ಬೆಳಗಾವಿ : ಬೆಳಗಾವಿಯಲ್ಲಿ ಮರಾಠಿ ಭಾಷೆಯಲ್ಲಿ ಮಾತನಾಡುವಂತೆ ಸರಕಾರಿ ಬಸ್ ನಿರ್ವಾಹಕ ಮಹಾದೇವ್ ಹುಕ್ಕೇರಿ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂದ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಡಾ. ಕೆಂಪಣ್ಣ ಚೌಕಶಿ ಮಾತನಾಡಿ, ಕನ್ನಡದಲ್ಲಿ ಮಾತನಾಡಿದ್ದಕ್ಕೆ ಮತ್ತು ಮರಾಠಿಯಲ್ಲಿ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಮಹಾದೇವ್ ಎಂಬ ನಿರ್ವಾಹಕನ ಮೇಲೆ ಮರಾಠಿ ಪುಂಡರು ಅಮಾನುಷವಾಗಿ ಹಲ್ಲೆ ನಡೆಸಿದ್ದಕ್ಕೆ ನಾವು ಯಾವುದೇ ಕಾರಣಕ್ಕೂ ಇದನ್ನು ನಾವು ಸಹಿಸಿಕೊಳ್ಳುವುದಿಲ್ಲ, ಬೆಳಗಾವಿ ಪೊಲೀಸರು ಮಹಾದೇವ್ ಅವರ ಮೇಲೆ ಹಲ್ಲೆ ನಡೆಸಿದ ಪ್ರತಿಯೊಬ್ಬರನ್ನು ಬಂದಿಸಿ ಇಲ್ಲವಾದಲ್ಲಿ ಇದರ ಪರಿಣಾಮ ಬೀಕರವಾಗುತ್ತದೆ ಎಂದು ಎಚ್ಚರಿಕೆ ನೀಡಿದರು, ರಾಜ್ಯ ಸರ್ಕಾರ ,ಪೊಲೀಸ ಇಲಾಖೆ ಅವರನ್ನು ಗಡಿಪಾರು ಮಾಡಬೇಕು ,ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡುವದೆಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ,ಕರವೇ ಸಂಘಟನೆಯ ಉತ್ತರ ಕರ್ನಾಟಕ ರಾಜ್ಯಾ
ಧ್ಯಕ್ಷರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಅಧ್ಯಕ್ಷರಾದ ಡಾ. ಬಸವರಾಜ್ (ಅಜ್ಜು) ಪಂಜ್ಯಾನಟ್ಟಿ, ಕರವೇ ಹುಕ್ಕೇರಿ ತಾಲೂಕ ಅಧ್ಯಕ್ಷರಾದ ಬೋರಪ್ಪ ಕುಡಜೋಗಿ,ಯುವ ಮುಖಂಡ ಸಂದೇಶ ರಾಜಮಾನೆ ,ಗೋಕಾಕ್ ತಾಲೂಕ ಗೌರವಾಧ್ಯಕ್ಷರಾದ ಮಲ್ಲಿಕಾರ್ಜುನ್ ಪಂಜ್ಯಾನಟ್ಟಿ,ಬೆಳಗಾವಿ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಶಶಿಧರ್ ಚೌಕಶಿ ,ಬಸವರಾಜ್ ಅ ಪಂಜ್ಯಾನಟ್ಟಿ ,ಸುನಿಲ್ ಪಂಜ್ಯಾನಟ್ಟಿ ಮಲ್ಲಪ್ಪ ಅಟ್ಟಿಮಿಟ್ಟಿ ಹಾಗೂ ಅನೇಕ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದರು.
ವರದಿ : ಸದಾನಂದ್