ನಿಪ್ಪಾಣಿ ನಗರದ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಅವರಣರದಲ್ಲಿ ಶ್ರೀ ಬೀರೇಶ್ವರ ಕೋ ಆಫ್ ಕ್ರೆಡಿಟ್ ಸೋಸಾಯಿಟಿ ಲಿ.,ಯಕ್ಸಂಬಾ (ಮಲ್ಟಿ – ಸ್ಟೇಟ್) ಹಾಗೂ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ನಿಯಮಿತ.,(ಬಹು -ರಾಜ್ಯ) ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 04 ರಿಂದ 8 ರವರೆಗೆ 5 ದಿನಗಳ ಕಾಲ ನಡೆಯಲಿರುವ ಬೃಹತ್ “ಕೃಷಿ ಉತ್ಸವ” ಕಾರ್ಯಕ್ರಮದ ಕುರಿತು ಪೂರ್ವಭಾವಿ ಸಭೆ ಹಾಗೂ ಪತ್ರಿಕಾಗೋಷ್ಠಿಯನ್ನು ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಶ್ರೀ. ಬಸವಪ್ರಸಾದ ಜೊಲ್ಲೆ ಯವರು ನಡೆಸಿ ಮಾಹಿತಿ ನೀಡಿದರು.
ಈ ಕೃಷಿ ಉತ್ಸವ 10 ಎಕರೆ ಜಾಗದಲ್ಲಿ 250 ಸ್ಟಾಲ್ ಗಳನ್ನೂ ಒಳಗೊಂಡು ಕೃಷಿ,ಗ್ರಾಹಕರ,ಅಟೋಮೊಬೈಲ್ ವಿವಿಧ ಬಗೆಯ ರೈತರಿಗೆ ಉಪಯೋಗವಾಗುವ ಮಳಿಗೆಗಳು ಇರಲಿವೆ.ಪ್ರತಿದಿನ ಸಾಯಂಕಾಲ ಸಾಂಸ್ಕ್ರತಿಕ ಕಾರ್ಯಕ್ರಮಗಳು ನೆರವೇರಲಿವೆ.
ಈ ಸಂದರ್ಭದಲ್ಲಿ ಬೀರೇಶ್ವರ ಸಂಸ್ಥೆಯ ಅಧ್ಯಕ್ಷರಾದ ಅಪ್ಪಾಸಾಹೇಬ್ ಜೊಲ್ಲೆ, ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಎಂ.ಪಿ.ಪಾಟೀಲ, ಉಪಾಧ್ಯಕ್ಷರಾದ ಪವನ ಪಾಟೀಲ, ನಿರ್ದೇಶಕ ಮಂಡಳಿ ಸದಸ್ಯರು,ಪತ್ರಿಕಾ ಮಾಧ್ಯಮದವರು,ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ/ಸದಾನಂದ.ಎಚ್