ದೇಶಕ್ಕೆ ಮಾದರಿ ಬಜೆಟ್ ನೀಡಿದ ರಾಜ್ಯ ಕಾಂಗ್ರೆಸ್ ಸರ್ಕಾರ: ಶರಣು ಪಾಟೀಲ

ಮುಖ್ಯಮಂತ್ರಿಗಳು ಮಂಡಿಸಿದ 2025-26ನೇ ಸಾಲಿನ ಬಜೆಟ್ ಕರ್ನಾಟಕ ರಾಜ್ಯವನ್ನು ಇನ್ನಷ್ಟು ಅಭಿವೃದ್ಧಿಯ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುತ್ತಿದೆ.
ಸರ್ವ ಕ್ಷೇತ್ರದ ಅಭಿವೃದ್ಧಿಯ ಚಿಂತನೆಯೊಂದಿಗೆ ಕೂಡಿರುವ ಈ ಆಯ ವ್ಯಯವು ಮತ್ತೊಮ್ಮೆ ರಾಜ್ಯದ ಜನ ಸಿದ್ರಾಮಯ್ಯ ಅವರ ಬಗ್ಗೆ ಮತ್ತಷ್ಟು ಗೌರವ ಕೊಡುವಂತಾಗಿದೆ. ನಮ್ಮ ರಾಜ್ಯವು ಸಾಮಾಜಿಕ ಬಲವರ್ಧನೆಯ ಮೂಲಕ ಆರ್ಥಿಕ ಸುಸ್ಥಿರತೆಯೊಂದಿಗೆ ಸರ್ವಾಂಗೀಣ ಅಭಿವೃದ್ಧಿ ಸಾಧಿಸುವಲ್ಲಿ ಮುನ್ನುಗ್ಗುತ್ತಿದೆ.

ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಹೀಗೆ ಪ್ರತಿ ಕ್ಷೇತ್ರವನ್ನು ಅಧ್ಯಯನ ಮಾಡಿ ಎಲ್ಲಾ ರಂಗಕ್ಕೂ ನ್ಯಾಯ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿ ಯಾವತ್ತೂ ಸರ್ವ ಜನಾಂಗದ ಚಿಂತಕ ಎನ್ನುವದು ಮತ್ತೊಮ್ಮೆ ರಾಜ್ಯಕ್ಕೆ ತೋರಿಸಿ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳ ದೃಷ್ಟಿಕೋನ ದೇಶವಲ್ಲ ಜಾಗತಿಕವಾಗಿಯೂ ಮನ್ನಣೆ ದೊರೆವಂತಿದೆ.

ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಗಳಿಗೆ ಹಣ ಮಿಸಲಿರಿಸಿ, ನೂರಾರು ಹೊಸ ಯೋಜನೆಗಳು ಘೋಷಿಸಿದ್ದು ಸ್ವಾಗತಾರ್ಹ. ಕಲ್ಯಾಣ ಕರ್ನಾಟಕ ಭಾಗದ ಜನರ ನಿರೀಕ್ಷೆಯಂತೆ ಸ್ಪಂದಿಸಿ ನಮ್ಮ ಭಾಗಕ್ಕೆ ಹಲವು ಯೋಜನೆಗಳ ಧಾರೆ ಎರೆದಿದ್ದು ಸಂತೋಷ ಎಂದು ಶರಣು ಪಾಟೀಲ ಮೋತಕಪಲ್ಲಿ, ವಕ್ತಾರರು, ಬ್ಲಾಕ್ ಕಾಂಗ್ರೆಸ್ ಸಮಿತಿ ಚಿಂಚೋಳಿ ಅವರು ತಿಳಿಸಿದ್ದಾರೆ.

ವರದಿ : ರಾಜೇಂದ್ರ ಪ್ರಸಾದ್

error: Content is protected !!