ವಿಜಯಪುರ : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿರುವ ಪ್ರದೀಪ ಭಿಸೇ ರವರು ಇಂಡಿ ನಗರ ಠಾಣೆಯ ಪೊಲೀಸ್ ನಿರೀಕ್ಷಕರಾಗಿ ವರ್ಗಾವಣೆ ಆಗಿದ್ದಾರೆ.
ಈ ಮುಂಚೆ ಗದಗ ಮಹಿಳಾ ಪೊಲೀಸ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ. ಇಂದು ಇಂಡಿ ಠಾಣೆಗೆ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಅಧಿಕಾರವನ್ನು ಸ್ವೀಕರಿಸಿದ್ದಾರೆ.
ರಾಜ್ಯದಲ್ಲಿ ಯಾವತ್ತೂ ಸದ್ದಿನಲ್ಲಿರುವದೇ ವಿಜಯಪುರ ಜಿಲ್ಲೆಯ ಭೀಮ ತೀರ,
ಈ ಭೀಮತೀರಕ್ಕೆ ಖಡಕ್ ಹಾಗೂ ಜನಸ್ನೇಹಿ, ಮತ್ತು ದಕ್ಷ ಅಧಿಕಾರಿ ಬಂದಿರುವದು ಜನರಲ್ಲಿ ಉಲ್ಲಾಸ, ಉತ್ಸಾಹ ಮತ್ತು ಸಂತಸವನ್ನ ಮೂಡಿಸಿದೆ.
ಅದೇ ರೀತಿ ಭೀಮಾ ತೀರದ ರೌಡಿಗಳಿಗೂ ಸಹ ನಡುಕ ಶುರುವಾಗಿದೆ. ಈ ಹಿಂದೆ ಇವರು ಕಾರ್ಯ ನಿರ್ವಹಿಸಿದ ಕಡೆಗಳಲ್ಲಿ ದಕ್ಷ, ಪ್ರಾಮಾಣಿಕತೆ, ಜನರ ಜೊತೆ ಜನ ಸ್ನೇಹಿಯಾಗಿ ಗುರುತಿಸಿ ಕೊಂಡಿದ್ದಾರೆ, ಮತ್ತು ರೌಡಿಗಳಿಗೆ ಸಿಂಹ ಸ್ವಪ್ನವಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಒಟ್ಟಾರೆ ಇಂತಹ ದಕ್ಷ ಅಧಿಕಾರಿ ಇಂಡಿ ಠಾಣೆಗೆ ಬಂದಿರೋದು ಉತ್ತವಾಗಿದೆ ಎಂದು ಜನರು ಸಂತಸ ವ್ಯಕ್ತ ಪಡಿಸಿದ್ದಾರೆ…
ವರದಿ ಅಜೀಜ ಪಠಾಣ.