ಯಮಕನಮರಡಿ: ಸಿದ್ದರಾಮೇಶ್ವರ್ ಶಿಕ್ಷಣ ಸಂಸ್ಥೆಯ ಚಂದ್ರಗಿರಿ ಶಿಕ್ಷಣ ಮಹಾವಿದ್ಯಾಲಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಮಹಿಳಾ ಕಲ್ಯಾಣ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ 3 ದಿನಗಳ ಪೌರತ್ವ ತರಬೇತಿ ಶಿಬಿರವನ್ನು ಶಿಶು ಅಭಿವೃದ್ಧಿ ಜನಾಧಿಕಾರಿ ಹೊಳೆಪ್ಪ ಎಚ್. ಉದ್ಘಾಟಿಸಿದರು ಮಾತನಾಡಿದ ಅವರು “ಶಿಕ್ಷಣ ಅನುವುದು ಹುಲಿ ಹಾಲಿನಂತೆ ಅದನ್ನು ಕುಡಿದವರು ಘರ್ಜಿಸಲೇಬೇಕು” ಎಂಬ ಅಂಬೇಡ್ಕರ್ ಅವರ ಮಾತನ್ನು ಇಟ್ಟುಕೊಂಡು ಕಲಿಕೆಯು ಒಂದು ಆಜೀವ ಪ್ರತಿಕ್ರಿಯೆಯಾಗಿದ್ದು ಅದು ಹುಟ್ಟಿನಿಂದ ಸಾಗುವವರೆಗೂ ಕಲಿಕೆಯು ನಿರಂತರ ಸಂಸ್ಕೃತಿ ಕೊರತೆ ಇದ್ದರೆ ದೇಶ ಉಜ್ವಲ ಭವಿಷ್ಯವನ್ನು ಹೊಂದಲು ಸಾಧ್ಯವಿಲ್ಲ.
ಕಲಿಕೆಯು ನಿರಂತರವಾಗಿರಬೇಕು ಆಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹೊಳೆಪ್ಪ ಎಂ ಹೆಚ್. ಅವರ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದು ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಕಾಶ್ ಹೊಸಮನಿ ಮಾತನಾಡಿ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ಹೆಚ್ಚಿದೆ ಸಮಾಜದಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಎಲ್ಎಸ್ ಪಾಟೀಲ್ ವಹಿಸಿ ಮಾತನಾಡಿದರು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಕಿರಣ್ ಚೌಗುಲ ಚಂದ್ರಗಿರಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಜಯಶ್ರೀ ಕೆಂಗೇರಿ ಸಾವಿತ್ರಿ ಎಲಿಗಾರ್ ಉಪಸ್ಥಿತರಿದ್ದರು.
ವರದಿ : ಸದಾನಂದ ಎಂ