ರಟಕಲ್: ಫೆ, 10. ವಿರಕ್ತಮಠದ ನಿಯೋಜಿತ ಉತ್ತರಾಧಿಕಾರಿ ಮತ್ತು ಅತಿ ಶೀಘ್ರದಲ್ಲೇ ಮಠದ ಪೀಠಾಧಿಪತಿಗಳು ಆಗುವವರು , ತ್ರಿಕಾಲ ಪೂಜಾ ನಿಷ್ಠರು, ದಾಸೋಹ ಮೂರ್ತಿಗಳು, ಯುವ ಯತಿಗಳಾದ ಪರಮಪೂಜ್ಯ ಶ್ರೀ ನೀಲಕಂಠ ದೇವರ ಜನ್ಮದಿನ, ನಿಮಿತ್ಯ ಶ್ರೀಗಳಿಂದ ಭಗತ ಸಿಂಗ ಕಿರಿಯ ಪ್ರಾಥಮಿಕ ಶಾಲೆಯ ರಟಕಲ್ ಮಕ್ಕಳು ಪೂಜ್ಯರಿಗೆ ಹಾಡುವ ಮೂಲಕ ಹುಟ್ಟು ಹಬ್ಬದ ಶುಭ ಕೋರಿದರು. ಪೂಜರು ಮಕ್ಕಳಿಗೆ ನೋಟ್ ಬುಕ್ ಪೆನ್ ಚಾಕಲೇಟ್ ಕೇಕ್ ವಿತರಣೆಯ ಮೂಲಕ ಜನ್ಮದಿನ ಆಚರಿಸಿಕೊಂಡು ಆಶೀರ್ವದಿಸಿದರು. (ದೊಡ್ಡ ಮಠ ) ಶ್ರೀಮಠದಲ್ಲಿ ಸಾಯಂಕಾಲ 7:00ಗo ಶ್ರೀಗಳಿಗೆ ಜನ್ಮದಿನ ಆಚರಣೆ ದಂದು ಪೂಜ್ಯರ ಭಕ್ತರು ಶ್ರೀ ಮಠದ ಭಕ್ತಾದಿಗಳು ಮಠಕ್ಕೆ ಆಗಮಿಸಿ ಪೂಜ್ಯರಿಗೆ ಹುಟ್ಟು ಹಬ್ಬದ ಶುಭ ಕೋರಿ ಮತ್ತು ಪೂಜ್ಯರ ಆಶೀರ್ವಾದ ಪಡೆದುಕೊಂಡರು. ಜನ್ಮದಿನದ ಕಾರ್ಯಕ್ರಮದ ದಿವ್ಯ ಸಾನಿಧ್ಯ ಪರಮಪೂಜ್ಯ ಶ್ರೀ ಷ, ಬ್ರ, ರೇವಣಸಿದ್ದ ಶಿವಾಚಾರ್ಯರು ರೇವಣಸಿದ್ದೇಶ್ವರ ಹಿರೇಮಠ ರಟಕಲ್. ಪೂಜ್ಯರು ಮಾತನಾಡಿ ಶ್ರೀ ಮಠಕ್ಕೆ ಭಕ್ತರೇ ಶಕ್ತಿ, ಅರ್ಥಪೂರ್ಣವಾಗಿ ಮಕ್ಕಳೊಂದಿಗೆ ನೀಲಕಂಠ ದೇವರು ಜನ್ಮದಿನ ಆಚರಿಸಿಕೊಂಡದ್ದು ಭಕ್ತರಿಗೆ ಪ್ರೇರಣೆ ಇದೇ ರೀತಿ ಶ್ರೀಮಠದ ಕೀರ್ತಿ ಗ್ರಾಮದ ಹೆಸರು ತರಬೇಕು. ಹಾಗೆ ನೂರಾರು ವರ್ಷ ಬಾಳಿ ಬದುಕಿ ಭಕ್ತರಿಗೆ ಪ್ರೇರಣೆಯಾಗಿ ಭಕ್ತರ ಇಷ್ಟಾರ್ಥವನ್ನು ಈಡೇರಿಸುವ ಶಕ್ತಿ ಆ ದೇವರು ನೀಡಲಿ ಎಂದು ನುಡಿದರು. ಶ್ರೀ ರೇವಣಸಿದ್ದ ಶರಣರು ಗೌರಿಗುಡ್ಡರವರು ಮಾತನಾಡಿ ಪೂಜ್ಯ ನೀಲಕಂಠ ದೇವರಿಗೆ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಿ. ಪೂಜ್ಯರು ಮಠದ ಭಕ್ತಾದಿಗಳ ಮೇಲೆ ಅಪಾರ ನಂಬಿಕೆ ಇಟ್ಟವರು.ಇಂದು ಅವರ ಹುಟ್ಟುಹಬ್ಬ ಶ್ರೀಮಠದ ಭಕ್ತಾದಿಗಳು ಅದ್ದೂರಿಯಾಗಿ ಆಚರಿಸಿದ ಬಹಳ ಸಂತೋಷವಾಯಿತು ಮತ್ತು ನಮ್ಮ ಭಗತ್ ಸಿಂಗ್ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೋಟ್ ಬುಕ್ ಪೆನ್ನು ಚಾಕ್ಲೇಟ್ ಪೂಜ್ಯರಿಂದ ರೈತ ಮುಖಂಡ ಕೊಡಸಿದ್ದು ಬಹಳ ಸಂತೋಷವಾಯಿತು. ಈ ಕಾರ್ಯಕ್ರಮ ಆಯೋಜಿಸಿದ ಹಾಗೆ,ಹಲವಾರು ಮುಖಂಡರ ಹುಟ್ಟುಹಬ್ಬ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬಂದ ರೈತ ಮುಖಂಡ, ತಾಲೂಕಿನಲ್ಲಿ ಇನ್ನೂ ಹೆಚ್ಚಿನ ಸೇವೆ ಮಾಡಲು ಆ ಭಗವಂತನ ಆಶೀರ್ವಾದ ಇರಲೆಂದು ಮತ್ತು ಶ್ರೀಮಠದ ಎಲ್ಲಾ ಪೂಜ್ಯರ ಆಶೀರ್ವಾದ ಇರಲಿ ಎಂದು ನಾನು ಕೇಳಿಕೊಳ್ಳುತ್ತೇನೆ. ಗ್ರಾಮದಲ್ಲಿ ಅತಿ ಹೆಚ್ಚು ಎಲ್ಲಾ ಕಾರ್ಯಕ್ರಮದಲ್ಲಿ ಮುಂದಾಗಿ ನಿಲ್ಲುತ್ತಾರೆ ಗ್ರಾಮದ ವತಿಯಿಂದ ನಾನು ಅಭಿನಂದನೆಗಳು ಸಲ್ಲಿಸುತ್ತೇನೆ ಎಂದರು. ಮತ್ತು ಶ್ರೀಮಠದ ಎಲ್ಲಾ ಭಕ್ತಾದಿಗಳಿಗೆ ಪೂಜ್ಯರ ಆಶೀರ್ವಾದ ಸದಾ ತಮ್ಮ ಮೇಲೆ ಇರುತ್ತದೆ. ಇದೇ ರೀತಿ ಮಠಕ್ಕೆ ತಮ್ಮ ಸಹಕಾರ ಇರಲಿ ಎಂದರು. ಪೂಜ್ಯ ನೀಲಕಂಠ ದೇವರು ಮಾತನಾಡಿ ಎಲ್ಲಾ ಭಕ್ತಾದಿಗಳ ಪ್ರೀತಿ ವಿಶ್ವಾಸ ನಮ್ಮ ಮೇಲೆ ಇರಲಿ. ಮತ್ತು ಶ್ರೀಮಠದ ಆಶೀರ್ವಾದ ತಮ್ಮ ಮೇಲೆ ಸದಾ ಇರುತ್ತದೆ ನನ್ನ ಹುಟ್ಟುಹಬ್ಬ ಶುಭ ಕೋರಿದ ಎಲ್ಲಾ ಭಕ್ತರಿಗೆ ಶ್ರೀಮಠದ ಆಶೀರ್ವಾದ ಎಂದರು. ಶ್ರೀ ಮಠದ ಭಕ್ತರಾದ, ವೀರಣ್ಣ ಗಂಗಾಣಿ ರೈತ ಮುಖಂಡರು. ಶಿವರಾಜ ಚೋಕ,ರಾಚಯ್ಯ ಕ್ಕಿಣಿ, ಶಂಭುಲಿಂಗಯ್ಯ ಶಾಸ್ತ್ರಿ, ರಾಜಶೇಖರ ಬುಕ್ಕಟಗಿ, ಮಾನಪ್ಪ ಸೀಗಿ, ನೀಲಕಂಠ ಪಾಟೀಲ್, ವೀರೇಶ್ ಬುಕ್ಕುಟಗಿ, ಆಕಾಶ ಸಾಲಿಮಠ, ಪಪ್ಯಾ ಗೋಣಿಗಿ, ಸೋಮಣ್ಣ ಡೊಣ್ಣೂರ್,ಬಸು ತಳವಾರ, ಮಲ್ಲು ಹೂಗಾರ, ಸಿದ್ದು ಅರಣಕಲ್, ಪ್ರಶಾಂತ್ ಸಾಲಿಮಠ, ಸಿದ್ದು ಮಮಶೆಟ್ಟಿ, ಸಿದ್ದಲಿಂಗ ಹಾಲಮಠ, ರಾಜು ಸ್ವಾಮಿ ಕಿಣ್ಣಿ, ಮಹೇಶ್ ಬಿಜ್ಜನಹಳ್ಳಿ, ರವಿ ಬುಳ್ಳ, ಸಚಿನ್ ನುoಗಾರಿ, ಮಲ್ಲು ಹೊಳಗೇರಾ ,ನೀಲಕಂಠ ಕೊಡದೂರ, ಶರಣಯ್ಯ ಕಿಣ್ಣಿ,ಶಾಂತು ಮಮಶೆಟ್ಟಿ, ಶಿವ ಕುರುಕೋಟಿ, ನಂದು ಮಾಮಶಟ್ಟಿ, ನಾಗು ಸೀಗಿ, ವೈಜನಾಥ ನುoಗಾರಿ, ಮುರುಗೇಶ್ ಕಿಣ್ಣಿ,ವೀರೇಶ ರಾವೂರ್, ಪ್ರಶಾಂತ್ ಹೊಳಗೇರಾ, ಸಂಜು ಮುಚ್ಚೆಟ್ಟಿ, ಉಮೇಶ್ ಬಟಗೇರಿ, ಮುರುಗಪ್ಪ ಗಡ್ಡಿ, ಜಗು ಕುರುಕೋಟಿ, ಶರಣು ಹಂದ್ರಳ್ಳಿ, ಸಿದ್ದು ಸಿಲ್ವಂತ, ಶರಣು ಅಷ್ಟಗಿ, ಡಾಕ್ಟರ್ ಜಗನ್ನಾಥ್, ಬಸ್ಸು ಗುಳಗೇರಾ, ಸಿದ್ದು ಪಟ್ಟಣ , ಸುಭಾಸ ಆಗಸರ, ಮತ್ತು ಭಗತ್ ಸಿಂಗ್ ಶಾಲಾ ಶಿಕ್ಷಕಿಯರು, ಮುದ್ದು ಮಕ್ಕಳು ಮಠದ ಭಕ್ತರು ಉಪಸ್ಥಿತರಿದ್ದರು. ಮಲ್ಲು ಚಿಕಅಗಿಸಿ ನಿರೂಪಿಸಿ ವಂದಿಸಿದರು.
ವರದಿ : ರಮೇಶ್ ಎಸ್ ಕುಡಹಳ್ಳಿ ಜೆ ಕೆ ಕನ್ನಡ ನ್ಯೂಸ್ ಕಾಳಗಿ
