ನಿಡಸೋಶಿ ಗ್ರಾಮದ ಎಸ್ ಎನ್ ಜೆ ಪಿ ಎಸ್ ಎನ್ ಎಂ ಎಸ್ ಟ್ರಸ್ತಿನ ಬಿ.ಸಿ.ಎ, ಬಿ. ಕಾಂ, ಮತ್ತು ಬಿ. ಎಸ್ಸಿ ಪದವಿ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಅತಿಥಿಗಳು ಹಾಗೂ ಗಣ್ಯಮಾನ್ಯರು ” “ಸಸಿಗೆ ನೀರೆರೆಯುವ ಮೂಲಕ” ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅತಿಥಿಗಳಾದ ಪದ್ಮಶ್ರೀ ಪುರಸ್ಕೃತೆ ಕಬ್ಬೂರಿನ ಸೀತವ್ವ ಜೋಡಟ್ಟಿಯವರು ಮಾತನಾಡುತ್ತಾ ತೊಟ್ಟಿಲವನ್ನು ತೂಗುವಂತ ಕೈ ಜಗತ್ತನ್ನೇ ಆಳಬಲ್ಲದು ಎಂಥ ಕಠಿಣ ಪರಿಸ್ಥಿತಿಯಲ್ಲೂ ಕೂಡ ಮಹಿಳೆ ಛಲಗಾರಿಕೆಯಿಂದ ಮುಂದೆ ನಡೆದರೆ ತನ್ನ ಪರಿಸರವನ್ನೇ ಬದಲಾಯಿಸಿ ಪ್ರಪಂಚವನ್ನು ಬದಲಾಯಿಸಬಹುದು ಎಂಬ ಮಾತನ್ನು ಹೇಳಿದರು. ಸ್ವತಃ ಅವರು ತನ್ನದೇ ಆದಂತ ಒಂದು ಸಂಸ್ಥೆಯನ್ನು ಸ್ಥಾಪಿಸಿಕೊಂಡು ದೇವದಾಸಿ ಪದ್ಧತಿ ನಿರ್ಮೂಲನೆಯನ್ನು ಮತ್ತು ಹೆಣ್ಣುಮಕ್ಕಳ ಹಾಗೂ ಮಕ್ಕಳ ಮಾರಾಟವನ್ನು ತಡೆಯುವ ಕಾರ್ಯದಲ್ಲಿ ಕ್ರಿಯಾಶೀಲರಾಗಿ ಜೀವನ ನಡೆಸುತ್ತಿದ್ದನ್ನು ಹೇಳಿದರು.
ಇನ್ನೊರ್ವ ಅತಿಥಿಗಳಾದ ವಿಶ್ವಚೇತನ ವಿದ್ಯಾಸಂಸ್ಥೆ ಸಂಕೇಶ್ವರ ಇದರ ಸಂಸ್ಥಾಪಕರು ಹಾಗೂ ಕಾರ್ಯದರ್ಶಿಗಳಾದಂತಹ ಮಹಾದೇವಿ ಕೆ ಪಾಟೀಲ ಅವರು ಮಹಿಳಾ ದಿನಾಚರಣೆಯ ಅಂಗವಾಗಿ ಮಾತನಾಡುತ್ತಾ ಹಿಂದಿನಿಂದಲೂ ಇಂದಿನವರೆಗಿನ ಹಲವಾರು ಸ್ತ್ರೀಯರನ್ನ ಹೆಸರಿಸುತ್ತ ಸಂಸ್ಕಾರವು ತನ್ನ ಜನ್ಮದಿಂದ ಬಂದಿರುತ್ತದೆ ಮಹಿಳೆಯು ಸಂಸ್ಕಾರವಂತರಾಗಿದ್ದರೆ ಅವಳು ಸಮಾಜದಲ್ಲಿ ಒಂದು ಉತ್ತಮ ಸ್ಥಾನವನ್ನು ಗಳಿಸಿ ಈ ಸಮಾಜವನ್ನು ತಿದ್ದುವ ಕಾರ್ಯವನ್ನು ಮಾಡಲು ಅವಳು ಸದೃಢವಾಗಿರುತ್ತಾಳೆ ಎಂಬ ಮಾತನ್ನು ಹೇಳಿದರು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಬಸವರಾಜ ಹಾಲಭಾವಿ ಅವರು ಮಹಿಳೆಯರನ್ನು ಉದ್ದೇಶಿಸಿ ಮಾತನಾಡುತ್ತಾ ಕೇವಲ ಮಹಿಳೆಯು ಸಂಸಾರವನ್ನು ನಿರ್ವಹಿಸುವುದಷ್ಟೇ ಅಲ್ಲದೆ ತನ್ನನ್ನು ತಾನು ಸಮಾಜದಲ್ಲಿ ಗುರುತಿಸಿಕೊಂಡು ಪ್ರತಿಯೊಬ್ಬರಿಗೂ ಸಂಸ್ಕಾರವನ್ನು ಕೊಡುತ್ತಾ ಈ ಸಮಾಜದ ಏಳಿಗೆ ಮತ್ತು ಭದ್ರತೆಯ ಕಾರ್ಯವನ್ನು ಅವಳು ಒಪ್ಪಿಕೊಂಡು ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾಳೆ ಎಂಬ ಮಾತನ್ನು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲ ಉಪನ್ಯಾಸ ಉಪನ್ಯಾಸಕಿಯರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.ಸಹಾಯಕ ಉಪನ್ಯಾಸಕಿ ಯಾದ ಎಸ್ ವ್ಹಿ. ಚೌಗಲಾ ಇವರ ಸ್ವಾಗತ ಭಾಷಣ ಮಾಡಿದರು.
ಬಿ.ಎಸ್ಸಿ. ವಿದ್ಯಾರ್ಥಿನಿಯಾದಂತ ಪ್ರಿಯಾಂಕಾ ಮಡಿವಾಳ ನಿರೂಪಿಸಿದರು ಹಾಗೂ ಸಹಾಯಕಿ ಪ್ರಾಧ್ಯಾಪಕಿಯಾದಂತ ವಿದ್ಯಾ ಪದ್ಮನ್ನವರ ಇವರು ವಂದನಾರ್ಪಣೆಯನ್ನು ಮಾಡಿದರು.
ವರದಿ : ಸದಾನಂದ ಎಚ್