ.ಶ್ರೀ ಗಂಗಾಧರ್ ಬಡಕುಂದ್ರಿ ವಕೀಲರು. ಶ್ರೀ ಯು ಎ ಮರೆಪ್ಪಗೋಳ. ಪ್ರಾಚಾರ್ಯರು,ಶ್ರೀ ಜೆ ಸಿ ಮಠಪತಿ. ಮುಖ್ಯೋಪಾಧ್ಯಾಯರು,ಶ್ರೀ ಬಿ ಆರ್ ವಾಲಿಕಾರ. ಮುಖ್ಯೋಪಾಧ್ಯಾಯರು, ಉಪಸ್ಥಿದ್ದರು. ಸತ್ಕಾರ ಮೂರ್ತಿಗಳು:-ಡಾ.ಜಿ ಎ ಪತ್ತಾರ ಹಾಗೂ ಎಸ್ ಡಿ ಟಿ ರತ್ನ ಗಳಿಗೆ ಸತ್ಕಾರ ಸಮಾರಂಭ ನೆರವೇರಿತ್ತು. ಈ ಸಂದರ್ಭದಲ್ಲಿ ನನ್ನ ಸಮಾಜಸೇವೆಯನ್ನು ಗುರುತಿಸಿ ನನಗೆ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರಲ್ ಅಕಾಡೆಮಿ ತಮಿಳುನಾಡು ಅವರು” ಗೌರವ ಡಾಕ್ಟರೇಟ್ ” ಪದವಿ ನೀಡಿದ್ದಕ್ಕೆ ಮತ್ತು ನಾನು ಇದೆ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿಯಾಗಿದ್ದನ್ನು ಗುರುತಿಸಿ, ಈ ಸಂದರ್ಭದಲ್ಲಿ ನನ್ನನ್ನು ಸತ್ಕರ್ಷಿ ಸನ್ಮಾನಿಸಿದರು. ನನಗೆ ಸತ್ಕರಿಸಿ, ಸನ್ಮಾನಿಸಿದ ಪೂಜ್ಯ ಸ್ವಾಮೀಜಿಯವರು, ಹಾಗೂ ಮುಖ್ಯ ಅತಿಥಿಗಳು ,ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಿಗೂ ಹಾಗೂ ಸಂಸ್ಥೆಯ ಎಲ್ಲಾ ಗುರುವ್ರಂದಕ್ಕೂಮತ್ತು ಸಿಬ್ಬಂದಿ ವರ್ಗಕ್ಕೂ ಹಾಗೂ ವಿದ್ಯಾರ್ಥಿಗಳಿಗೂ, ಕಾರ್ಯಕ್ರಮಕ್ಕೆ ಆಗಮಿಸಿದ ಸಮಸ್ತ ಜನರಿಗೂ,ಪಾಲಕರಿಗೂ ಪತ್ರಕರ್ತರಿಗೂ ,ಅನಂತ ಅನಂತ್ ಧನ್ಯವಾದಗಳನ್ನು ತಿಳಿಸಿದರು.
ವರದಿ ಸದಾನಂದ್ ಎಚ್