ಹುಮನಾಬಾದ್ : ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಬೀದರ್ ಜಿಲ್ಲೆಯ ಬ್ರಾಂಚ್ ಪದಾಧಿಕಾರಿಗಳು ಮತ್ತು ವಿಧಾನಸಭಾ ಕ್ಷೇತ್ರ ಸಮಿತಿಯ ನಾಯಕರುಗಳಿಗೆ ಆಯೋಜಿಸಿದ್ದ ಒಂದು ದಿನದ ಲೀಡ್ – 1 ನಾಯಕತ್ವ ತರಬೇತಿ ಶಿಬಿರ ಯಶಸ್ವಿಯಾಗಿ ಜರುಗಿತು.
ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಪ್ರದಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ರವರು ರಾಜಕೀಯವಾಗಿ ಮೂಲೆಗುಂಪಾಗಿರುವ ಹಕ್ಕು ವಂಚಿತ ಸಮುದಾಯಗಳ ಸಬಲೀಕರಣಕ್ಕಾಗಿ ಸಮರ್ಪಣೆ ಮತ್ತು ತ್ಯಾಗಮಯೀ ಬದುಕನ್ನು ಅಳವಡಿಸಿಕೊಂಡಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಾದ ಶೋಷಿತ ಸಮುದಾಯಗಳು ಸ್ವತಂತ್ರ ರಾಜ್ಯಾಧಿಕಾರ ಪಡೆಯಬಹುದು, ಅದುವೇ ಒಬ್ಬ ರಾಜಕೀಯ ನಾಯಕನ ಆದರ್ಶ ಗುಣಗಳು ಎಂದು ಅಭಿಪ್ರಾಯಪಟ್ಟರು.
ಶಿಬಿರದಲ್ಲಿ ರಾಷ್ಟ್ರೀಯ ಸಮಿತಿ ಸದಸ್ಯೆ ಪ್ರಫೇಸರ್ ಸೈಯೀದಾ ಸಾದಿಯಾ, ರಾಜ್ಯ ಪ್ರದಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಅಪ್ಸರ್ ಕೊಡ್ಲಿಪೇಟೆ, ರಾಜ್ಯ ಸಮಿತಿ ಸದಸ್ಯರಾದ ಫಯಾಜ್ ದಾವಣಗೆರೆ ರವರು ವಿವಿಧ ವಿಷಯಗಳಲ್ಲಿ ತರಬೇತಿ ನೀಡಿದರು.
ಶಿಬಿರದಲ್ಲಿ ಜಿಲ್ಲಾಧ್ಯಕ್ಷರಾದ ಸೈಯದ್ ಮಕ್ಸೂದ್, ಜಿಲ್ಲಾ ಉಪಾಧ್ಯಕ್ಷರಾದ ಮಹೆಬೂಬ್ ಸದರ್ ಸಾಬ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇರ್ಫಾನ್, ಜಿಲ್ಲಾ ಕೋಶಾಧಿಕಾರಿ ಅಯ್ಯೂಬ್, ಜಿಲ್ಲಾ ಕಾರ್ಯದರ್ಶಿಗಳಾದ ಸೈಯದ್ ಅಕ್ಬರ್, ಶೈಖ್ ಇರ್ಫಾನ್, ಸದಸ್ಯರುಗಳಾದ ಸೈಯದ್ ತೌಹೀದ್ ಖಾದ್ರಿ ಸೈಯದ್ ಇಬ್ರಾಹಿಂ , ಮೊಹಮ್ಮದ್ ಮೊಹ್ಸಿನ್ ಮತ್ತು ಮುಖಂಡರುಗಳು ಉಪಸ್ಥಿತರಿದ್ದರು.