ರಾಜ್ಯದಲ್ಲಿ ಅಕ್ರಮ ಬಡ್ಡಿ ದಂಧೆ ಕೋರರು ನಡೆಸುತ್ತಿರುವ ಮೈಕ್ರೋ ಫೈನಾನ್ಸ್ ಗಳ ಹಾವಳಿ ಮಿತಿಮೀರಿದ್ದು ಇದಕ್ಕೆ ಕಡಿವಾಣ ಹಾಕುವಂತೆ ರಾಜ್ಯ ಸರ್ಕಾರ ಈಗಾಗಲೇ ಸುಗ್ರೀವಾಜ್ಞೆ ಹೊರಡಿಸಿದ್ದು ಆದರೂ ಕೂಡ ಕೆಲವೊಂದಿಷ್ಟು ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ಇಲ್ಲದ ಮೈಕ್ರೋ ಫೈನಾನ್ಸ್ ಗಳು ರಾಜ್ಯದಲ್ಲಿ ಇನ್ನು ಕೂಡ ತಮ್ಮ ಕ್ರೌರ್ಯ ಮೆರೆಯುತ್ತಿವೆ ಜನಸಾಮಾನ್ಯರ ಜೀವದ ಜೊತೆಗೆ ಆಟವಾಡುತ್ತಿರುವ ಆರ್‌ಬಿಐ ಬ್ಯಾಂಕಿನ ಅನುಮತಿ ಇಲ್ಲದ ಸಂಸ್ಥೆಗಳನ್ನು ರದ್ದುಗೊಳಿಸುವಂತೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ರಾಜ್ಯಾಧ್ಯಕ್ಷರಾದ ಚನ್ನಯ್ಯ ವಸ್ತ್ರದ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.