2023 ನೇ ಸಾಲಿನಲ್ಲಿ ಬೀದರ ಜಿಲ್ಲೆಯ ಸಂತಪೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಸಂತಪೂರ ಗ್ರಾಮದಲ್ಲಿ ಘಟನೆ ಜರುಗಿದ್ದು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂ: 93/2023, ಕಲಂ : 4,6,21 ಪೋಕ್ಸೋ ಆಕ್ಟ್ & ಕಲಂ: 376(2) (2), 376(3), 313, 201, 109 ಐ.ಪಿ.ಸಿ ಅಡಿಯಲ್ಲಿ ಅಂದಿನ ಪಿ.ಎಸ್.ಐ ಮೆಹೆಬೂಬ ಅಲಿ ರವರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಪ್ರಕರಣದ ಮುಂದಿನ ತನಿಖೆಯನ್ನು ರಘುವೀರ ಸಿಂಗ್ ಕೆ ಠಾಕೂರ ಸಿ.ಪಿ.ಐ ಔರಾದ(ಬಿ) ವೃತ್ತ ರವರು ವಹಿಸಿಕೊಂಡು ಪ್ರಕರಣದ ತನಿಖೆಯನ್ನು ಅಚ್ಚುಕಟ್ಟಾಗಿ ನಡೆಸಿ ದೊಷರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.
ನ್ಯಾಯಾಲಯದ ಸ್ಪೇಷಲ್.ಸಿ. ಸಂ: 1268/2023 ರಂತೆ ಪ್ರಕರಣದ ಮುಂದಿನ ವಿಚಾರಣೆಯು ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಬೀದರ ದಲ್ಲಿ ಸಂತೋಷ ಕುಮಾರ ತರನಳ್ಳೆ, ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರು ಶಿಸ್ತು ಬದ್ಧವಾಗಿ ವಾದ ಮಂಡಿಸಿದ್ದರಿಂದ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧಿಶರವರಾದ ಸಚೀನ್ ಕೌಶಿಕ್, ಆರ್.ಎನ್ ರವರು ಆರೋಪಿತನಿಗೆ ಜೀವಾವಧಿ ಶಿಕ್ಷೆ ಮತ್ತು 100,000=00 ರೂಪಾಯಿ ದಂಡ ಮತ್ತು ಗರ್ಭಪಾತ ಮಾಡಿದ ವೈದ್ಯ ಗೆ 5 ವರ್ಷ ಕಠಿಣ ಶಿಕ್ಷೆ ಹಾಗೂ 5 ಲಕ್ಷ ದಂಡ ವಿಧಿಸಿ ಆದ್ದೇಶಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಶಿಸ್ತು ಬದ್ದವಾಗಿ ಮಾಡಿ ನ್ಯಾಯಾಲಯಕ್ಕೆ ದೊಷಾರೋಪಣೆ ಪಟ್ಟಿ ಸಲ್ಲಿಸಿದ ರಘುವೀರ ಸಿಂಗ್ ಕೆ ಠಾಕೂರ, ಸಿ.ಪಿ.ಐ ಔರಾದ-ಬಿ ರವರು ಮತ್ತು ತನಿಖೆಗೆ ಸಹಕರಿಸಿದ ತನಿಖಾ ಸಹಾಯಕ ರಾಜಕುಮಾರ ರೆಡ್ಡಿ ಸಿ.ಪಿ.ಐ ಕಛೇರಿ ಔರಾದ-ಬಿ, ಕೋರ್ಟ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ ವಿಠಲ್, ಸಿಹೆಚ್.ಸಿ-766 ಸಂತಪೂರ ಹಾಗೂ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಂತೋಷಕುಮಾರ ತರನಳ್ಳೆ, ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ರವರಿಗೆ
ಆರೋಪಿತನಿಗೆ ಕಠಿಣ ಶಿಕ್ಷೆ ಕೊಡಿಸುವಲ್ಲಿ ಹಾಗೂ ಅಪರಾಧ ಮುಕ್ತ ಜಿಲ್ಲೆಗೊಳಿಸಲು ಶ್ರಮಿಸಿದಕ್ಕೆ
ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರದೀಪ್ ಗುಂಟಿ ಐ.ಪಿ.ಎಸ್ ಅಭಿನಂದಿಸಿದ್ದಾರೆ.
ವರದಿ : ರಾಚಯ್ಯ ಸ್ವಾಮಿ