ಹೊಸದಾಗಿ ನಿರ್ಮಿಸುತ್ತಿರುವ 110/11 ಕೆ.ವಿ ಹುಲ್ಲತ್ತಿ ವಿ.ವಿ ಕೇಂದ್ರಕ್ಕೆ 110 ಕೆವಿ ಗೋಪುರ ಅಳವಡಿಸುತ್ತಿರುವುದರಿಂದ ದಿನಾಂಕ: 16.03.2025 ಭಾನುವಾರದಂದು ಬೆಳಗ್ಗೆ 10:00 ಘಂಟೆಯಿಂದ ಸಂಜೆ 6:00 ಘಂಟೆಯವರೆಗೆ 110/33/116,ವಿ ಹಿರೇಕೆರೂರು ವಿವಿ ಕೇಂದ್ರ ಮತ್ತು 33/11ಕೆ ವಿ ಚಿಕ್ಕೇರೂರ ವಿ.ವಿ ಕೇಂದ್ರಗಳಿಗೆ ಸಂಬಂಧಿಸಿದ ಎಲ್ಲಾ ಗ್ರಾಮಗಳಿಗೆ ವಿದ್ಯುತ್ ವಿತರಣೆಯಲ್ಲಿ ವ್ಯತ್ಯಯವಾಗುವುದು. ಹಾಗೂ 33/11 ಕೆ ವಿ ಕೋಡ ವಿ.ವಿ ಕೇಂದ್ರಕ್ಕೆ ಸಂಬಂಧಿಸಿದ ಎಲ್ಲಾ ಐಪಿ ಮಾರ್ಗಗಳಿಗೆ ವಿದ್ಯುತ್ ವಿತರಣೆಯಲ್ಲಿ ವ್ಯತ್ಯಯವಾಗುವುದು. ನಿರಂತರ ಜ್ಯೋತಿ (NJY) ಮಾರ್ಗದ ಗ್ರಾಹಕರಿಗೆ ವಿದ್ಯುತ್ ಸಂಪರ್ಕ ಯಥಾಸ್ಥತಿ ಚಾಲನೆಯಲ್ಲಿರುತ್ತದೆ, ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್(ವಿ) ಹೆಸ್ಕಾಂ, ಹಿರೇಕೆರೂರ ಇವರು ವಿನಂತಿಸಿಕೊಂಡಿದ್ದಾರೆ.
ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್(ವಿ), ಕಾರ್ಯ ಮತ್ತು ಪಾಲನೆ ಉಪ ವಿಭಾಗ, ಹೆಸ್ಕಾಂ, ಹಿರೇಕೆರೂರ.
ವರದಿ : ಪವನ್ ಕುಮಾರ್ ಆರ್