ಶ್ರೀ ವೀರಭದ್ರೇಶ್ವರ ITI ಕಾಲೇಜ್ ಕಲ್ಲೂರು ರಸ್ತೆ ನಲ್ಲಿ ಬೃಹತ್ ಆಪರೆಂಟಿಶಿಪ್ ಮೇಳ

ಪತ್ರಿಕಾ ಪ್ರಕಟಣೆ

ದಿನಾಂಕ 10.3.2025ರಂದು ಬೆಳಗ್ಗೆ 10.30 ಗಂಟೆಗೆ ಹುಮನಾಬಾದಿನ ಪ್ರತಿಷ್ಠಿತ ಕೈಗಾರಿಕಾ ತರಬೇತಿ ಸಂಸ್ಥೆ(ITI) ಯಾದ ಶ್ರೀ ವೀರಭದ್ರೇಶ್ವರ ITI ಕಾಲೇಜ್ ಕಲ್ಲೂರು ರಸ್ತೆ ನಲ್ಲಿ ಬೃಹತ್ ಆಪರೆಂಟಿಶಿಪ್ ಮೇಳವನ್ನು ಆಯೋಜಿಸಲಾಗಿದ್ದು, ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಪ್ಲಾಂಟಿನಲ್ಲಿರುವ ಎಂ ಆರ್ ಎಫ್( MRF) ಲಿಮಿಟೆಡ್ ಕಂಪನಿಯಲ್ಲಿ ಹತ್ತನೇ ತರಗತಿಯಲ್ಲಿ ಪಾಸಾದ,ಐಟಿಐ ಪಾಸಾದ, ಮತ್ತು ಪಿಯುಸಿ ಪಾಸ್ ಅಥವಾ ಫೇಲಾದ ವಿದ್ಯಾರ್ಥಿಗಳಿಗೆ ನೇರ ಸಂದರ್ಶನ ಏರ್ಪಡಿಸಲಾಗಿದೆ. ಪ್ಲಾಂಟ್ ನ ನೇಮಕಾತಿ ವಿಭಾಗದ ಮುಖ್ಯಸ್ಥರು ಆದ ವೆಂಕಟೇಶ್ ರವರು ನೇಮಕ ಮಾಡಿಕೊಳ್ಳಲು ಆಗಮಿಸುತ್ತಿದ್ದು.

ಕಾರ್ಯಕ್ರಮವನ್ನು ಕೈಗಾರಿಕಾ ತರಬೇತಿ ಇಲಾಖೆಯ ವಿಭಾಗೀಯ ಕಚೇರಿಯ ಜಂಟಿ ನಿರ್ದೇಶಕರು ರಾಜೇಶ ಬಾವಗಿ ರವರು ಉದ್ಘಾಟನೆ ಮಾಡಲಿದ್ದು, ಆಸಕ್ತರು ಈ ಮೇಳದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ಪ್ರಾಚಾರ್ಯರಾದ ಶಿವಕುಮಾರ್, ತರಬೇತಿ ಅಧಿಕಾರಿಯಾದ ವಿಶ್ವನಾಥ ವಿ ಬಿರಾದಾರ , ರವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು ದೂರವಾಣಿ ಸಂಖ್ಯೆ:-
9886685 158
90365 40476

error: Content is protected !!