ಟೆಂಗಳಿ ಗ್ರಾಮದಲ್ಲಿ ಪೊಲೀಸರ ಜನಸ್ನೇಹಿ ಕಾರ್ಯಕ್ರಮ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು

ಸಾರ್ವಜನಿಕರ ಸಮಸ್ಯೆ ದೂರು ಆಲಿಸಲು ಪೊಲೀಸ್ ಸಿಬ್ಬಂದಿಯೇ ಮನೆ ಬಾಗಿಲಿಗೆ ಬರುವಂಥ ವಿನೂತನ ಪರಿಕಲ್ಪನೆಯಾದ ಜನ ಸಂಪರ್ಕ ಮತ್ತು ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಟೆಂಗ ಳಿ ಗ್ರಾಮದಲ್ಲಿ ಚಾಲನೆ ನೀಡಲಾಗಿತು.
ಶಹಬಾದ್ ಡಿ ವೈ ಎಸ್ ಪಿ ಶಂಕರ್ ಗೌಡ ಪಾಟೀಲ್ ಮಾತನಾಡಿ ಮನೆ ಬಾಗಿಲಿಗೆ ಪೊಲೀಸರು ಎನ್ನುವ ಪೊಲೀಸರು ಜನಸ್ನೇಹಿ ಕಾರ್ಯಕ್ರಮ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.
ಮನೆ ಮನೆಗೆ ಪೊಲೀಸ್ ಎಂಬುದು ರಾಜ್ಯ ಸರ್ಕಾರದ ವಿನೂತನ ಪರಿಕಲ್ಪನೆ ಕಾರ್ಯಕ್ರಮವಾಗಿದೆ.
ಪೊಲೀಸರಿಂದ ಹೆಚ್ಚಿನ ಸೇವೆ ಈ ಮೂಲಕ ಜನರಡೆಗೆ ತಲುಪಲಿದೆ.
ಸೈಬರ್ ಅಪರಾಧ ಮಾದಕ ವಸ್ತು ಬಾಲಾಪರಾದ ಪೋಕ್ಸೋ ಕಾಯ್ದೆ ಮನೆ ಕಳ್ಳತನ ಸರಕಳತನ ರಸ್ತೆ ಸಂಚಾರ ಮುಂತಾದ ವಿಷಯಗಳ ಬಗ್ಗೆ ಅರಿವು ಮೂಡಿಸಿದರು.ಗ್ರಾಮದಲ್ಲಿ ಕೆಲವು ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ವಿತರಣೆ ಮಾಡಿದರು ಈ ಸಂಧರ್ಭ ದಲ್ಲಿ ಸಿಪಿಐ ಜಗದೇವಪ್ಪ ಪಾಳ, ಪಿಎಸ್ಐ ತಿಮ್ಮಯ್ಯ ಬಿ,ಕೆ ಹಾಗೂ ಪೊಲೀಸ್ ಸಿಬ್ಬಂದಿಗಳು ಉಪ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ : ರಮೇಶ್ ಎಸ್ ಕುಡಹಳ್ಳಿ ಜೆ ಕೆ ಕನ್ನಡ ನ್ಯೂಸ್ ಕಾಳಗಿ

error: Content is protected !!