ಡಾ.ಅವಿನಾಶ್ ಜಾಧವ್ ಮೂರು ನಾಲ್ಕು ತಿಂಗಳಿಂದ ಕಾಣೆಯಾಗಿದ್ದು ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ – ರೈತ ಸೇನೆ ಅಧ್ಯಕ್ಷ ವೀರಣ್ಣ ಗಂಗಾಣಿ

ಚಿಂಚೋಳಿ ಕ್ಷೇತ್ರದ ಶಾಸಕರಾದ ಡಾ. ಅವಿನಾಶ್ ಜಾಧವ್ ಸುಮಾರು ಮೂರು ನಾಲ್ಕು ತಿಂಗಳಿಂದ ಕಾಣೆಯಾಗಿದ್ದು, ಚಿಂಚೋಳಿ ವಿಧಾನಸಭೆ ಕ್ಷೇತ್ರದಲ್ಲಿ ಸತತವಾಗಿ ಇರಬೇಕಾಗಿದ್ದು ಚಿಂಚೋಳಿ, ಕಾಳಗಿ, ತಾಲೂಕಿನಲ್ಲಿರುವ ಜಲ್ವಂತ ಸಮಸ್ಯೆಗಳಾದ, ಜನರ ಸಮಸ್ಯೆ, ರೈತರ ಸಮಸ್ಯೆ, ಮೂಲಭೂತ ಸೌಕರ್ಯಗಳ ಕೊರತೆ, ಅಕ್ರಮ ಚಟುವಟಿಕೆ ಕಡಿವಾಣ, ಇನ್ನು ಹಲವಾರು ಸಮಸ್ಯೆಗಳಿದ್ದು, ಸ್ಥಳಿಯವಾಗಿ ಸುಲಭವಾಗಿ ಸೀಗಬೇಕಾದಂತಹ ಶಾಸಕ ಡಾ. ಅವಿನಾಶ ಜಾಧವ ಇರುವುದೇ ಇಲ್ಲಾ! ತಾಲುಕಿನಲ್ಲಿ ಯಾವದೇ ಕೆಲಸಗಳು ನಡೆಯುತ್ತಿಲ್ಲಾ, ಅಭಿವೃದ್ಧಿಯಲ್ಲಿ ಹಿನ್ನಡೆ ಆಗುತ್ತಿದ್ದು,
ಶಾಸಕ ಡಾ. ಅವಿನಾಶ ಜಾಧವ ರವರಿಗೆ ಯಾರಾದರು
ಹುಡುಕಿಕೊಟ್ಟವರಿಗೆ ಬಹುಮಾನ ಕೋಡತ್ತೇನೆ, ಈಗಾಗಲೇ ಬಜೆಟ್ ಅಧಿವೇಶನ ನಡೆಯುತ್ತಿದ್ದು ತಾಲುಕಿನ ಅಭಿವೃದ್ಧಿಗೆ ಹಿನ್ನಡೆಯಾಗಿರುವಂತಹ ಸಮಸ್ಯೆಗಳನ್ನು ಕಲಾಪಗಳಲ್ಲಿ ಪ್ರಶ್ನಿಸಿ ವಿಧಾನಸಭಾ ಕ್ಷೇತ್ರದ ಜನತೆಗೆ ನೆಮ್ಮದಿಯ ಜೀವನ ಮಾಡುವಂತೆ ತಮ್ಮ ಕರ್ತವ್ಯವನ್ನು ಮಾಡಬೇಕು
ಎಂದು ತಾಲೂಕಿನ ರೈತ ಸೇನೆ ಅಧ್ಯಕ್ಷ ವೀರಣ್ಣ ಗಂಗಾಣಿ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ವರದಿ : ರಾಜೇಂದ್ರ ಪ್ರಸಾದ್

error: Content is protected !!