ನಿವೃತ್ತಿಗೊಂಡ ಸಿದ್ದಪ್ಪ ಗೋಡೆಕರ ಹಾಗೂ ನೂತನ NGO ಸದಸ್ಯರಾಗಿ ಆಯ್ಕೆಗೊಂಡ ಮಹಾಂತಗೌಡ ಪಾಟೀಲ ಅವರನ್ನು ಕ್ಲಸ್ಟರ ವತಿಯಿಂದ ಸನ್ಮಾನ

ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಜೇರಟಗಿ ಸಮೂಹ ಸಂಪನ್ಮೂಲ ಕೇಂದ್ರದ ಜೇರಟಗಿ ಶಾಲೆಯಲ್ಲಿ ನಡೆದ ಮುಖ್ಯ ಗುರುಗಳ ಸಭೆಯಲ್ಲಿ ಇತ್ತೀಚ್ಚಿಗೆ ನಿವೃತ್ತಿಗೊಂಡ ಸಿದ್ದಪ್ಪ ಗೋಡೆಕರ ಹಾಗೂ ನೂತನ NGO ಸದಸ್ಯರಾಗಿ ಆಯ್ಕೆಗೊಂಡ ಮಹಾಂತಗೌಡ ಪಾಟೀಲ ಅವರನ್ನು ಕ್ಲಸ್ಟರ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕ್ಲಸ್ಟರ್ CRP ಹಾಗೂ ಎಲ್ಲಾ ಶಾಲೆಯ ಮುಖ್ಯಗುರುಗಳು ಹಾಜರಿದ್ದರು.ಕಾರ್ಯಕ್ರಮವನ್ನು ಶ್ರೀ ರುದ್ರಯ್ಯ ಗಂಗನಹಳ್ಳಿ ಶಿಕ್ಷಕರು ನಿರೂಪಿಸಿ ವಂದಿಸಿದರು.

ವರದಿ : ವಿರೇಶ್ ಮಠ್

error: Content is protected !!