ಎಚ್ಚರ ಬೇಸಿಗೆ ಬಂದಿದೆ ಹೌದು ಮನುಷ್ಯನಿಗೆ ದೇಹ ಅಂದರೆ ಬಹಳ ಮುಖ್ಯ ಅದರಲ್ಲಿ ಮಳೆಗಾಲ ಚಳಿಗಾಲದಲ್ಲಿ ಮನುಷ್ಯ ಮರೆಯಾಗೋಕ್ಕೆ ಯಾವುದಾದರಿಂದಲು ಸ್ವಲ್ಪ ಹೊತ್ತು ತನ್ನ ದೇಹ ಕಾಪಾಡಿಕೊಳ್ಳಲು ಮುಸುಕು ಇನ್ಯಾವುದರಿಂದದಲೂ ಕವಚ ಮಾಡಿಕೊಳ್ಳಬಹುದು ಆದರೆ ಈ ಬಿಸಿಲು ಅಂದರೆ ಉರಿ ಬೆಂಕಿ ದೇಹಕ್ಕೆ ಏನೆಲ್ಲಾ ಕವಚಕ್ಕೆ ಉಪಯೋಗ ಮಾಡಿಕೊಂಡರು ಬೆಂಕಿ ಸೂರ್ಯನ ಕಣ್ಣಿoದ ತಪ್ಪಿಸಿಕೊಳ್ಳಬಾರದ ಅಲ್ಪನದರು ನಾವು ಸೂರ್ಯನ ಕಣ್ಣಿಗೆ ಬೀಳಲೇ ಬೇಕು, ಹಂತದರಲ್ಲಿ ಬೀದರ್ ಅಂದರೆ ಹೆಚ್ಚು ತಾಪಮಾನದ ಸೆಲ್ಸಿಯಸ್ ಡಿಗ್ರಿ ನಿಂದಾ ಉರಿಯುವುದು ಸಹಜ ಹಾಗೆ ರಾಯಚೂರು ಬಿಜಾಪುರ ಕಲಬುರ್ಗಿ ಹೀಗೆ ಕೆಲವು ಜಿಲ್ಲೆಗಳಿಗೆ ಉರಿಯುವ ಬಿಸಿಲಿನ ತಾಪಮಾನ ಜಾಸ್ತಿ ಕಾಣಬಹುದು, ಈ ಬಿಸಿಲು ಗಾಳಿ ಭೂಮಿ ಇವೆಲ್ಲವೂ ಮನುಷ್ಯನಿಗೆ ಉರಿ ಬೀಳುವುದು ಅದರಿಂದ ದೇಹಕ್ಕೆ ಏನೆಲ್ಲಾ ಹಾನಿಯಂಬುದು ಜನರಿಗೆ ತಿಳಿದಿದೆ, ವರ್ಷಕೊಮ್ಮೆ ವಿಧವಾದ ರೀತಿಯ ಬಿಸಿಲಿನ ತಾಪಮಾನ ನಾವು ಕಾಣಬಹುದು, ಹೌದು ಒಂದು ಕಡೆ ಒಂದು ಶಖೆ ಇದ್ದಾರೆ ಇನ್ನೊಂದು ಜಿಲ್ಲೆಯಲ್ಲಿ ಇನ್ನೊಂದು ಶೇಖೆ ಇರುವುದು ಸಹಜ ಹಾಗಾಗಿ ಸರ್ಕಾರ ಕೂಡ ಈ ವಿಷಯದಲ್ಲಿ ಗಂಭೀರತೆಯಿಂದ, ನಿರಂತರ ಮುನ್ನೆಚ್ಚರಿಕೆ ನೀಡುತ್ತಲೇ ಇರುತ್ತದೆ ಮನುಷ್ಯನ ಆರೋಗ್ಯ ಹಾಗೂ ಹೆಚ್ಚುವರಿ ಬಿಸಿಲಿನ ಕಾರಣ ಏನೆಲ್ಲಾ ಮನುಷ್ಯನಿಗೆ ಹಾನಿಯಾಗುತ್ತದೆ ಎಂದು ಮುನ್ನೆಚ್ಚರಿಕೆ ನೀಡುವುದರ ಮುಖಾಂತರ ಕೆಲವು ಸೌಲತ ಕೂಡ ವದಗಿಸಿ ಕೂಡುತ್ತದೆ,ಇಂದಿನ ವಿಶೇಷತೆ ಏನಂದರೆ ಬಿಸಿಲಿನ ತಾಪಮಾನಕ್ಕೆ ನಮ್ಮ ಜೆಕೆ ಕನ್ನಡ ನ್ಯೂಸ್ ಸಲಹೆಗಳು ಕೂಡ ಇದರಲ್ಲಿ ಇರಲಿ ಎಂದು ವೈದ್ಯರಿಂದ ನಿಮಗಾಗಿ ನಮ್ಮ ಜೆಕೆ ತಂಡದ ಮಾಹಿತಿ ಪಡೆದು ತಮಗೋಸ್ಕರ ಈ ಹಾನಿ ಹಾಗೂ ಸುರಕ್ಷತೆ ಕುರಿತು ಕೆಲವು ಮುನ್ನೆಚ್ಚರಿಕೆ ನೀಡಲು ಇಚ್ಚಿಸಿದ್ದೇವೆ ಬಹಳ ಉಪಯುಕ್ತವಾದ ಮಾಹಿತಿ ಇದನ್ನು ತಾವು ಅಳವಡಿಸಿಕೊಂಡರೆ ಆರೋಗ್ಯಕ್ಕೆ ಒಳ್ಳೆಯದು ಎಂದು ನಾವು ಭಾವಿಸುತ್ತೇವೆ,
ಬನ್ನಿ ನೋಡೋಣ ಏನೆಲ್ಲಾ ನಾವು ಕಾಪಾಡಿಕೊಳ್ಳಬಹುದು,
ಬಿಸಿಲಿನಿಂದ ಮುನ್ನೆಚ್ಚರಿಕೆ,
ಏನಿದು:
ಗರಿಷ್ಠ ತಾಪಮಾನ, ಉಷ್ಣ ವಾತಾವರಣ, ಬಿಸಿಗಾಳಿ ಎಂದೆಲ್ಲಾ ಕರೆಸಿಕೊಳ್ಳುವ ಕಾಲ ಆರಂಭವಾಗಿದೆ. ಸಾಮಾನ್ಯ ಪ್ರದೇಶದಲ್ಲಿ ವಿಪರೀತ ಶಾಖದ ಮಟ್ಟವು ಹೆಚ್ಚಾಗಿ, ಸಾಮಾನ್ಯ ಉಷ್ಣಾಂಶವು ಗರಿಷ್ಠತೆಗೆ ತಲುಪಿ ತೇವಾಂಶ ಇಲ್ಲದಂತೆ ಮಾಡುವ ವಿಪರೀತ ಪರಿಸ್ಥಿತಿ ವಾತಾವರಣದಲ್ಲಿ ಉಂಟಾದಾಗ ಅದನ್ನು ಬಿಸಿಗಾಳಿ, ಉಷ್ಣಗಾಳಿ, ಬೇಸಿಗೆಯ ಝುಳ, ಉಷ್ಣವಾತಾವರಣ ಅಥವಾ ಸಾಮಾನ್ಯ ಭಾಷೆಯಲ್ಲಿ ಬೇಸಿಗೆ ಎಂದು ಕರೆಸಿಕೊಳ್ಳುತ್ತದೆ. ಬೇಸಿಗೆಯಿಂದ ಹೆಚ್ಚಾಗಿ ಬಳಲುವವರು.ಈ ಬೇಸಿಗೆ ವಾತಾವರಣದಲ್ಲಿ ಬಹುತೇಕ ಎಲ್ಲಾ ಜೀವ ಜಂತುಗಳಿಗೆ ಕಷ್ಟವಾಗುತ್ತದೆ. ಅದರಲ್ಲಿಯೂ ಶಿಶುಗಳಿಗೆ, ವಯಸ್ಸಾದವರಿಗೆ, ಮಕ್ಕಳಿಗೆ, ಗರ್ಭಿಣಿಯರಿಗೆ, ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ, ಬಿಸಿಲಲ್ಲಿ ಕೂಲಿ ಕೆಲಸ ಮಾಡುವ ಬಡ ಮತ್ತು ಸಾಮಾನ್ಯ ವರ್ಗದವರಿಗೆ, ವಿಶೇಷ ಚೇತನ ವ್ಯಕ್ತಿಗಳಿಗೆ, ಧೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಈ ಬಿಸಿಲಿನ ಝಳವು ಸಾಕಷ್ಟು ಕಾಡುತ್ತದೆ ಬಿಸಿಲಿನ ತಾಪದಿಂದ ಮನುಷ್ಯರ ಮೇಲಾಗುವ ಪರಿಣಾಮಗಳು ಬಹುತೇಕ ಅದರು ಅದರ ಪರಿಣಾಮದ ಲಕ್ಷಣಗಳನ್ನು ಕಾಣಿಸುವುದು ಇದನ್ನು ಪ್ರತಿಯೊಬ್ಬರು ಗಮನಿಸಲೇ ಬೇಕು ಶಾಖಾ ಸೆಳೆತ (ಹೀಟ್ ಕ್ರಾಂಪ್) ಜ್ವರ (102 ಡಿಗ್ರಿ ಗಿಂತ ಕಡಿಮೆ) ಹಾಗೂ ಮೈಯಲ್ಲಿ ಊತ ಕಾಣಿಸಿಕೊಳ್ಳುವುದು ಹೀಗೆ ಅನೇಕ ರೀತಿಯಲ್ಲಿ ಮನುಷ್ಯನಿಗೆ ವತ್ತಡವಾಗುವುದು ಇದನ್ನು ಕಾಪಾಡಿಕೊಳ್ಳುವುದು ಅಗತ್ಯ ಹೌದು ಇದೀಗ ನಮಗೆ ವೈದ್ಯರೊಬ್ಬರು ಮಾಹಿತಿ ನೀಡಿದ ಆರೋಗ್ಯದ ಕೈಪಿಡಿ ನೀಡಿದರು ಅದರಂತೆ ನಾವು ನಮ್ಮ ಜೆಕೆ ಕನ್ನಡ ಸುದ್ದಿ ವೆಬ್ ಅಕ್ಷರ ಚಪ್ಪರದಲ್ಲಿ ತಮಗೆ ಮಾಹಿತಿ ನೀಡಲು ಇಚ್ಛಿಸಿದ್ದೇವೆ, ಇದು ಪ್ರತಿಯೊಬ್ಬರಿಗೂ ಉಪಯುಕ್ತವಾಗುವ ಮಾಹಿತಿ ಮತ್ತು ಈ ಸಲಹೆ ಸೂಚನೆ ನೀಡಿದ,# DSO ಡಾ. ಹೆಚ್ ಡಿ ಶರತ್ ಬಾಬು ಜಿಲ್ಲಾ ಸರ್ವೆಲಯನ್ಸ್ ಅಧಿಕಾರಿ ಬೆಂಗಳೂರು ನಗರ# ಅವರಿಗು ಕೂಡ ನಮ್ಮ ಜೆಕೆ ಸುದ್ದಿ ವಾಹಿನಿ ವತಿಯಿಂದ ವಿಶೇಷ ಧನ್ಯವಾದಗಳು ತಿಳಿಸುತ್ತೇವೆ
ಅವರು ನೀಡಿದ ಕೆಲವು ವಿಷಯಗಳ ಜೊತೆ ಅನುಸರಿಸೋಣ ಯಾವುದನ್ನು ಮಾಡಬೇಕು ಯಾವುಗಳು ಮಾಡಬಾರದು ಎಂದು ಸಂಕ್ಷಿಪ್ತವಾಗಿ ತಿಳಿಸಿದ್ದಾರೆ,
ದೈಹಿಕ ಚಟುವಟಿಕೆಗಳನ್ನು ನಿಲ್ಲಿಸಿ ಹಾಗು ತಂಪಾದ ಜಾಗಗಳಿಗೆ ಹೋಗಿ. ಮತ್ತು ತಂಪಾದ, ಶುದ್ಧವಾದ ನೀರು ಕುಡಿಯುವುದು ಹಾಗೂ ಓ.ಆರ್.ಎಸ್ ಮತ್ತು ಗ್ಲಕೋಸ್ ಅನ್ನು ಬಳಸುವುದು.ಬಹು ಮುಖ್ಯ
ತಮಗೆ ಹೃದ್ರೋಗ ಸಮಸ್ಯೆ ಇದ್ದರೆ ಅಥವಾ ಇತರೆ ಯಾವುದೇ ರೋಗ ಲಕ್ಷಣಗಳಿದ್ದರೆ ಸಕಾಲಕ್ಕೆ ವೈದ್ಯಕೀಯ ಸಹಾಯ ಪಡೆದುಕೊಳ್ಳಲು ಮುಂದಾಗಬೇಕು.
ನಾವು ಬಿಸಿಲಲ್ಲಿ ಇದ್ದಾಗ ಈ ಲಕ್ಷಣಗಳನ್ನು ಗಮನಿಸಿ,
ಶಾಖದ ಹೊಡೆತ (ಹೀಟ್ ಎನ್ಸಾಷನ್) ವಿಪರೀತ ಬೆವರುವಿಕೆ,ಹಾಗೂ ನಿಶ್ಯಕ್ತಿ, ಸುಸ್ತು, ತಲೆ ಸುತ್ತು, ತಲೆ ನೋವು, ವಾಕರಿಕೆ, ವಾಂತಿ, ಸ್ನಾಯುಗಳ ಸೆಳೆತ ಕಂಡರೆ ಅಥವಾ ಬಂದರೆ ಮುನ್ನಚ್ಚರಿಕೆ ವಹಿಸಿ ಇವುಗಳನ್ನು ಮಾಡಿ ವ್ಯಕ್ತಿಯನ್ನು ತಂಪಾದ ಜಾಗಕ್ಕೆ ಸ್ಥಳಾಂತರಿಸಿ ಆ ವ್ಯಕ್ತಿ ಧರಿಸಿದ ಉಡುಪುಗಳು ಬಿಗಿಯಾಗಿದ್ದರೆ ಸಡಿಲಗೊಳಿಸಿ ಮತ್ತು ದೇಹದ ಉಷ್ಣಾಂಶವನ್ನು ನಿಯಂತ್ರಿಸಲು ಮೈ ಮೇಲೆ ತಂಪಾದ, ಒದ್ದೆ ಬಟ್ಟೆಗಳನ್ನು ಹಾಕಿ, ವಾಂತಿ ಹಾಗೂ ಇತರೇ ರೋಗ ಲಕ್ಷಣಗಳು ಇದ್ದರೆ ತಕ್ಷಣವೇ ವೈದ್ಯಕೀಯ ಸಹಾಯ ಪಡೆಯಿರಿ. ಮತ್ತು ನೀರನ್ನು ನಿಧಾನವಾಗಿ ಕುಡಿಸಿರಿ.
ಒಮ್ಮೆ ಈ ಲಕ್ಷಣಗಳನ್ನು ಗಮನಿಸಿ,
ಶಾಖಾಘಾತ (ಹೀಟ್ ಸ್ಟೋಕ್) ದೇಹದ ಉಷ್ಣಾಂಶ ಅತಿಯಾಗಿ ಹೆಚ್ಚಾಗುವುದು(104 °F ಅಥವಾ ಅದಕ್ಕಿಂತ ಹೆಚ್ಚಾಗಿ), ಮನಸ್ಸಿನಲ್ಲಿ ಗೊಂದಲ, ಮೂರ್ಧೆ ರೋಗ ಹಾಗು ವ್ಯಕ್ತಿಯು ಕೋಮಾ ಸ್ಥಿತಿಗೆ ಹೋಗಬಹುದು.ಅದರಿಂದ ಚರ್ಮ ಸುಡುವುದು ಅಥವಾ ಕೆಂಪಾದ ಚರ್ಮ,ತಲೆ ನೋವು,ವಾಕರಿಕೆ ಹಾಗು ವಾಂತಿ,ಅತಿಯಾದ ನಾಡಿ ಮಿಡಿತ,ಮತ್ತು ತಪ್ಪುವಿಕೆ ನಾಡಿಮಿಡಿತ ಲಕ್ಷಣಗಳನ್ನು ಕಾಣುವುದು, ಆ ಕ್ಷಣಕ್ಕೆ ತಾವು ಅಂತಹ ವ್ಯಕ್ತಿಯನ್ನು ಕಂಡರೆ ಅಥವಾ ತಮಗಾದರೆ ಇವುಗಳನ್ನು ಮಾಡಿ ತುರ್ತು, ವೈದ್ಯಕೀಯ ಸಹಾಯವಾಣಿ 104 ಕ್ಕೆ ಕರೆ ಮಾಡಿ ವೈದ್ಯಕೀಯ ಸಹಾಯ ಪಡೆದುಕೊಳ್ಳಿ. ಧರಿಸಿದ ಉಡುಪುಗಳು ಬಿಗಿಯಾಗಿದ್ದರೆ ಸಡಿಲಗೊಳಿಸಿ. ವ್ಯಕ್ತಿಯನ್ನು ಹೆಚ್ಚು ಗಾಳಿಯಾಡುವಂತಹ ತಂಪಾದ ಜಾಗಕ್ಕೆ ಸ್ಥಳಾಂತರಿಸಿ. ವ್ಯಕ್ತಿಗೆ ಉಸಿರಾಟದ ಶ್ವಾಸನಾಳದ ತೊಂದರೆಗಳಿದ್ದು ಆತ ಅಶಕ್ತನಾದರೆ ತಕ್ಷಣ ಕುಡಿಯಲು ಏನನ್ನೂ ನೀಡಬಾರದು. ಮೈ ಮೇಲೆ ತಂಪಾದ, ಒದ್ದೆ ಬಟ್ಟೆಗಳನ್ನು ಹಾಕಿ ದೇಹದ ಉಷ್ಣಾಂಶವನ್ನು ನಿಯಂತ್ರಿಸಿ. (ಮುಖ್ಯವಾಗಿ ತಲೆ, ಕತ್ತು, ಕಂಕುಳು, ಮತ್ತು ತೊಡೆಸಂದುಗಳಲ್ಲಿ) ಗಾಳಿಯಾಡಲು ಬಿಡಿ
ಇವುಗಳನ್ನು ಹೇಗೆ ತಪ್ಪಿಸಬೇಕು: ಮತ್ತು ಏನನ್ನು ತಿನ್ನಬೇಕು?
ಪ್ರಾಚೀನ ಭಾರತೀಯರ ನಂಬಿಕೆ ಪ್ರಕಾರ ನೀವು ತಿನ್ನುವ ಆಹಾರವು ನಿಮ್ಮ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ, ನೀವು ದೇಹದಲ್ಲಿ ನೀರಿನ ಅಂಶ ಉಳಿಸಿಕೊಳ್ಳುವಂತಹ ಆಹಾರವನ್ನೇ ಹೆಚ್ಚಾಗಿ ಸೇವಿಸಬೇಕು.ಅವುಗಳು ಯಾವವೆಂದರೆ ತರಕಾರಿಗಳಲ್ಲಿ ಸ್ಥಳೀಯವಾಗಿ ಲಭ್ಯವಿರುವ ಹಸಿ ತರಕಾರಿಗಳಾದ ಸೌತೆಕಾಯಿ, ಹಾಗಲಕಾಯಿ, ಸೋರೆಕಾಯಿ, ಪಡವಲಕಾಯಿ, ಕುಂಬಳಕಾಯಿ ಹಾಗು ಗೆಡ್ಡೆಗಳಾದ ಬೀಟ್ ರೂಟ್, ಕ್ಯಾರೆಟ್, ಮೂಲಂಗಿ ಮತ್ತು ಹಸಿರು ಸೊಪ್ಪುಗಳು ಇತ್ಯಾದಿಗಳನ್ನು ಬಳಸಬೇಕು.ಹಣ್ಣುಗಳಲ್ಲಿ ನೆಲ್ಲಿಕಾಯಿ/ಬೆಟ್ಟದ ನೆಲ್ಲಿಕಾಯಿ, ಬಾಳೆ ಹಣ್ಣು, ಕಲ್ಲಂಗಡಿ, ಮಾವು, ಮೂಸಂಬಿ, ಕಿತ್ತಳೆ ಹಣ್ಣು ಇತ್ಯಾದಿ.
ಊಟದಲ್ಲಿ ಇವಗಳನ್ನು ಬಳಿಸದರೆ ದೇಹಕ್ಕೆ ತಂಪು
ರಾಗಿಹಿಟ್ಟು ಹಾಗೂ ಹೆಸರು ಬೇಳೆಗಳನ್ನು ಆಹಾರದಲ್ಲಿ ಬಳಸಿದರೆ ಉತ್ತಮ ಅದು ದೇಹವನ್ನು ತಂಪಾಗಿಸುವ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುವ ಶುಂಠಿ ಹಾಗೂ ಕರಿಬೇವಿನಂತಹ ಮೂಲಿಕೆಗಳನ್ನು ಮೊಸರಿನಲ್ಲಿ ಬೆರಸಿ ಮಾಡಲಾಗುವ ತಂಬುಳಿ, ಅಂಬಲಿ, ನೀರು ಪದಾರ್ಥಗಳು ಅಥವಾ ಸ್ಥಳೀಯ ದ್ರವ ಆಹಾರಗಳನ್ನು ಸೇವಿಸಬೇಕು.ಕನಿಷ್ಠ ಒಂದು ಹೊತ್ತಿನ ಊಟದಲ್ಲಾದರೂ ತುಪ್ಪವನ್ನು ಬಳಸುವುದು ಬಹಳ ಉತ್ತಮ. ಅದೇ ರೀತಿ ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಖಾರದ ಮತ್ತು ಅಧಿಕ ಉಪ್ಪಿನ ಅಂಶವಿರುವ ಪದಾರ್ಥಗಳನ್ನು ಬಳಸುವುದನ್ನು ಕಡಿಮೆ ಮಾಡಬೇಕು.ಹಾಗೂ ಸಕ್ಕರೆಯ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು ದೇಹ ಚನಗ ಇದ್ರೆ ಆರೋಗ್ಯ ಒಳ್ಳೆದು,
ದೇಹದ ಆರೋಗ್ಯ ಕಾಳಜಿಗೆ ಸಲಹೆ ನೀಡಿದ ಡಾ.ಹೆಚ್ ಡಿ ಶರತ್ ಬಾಬು DSO ಅವರಿಗೆ ಮತ್ತೊಮ್ಮೆ ನಮ್ಮ ಜೆಕೆ ಕನ್ನಡ ಸುದ್ದಿವಾಹಿನಿಯ ಸಂಪಾದಕರು ಮೂಸಿನ ಅಲಿ ಅವರು ಧನ್ಯವಾದಗಳು ತಿಳಿಸಿದರು,ಕರ್ನಾಟಕ ಸರ್ಕಾರ ಕೂಡ ಬೇಸಿಗೆ ಆರೋಗ್ಯ ಕೈಪಿಡಿಯಾಗಿ ಬಿಡುಗಡೆ ಮಾಡಿದಕ್ಕೆ ಜನರಿಗೆ ಬಹಳ ಉಪಯುಕ್ತವಾಗಿದೆ.
ಬನ್ನಿ ಮುಂದೆ ನೋಡೋಣ,ಬಿಸಿಲಿನ ದೇಹದ ಆರೋಗ್ಯ.ಮತ್ತು ದೇಹವನ್ನು ತಂಪಾಗಿಡಲು ಸ್ಥಳೀಯವಾಗಿ ಸಿಗುವ ಯಾವ ತಿನಿಸುಗಳನ್ನು ನೀವು ತಯಾರಿಸುತ್ತೀರಿ ಮತ್ತು ನೀವು ಅದಕ್ಕೆ ಯಾವ ಅಂಶಗಳನ್ನು ಬಳಸುತ್ತೀರಿ ಎನ್ನುವುದು ಬಹಳ ಪ್ರಾಮುಖ್ಯ,ಹೌದು ಕಾಲಕ್ಕೆ ತಕ್ಕಂತೆ, ಸುಲಭವಾಗಿ ಲಭ್ಯ ಇರುವ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಿ. ಕೆಲವು ಆಹಾರಗಳು ನಿಮಗೆ ಹೆಚ್ಚು ದುಬಾರಿಯಾಗಿದ್ದರೆ ಅಥವಾ ಆ ಸಮಯದ್ದಲಿ ದೊರಕದಿದ್ದರೆ, ಪರ್ಯಾಯವಾಗಿರುವ ಉತ್ತಮ ಆಹಾರಗಳನ್ನು ಬಳಸುವುದು ತುಂಬಾ ಸೂಕ್ತವಾಗಿರುತ್ತದೆ
ಬೇಸಿಗೆ ಉರಿಯುವ ಬಿಸಿಲಿನಲ್ಲಿ ಏನೇನು ಕುಡಿಯಬಹುದು…?
* ದೇಹಕ್ಕೆ ದಾಹ ನೀಗಿಸುವ ನಿಟ್ಟಿನಲ್ಲಿ ನಮಗೆ ನೀರು ಬೇಕು ನೀರು ಕುಡಿಯಬೇಕೆನಿಸಿದ್ದಾಗ ಸಹ ನೀರಿನ ಬಳಕೆ ನಿರಂತರವಾಗಿರಲಿ. ಅದಕ್ಕೆ ಮಣ್ಣಿನ ಮಡಕೆಯಲ್ಲಿ ಶೇಖರಿಸಿದ ತಂಪಾದ ನೀರನ್ನು ಆಗಾಗ ಕುಡಿಯುತ್ತಿರಿ ಮತ್ತು ರಾತ್ರಿ ಕೊತ್ತಂಬರಿ ಬೀಜಗಳನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದು ಕುಡಿಯಿರಿ. ದೇಹ ಇನ್ನಷ್ಟು ತಂಪಾಗಿರುವುದು ಹಾಗೂ ನಿಮಗೆ ತಿಳಿದಿರುವ ನೀರು ಶುದ್ದೀಕರಣ ಹಾಗು ಶೇಖರಣಾ ವಿಧಾನಗಳನ್ನು ಮನೆಯಲ್ಲಿ ಅಳವಡಿಸಿಕೊಳ್ಳಿ.ಇನ್ನು ತೀರಾ ತಂಪಾದ/ಕೊರೆಯುವ ನೀರನ್ನು ಕುಡಿಯಬೇಡಿ. ಅದರಿಂದ ಹೊಟ್ಟೆಯ ಸ್ನಾಯುಸೆಳೆತ ಹಾಗೂ ಅಜೀರ್ಣ ಉಂಟಾಗಬಹುದು.ಮದ್ಯ, ಚಹಾ, ಕಾಫಿ, ತಂಪಾದ ಪಾನೀಯಗಳು, ಸೋಡಾ ಹಾಗು ಇತರ ಕಾರ್ಬೊನೇಟೆಡ್ ಪಾನೀಯಗಳಿಂದ ದೂರ ಇರಬೇಕು. ಇದು ದೇಹದ ತಾಪವನ್ನು ಹೆಚ್ಚಿಸುತ್ತದೆ ಹಾಗು ನಿರ್ಜಲೀಕರಣ(ಡಿ ಹೈಡೇಶನ್) ಉಂಟುಮಾಡುವುದು.ಸಾಧ್ಯವಾದಷ್ಟು ಅಂದರೆ ಎಳನೀರು, ಕಬ್ಬಿನ ಹಾಲು, ಮಜ್ಜಿಗೆ, ಹಣ್ಣಿನ ರಸದಂತಹ ಪಾನೀಯಗಳನ್ನು ಹೆಚ್ಚಾಗಿ ಸೇವಿಸಿ. ಇತರ ಸ್ಥಳೀಯ ಪೇಯಗಳಾದ ಮನೆಯಲ್ಲೇ ಸಿದ್ದಪಡಿಸಿದ ಲಸ್ಸಿ, ತೋರಣಿ (ಅಕ್ಕಿ ಗಂಜಿ), ಉಶೀರಾ ರಸ ಬಳಸುವುದು ಸೂಕ್ತ.ಹಾಗೂ ಓ. ಆರ್. ಎಸ್. ಮತ್ತು ಗ್ಲೂಕೋಸ್ ಮಿಶ್ರಿತ ನೀರನ್ನು ಹೊರಾಂಗಣದಲ್ಲಿದ್ದಾಗ ಹೆಚ್ಚಾಗಿ ಸೇವಿಸಿ. ಇದೊಂದು ಗಮನಿಸಿ ನಿಮ್ಮ ಮೂತ್ರ ತಿಳಿ ಬಣ್ಣದ್ದಾಗಿರಲಿ, ಇಲ್ಲದಿದ್ದರೆ, ಕುಡಿಯುವ ನೀರಿನ ಪ್ರಮಾಣವನ್ನು ಹೆಚ್ಚಿಸಿ.
ಚರ್ಮ ಹಾಗೂ ದೇಹದ ಕಾಳಜಿಗೆ ನಿಘ ವಹಿಸಿ:-
ಈ ಕಾಲದಲ್ಲಿ ಶರೀರದ ಮೇಲೆ ಬಿಸಿಲ ಬೊಬ್ಬೆಗಳು ಹಾಗೂ ಮೈ ಮೇಲೆ ಸುಟ್ಟ ಕಲೆಗಳು ಆಗವುದು ಸಾಮಾನ್ಯ. ಅವುಗಳಿಂದ ರಕ್ಷಿಸಿಕೊಳ್ಳಲು ನೈಸರ್ಗಿಕ ಪದ್ದತಿಯ ಮೊರೆ ಹೋಗಿ ಅಳವಡಿಸಿಕೊಳ್ಳಿ ತ್ವಚೆಗೆ ಹಿತ ನೀಡುವಂತಹ, ತಂಪಾಗಿ ಇಡುವ ಅಲೋವೆರಾ, ಶ್ರೀಗಂಧ, ಬೇವು, ಗುಲಾಬಿ, ತುಳಸಿ ಹಾಗೂ ಲಾವಂಚದಂತಹ ಗಿಡ ಮೂಲಿಕೆಗಳ ಲೇಪನ ಮಾಡಿ. ಇವುಗಳು ಲಭ್ಯವಿಲ್ಲದಿದ್ದರೆ, ಕೈಗೆಟುಕುವ ಬೆಲೆಯ ಲೋಷನ್ ಗಳನ್ನು ಬಳಸುವುದು ಉತ್ತಮ.ಮತ್ತು ಸ್ನಾನ ಮಾಡುವಾಗ ನೀರಿನಲ್ಲಿ ಅಡುಗೆ ಸೋಡಾ ಬಳಸಿ.ತೆಂಗಿನೆಣ್ಣೆ, ಹರಳೆಣ್ಣೆ ಹಾಗೂ ಎಳ್ಳೆಣ್ಣೆಯನ್ನು ತಲೆಗೆ ಹಚ್ಚಿಕೊಳ್ಳಿ. ಬೆಳಗಿನ ಹೊತ್ತು ಹಗುರವಾದ ವ್ಯಾಯಾಮ ಮಾಡಿ ದೇಹವನ್ನು ದೈನಂದಿನ ಕೆಲಸಗಳಿಗೆ ಸಿದ್ದಗೊಳಿಸಿ.ದೇಹವನ್ನು ತಂಪಾಗಿಸಲು ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದಂತಹ ವಿಧಾನಗಳನ್ನು ಅನುಸರಿಸಿ ಇದು ದೇಹಕ್ಕೆ ಬೇಕಾಗುವಸ್ಟು ಉಪಯೋಗವಾಗುತ್ತದೆ ಭಾರ ಆಗುವುದಿಲ್ಲ.
ಹೊರಾಂಗಣದಲ್ಲಿರುವಾಗ ಏನು ಮಾಡಬೇಕು…?
ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯ ನಡುವೆ ಹೊರಗಡೆ ದೈಹಿಕ ಕೆಲಸ ಮಾಡುವುದನ್ನು ತಪ್ಪಿಸಿ. ಅದು ಸಾಧ್ಯವಾಗದಿದ್ದರೆ, ಈ ಮುನ್ನೆಚ್ಚರಿಕೆಗಳನ್ನು ವಹಿಸಿ. ತಿಳಿ ಬಣ್ಣದ ಹತ್ತಿಯಿಂದ ತಯಾರಿಸಿದ ನೈಸರ್ಗಿಕ ಬಟ್ಟೆಗಳನ್ನು ಧರಿಸಬೇಕು. ಪಾಲಿಯೆಸ್ಟರ್ ಹಾಗೂ ಸಿಂಥೆಟಿಕ್ ಆದಷ್ಟು ಉಪಯೋಗಿಸಬೇಡಿ.
ತಲೆ ಮೇಲೆ ಟೋಪಿ ಅಥವಾ ಹತ್ತಿಯ ಬಟ್ಟೆಗಳಿಂದ ತಲೆ ಮುಚ್ಚಿಕೊಳ್ಳಬೇಕು.ತಮಗೆ ಸಾಧ್ಯವಾದರೆ ಒಂದು ಸ್ವಚ್ಛ, ಒದ್ದೆ ಬಟ್ಟೆಯನ್ನು ನಿಮ್ಮ ತಲೆ/ಕತ್ತಿನ ಸುತ್ತ ಧರಿಸಲು ಪ್ರಯತ್ನಿಸಿ. ಸಾಧ್ಯವಾದರೆ ಬೀಸಣಿಗೆಯನ್ನು ಬಳಸಿ. ಈ ಧೂಳು, ಹೊಗೆ, ವಾಯು ಮಾಲಿನ್ಯದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಾಸ್ಕನ್ನು ಬಳಸುವುದು ಸೂಕ್ತ. ಕೆಲಸದ ಮಧ್ಯದಲ್ಲಿ ಆಗಾಗ್ಗೆ ಸಣ್ಣ ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ವಿಶ್ರಾಂತಿಯ ಸಮಯದಲ್ಲಿ ನೆರಳಿನಲ್ಲಿ ಕೂತುಕೊಳ್ಳಿ ವಿಶ್ರಾಂತಿ ಪಡೆಯಿರಿ,ಏನೇ ತಿನ್ನುವ ಮೊದಲು ನಿಮ್ಮ ಕೈಯನ್ನು ಚೆನ್ನಾಗಿ ತೊಳೆದುಕೊಳ್ಳಿ.
ಒಳಾಂಗಣದಲ್ಲಿದ್ದಾಗ ಏನು ಮಾಡಬೇಕು..?
ಹೊರಗಿನ ಬಿಸಿಲು, ಧೂಳು, ಹೊಗೆ ಹಾಗೂ ಮಾಲಿನ್ಯಗಳಿಂದ ರಕ್ಷಿಸಿ. ಇಕ್ಕಟ್ಟಾದ, ಕತ್ತಲೆಯ ಕೋಣೆ, ತುಂಬಾ ಬಿಸಿ ವಾತಾವರಣ ಇದ್ದಾಗ ಸಾಧ್ಯವಾದಷ್ಟು ಆ ಸ್ಥಳವನ್ನು ತಂಪಾಗಿರಿಸಿಕೊಳ್ಳಲು ಪ್ರಯತ್ನಿಸಿ. ಉದಾ: ಕಿಟಕಿಗಳನ್ನು ತೆರೆಯುವುದು, ಫ್ಯಾನ್ ಗಳನ್ನು ಬಳಸಿ.ಮತ್ತು ಕೊಠಡಿಯ ಉಷ್ಣತೆ 35 ಡಿ.ಸೆಂಟಿಗ್ರೇಡ್ ಗಿಂತ ಕಡಿಮೆಯಿದ್ದಲ್ಲಿ ಸೀಲಿಂಗ್ ಫ್ಯಾನ್‌ಗಳನ್ನು ಬಳಸಿ. ಒಂದು ವೇಳೆ ಉಷ್ಣಾಂಶ 35 ಡಿ. ಸೆಂಟಿಗ್ರೇಡ್ ಗಿಂತಲೂ ಹೆಚ್ಚಾಗಿದ್ದರೆ ಮತ್ತು ಒಣಗಾಳಿ ಇದ್ದರೆ, ಫ್ಯಾನ್ ಬಳಸಿ. ಮುಚ್ಚಿದ ಕೋಣೆಯಲ್ಲಿ ನಿರಂತರ ಸಂಚರಿಸುವ ಬಿಸಿ ಗಾಳಿ ಆರೋಗ್ಯಕ್ಕೆ ಹಾನಿಯುಂಟುಮಾಡುವುದು.ಮತ್ತು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಟೇಬಲ್ ಫ್ಯಾನ್ ಹಾಗೂ ಏರ್ ಕೂಲರ್ಸ್ ಬಳಸಿ. ಬಲ್ಟ್ ಹಾಗೂ ಇತರೆ ವಿದ್ಯುತ್ ಸಾಧನಗಳನ್ನು ಆದಷ್ಟು ಕಡಿಮೆ ಬಳಸುವುದು ಸೂಕ್ತ. ಹಗಲಿನಲ್ಲಿ ಹೆಚ್ಚು ಸೂರ್ಯನ ಬೆಳಕು ಬೀಳುವ ಕಿಟಕಿಗಳಿಗೆ ವೆಟಿವರ್, ಒಣಹುಲ್ಲಿನಿಂದ ಮಾಡಿದ ನೈಸರ್ಗಿಕ ಪರದೆಗಳನ್ನು ಬಳಸಿ, ಲೋಹದ ಅಥವಾ ಪ್ಲಾಸ್ಟಿಕ್ ಪರದೆಗಳನ್ನು ಬಳಸುವುದು ಬೇಡ.ರಾತ್ರಿಯ ಹೊತ್ತು ಕಿಟಕಿಗಳನ್ನು ತೆರೆದಿಡುವುದು ಉತ್ತಮ. ಮನೆಯ ಎಲ್ಲೆಡೆ ನೀರನ್ನು ಪಾತ್ರೆಯಲ್ಲಿ ಸಂಗ್ರಹಿಸಿ ಇಟ್ಟರೆ ಅದು ಆವಿಯಾಗಿ ವಾತಾವರಣವನ್ನು ತಂಪಾಗಿಡುತ್ತದೆ. ನಿಮ್ಮ ಕಿಟಕಿಗಳಲ್ಲಿ ಹಾಗೂ ಸಾಧ್ಯವಾದರೆ ಮನೆಯ ಒಳಗೂ ಸಹ ಗಿಡಗಳನ್ನು ಇಡಿ. ಮನೆಯ ಒಳಗೂ ಹೊರಗು ಸಾಧ್ಯವಾದಷ್ಟು ಗಿಡಗಳು ಇರುವಂತೆ ನೋಡಿಕೊಳ್ಳಿ. ಕಟ್ಟಡಕ್ಕೆ ಆದಷ್ಟು ತಿಳಿ ಬಣ್ಣಗಳನ್ನು ಉಪಯೋಗಿಸುವುದು ಉತ್ತಮ. ಶಾಖವನ್ನು ಹೀರಿಕೊಳ್ಳುವ ಲೋಹ ಹಾಗೂ ತಗಡಿನ ಛಾವಣಿಗಳ ಬದಲಾಗಿ, ಚಾವಣಿಯನ್ನು ಎತ್ತರಿಸುವುದು, ನೈಸರ್ಗಿಕವಾದ ಮಣ್ಣಿನ, ಹುಲ್ಲಿನ, ತೆಂಗು ಅಥವಾ ಅಡಿಕೆ ಗರಿಗಳ ಛಾವಣಿಗಳನ್ನು ಬಳಸುವುದು ಮತ್ತು ಕಡಿಮೆ ಎತ್ತರವಿರುವ ಛಾವಣಿಗಳ ಮೇಲೆ ತೆಂಗು ಅಥವಾ ಅಡಿಕೆ ಗರಿಗಳನ್ನು ಬಳಸುವುದು ಸೂಕ್ತ
ಇದನ್ನು ನಮ್ಮ ಬೇಸಿಗೆಯ ದಿನಗಳಲ್ಲಿ ಪಾಲಿಸಿದರೆ ನಮ್ಮ ದೇಹದ ಜೊತೆ ಆರೋಗ್ಯನು ಕೂಡ ಒಳ್ಳೇದಗಿರುತ್ತದೆ, ತಮ್ಮ ಸಮಯವನ್ನು ನೀಡಿ ತಿಳಿಸಿದ್ದ DSO ಡಾ. ಹೆಚ್ ಡಿ ಶರತ್ ಬಾಬು
ಜಿಲ್ಲಾ ಸರ್ವೆಲಯನ್ಸ್ ಅಧಿಕಾರಿ ಬೆಂಗಳೂರು
ಹಾಗೂ ಜನರ ಮಧ್ಯೆ ಬೇಸಿಗೆಯ ಆರೋಗ್ಯ ಕೈಪಿಡಿ ಎಂದು ಬಿಡುಗಡೆ ಗೊಳ್ಳಿಸಿದ ಕರ್ನಾಟಕ ಸರ್ಕಾರ ಸರ್ವೇಕ್ಷಣಾ ಘಟಕ ಪ್ರಕಟಣೆ ಮುಖಾಂತರ ಜನರಿಗೆ ತಲುಪಲು ಅನುಗ್ರಹ ಮಾಡಿಕೊಟ್ಟಿದೆ.
ಲೇಖನ : ಪ್ರದೀಪ್ ಕುಮಾರ್ ದಾದಾನೂರ್ ವರದಿಗಾರರು
ಜೆಕೆ ನ್ಯೂಸ್ ಕನ್ನಡ ಹಾಗೂ ಬರಹಗಾರರು ಬೀದರ್.