ಕಮಲನಗರ: ತನಕರುಗಳಿಂದ ಅನೇಕ ಲಾಭದಾಯಕ ಗಳಿಕೆ ರೈತರು ಪಡೆದುಕೊಳ್ಳಬೇಕು. ಜಾನುವಾರು ನಮ್ಮ ಸಂಪತ್ತು, ದೇಶದ ಸಂಪತ್ತು ಎಂದು ಬೀದರ್ ಜಿಲ್ಲಾ ಪಶು ವೈದ್ಯಕೀಯ ಸೇವಾ ಇಲಾಖೆ ಜಿಲ್ಲಾ ಉಪನಿರ್ದೇಶಕರು ಡಾ ನರಸಪ್ಪ ಹೇಳಿದರು.
ರೈತರು ಹೈನುಗಾರಿಕೆಯಿಂದ ಆರ್ಥಿಕ ಸ್ಥಿತಿಯನ್ನು ಉತ್ತಮ ಸಾಧನೆ ಮಾಡಬಹುದು ಈ ಸಾಧನೆಗೆ ರೈತರು ಹೊಲಗದ್ದೆ ಜೊತೆಗೆ ಜಾನುವಾರಗಳನ್ನು ಸಾಕ್ಕಿ ಸಲುವಿ ಅದರಿಂದ ಅನೇಕ ಲಾಭ ಪಡೆದು ಆರ್ಥಿಕ ಬೆಳವಣಿಗೆ ಉತ್ತಮ ರೀತಿಯಿಂದ ಸಾಧನೆ ಮಾಡಬಹುದು.
ತಾಲೂಕಿನ ಹೊಳೆಸಮುದ್ರ ಗ್ರಾಮದಲ್ಲಿ ಮಹಾದೇವ ಮಂದಿರದ ಆವರಣದಲ್ಲಿ ಜಿಲ್ಲಾ ಪಂಚಾಯತ್ ಬೀದರ್ ಪಶು ಪಾಲನಾ ಪಶುವೈದ್ಯಕೀಯ ಸೇವಾ ಇಲಾಖೆ ಬೀದರ್ ಹಾಗೂ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ಹೊಳೆಸಮುದ್ರ ಸಂಯುಕ್ತಾಶ್ರಯದಲ್ಲಿ 2024-2025ನೇ ಸಾಲಿನ ವಿಸ್ತರಣಾ ಚಟುವಟಿಕೆಗಳು ಬಲಪಡಿಸುವ ಕಾರ್ಯಕ್ರಮದಡಿಯಲ್ಲಿ, ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಹಾಲು ಕರೆಯುವ ಸ್ಪರ್ಧೆಗಳಲ್ಲಿ ಉದ್ಘಾಟಿಸಿ ಮಾತನಾಡಿದರು.
ಇಂತಹ ವೇದಿಕೆ ಕಾರ್ಯಕ್ರಮಗಳು ಹಮ್ಮಿಕೊಂಡಿದ್ದು ತಮ್ಮೂರಿನ ಡಾಕ್ಟರ್ ಅಚ್ಯೂತ ಬಿರಾದಾರ್ ಅವರ ಸಹಕಾರದೊಂದಿಗೆ ಈ ಕಾರ್ಯಕ್ರಮವು ನೆರವೇರಿದು ಆನಂದವಾಗಿದೆ ಎಂದು ಹೇಳಿದರು.
ಹೆಚ್ಚಿನ ಸಂಖ್ಯೆಯಲ್ಲಿ ರೈತರು
ಪ್ರತಿಯೊಬ್ಬರ ಮನೆಯಲ್ಲಿ ದನಕರುಗಳ ಸಾಕಣೆ ಮಾಡುವಂತೆ ತಾವುಗಳು ಮುಂದೆ ಬರಬೇಕು ತಮ್ಮ ಕೆಲಸ ತಾವು ಮಾಡಲು ಹಿಂದೇಟು ಹಾಕ್ಬೇಡಿ ದನದರುಗಳಿಂದ ಸೆಗಣಿ, ಗೋಮೂತ್ರದಿಂದ ಲಾಭದಾಯಕ ಮಾಹಿತಿಗಳು ಉಪಯುಕ್ತವಾಗಿರುವದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೋಪಾಳರಾವ ಪಾಟೀಲ್ , ರಾಹುಲ್ ಪಾಟೇಲ್,ಮಾರುತಿ ಆಳಂದೆ ಅಂಕೋಶ ಗಾಯಕವಾಡ,
ಪಾಂಡುರಂಗ ಪಾಟೀಲ್, ಪ್ರದೀಪ್ ಪಾಟೀಲ್,ಮಧನ ಜಾಧವ,ಸುಧಾಕಾರ ಮುಗಳೆ,ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹಾಲು ಕರೆಯುವ ಸ್ಪರ್ಧೆಗಳಲ್ಲಿ ಪ್ರಥಮ ದ್ವಿತೀಯ ತೃತೀಯ ಬಹುಮಾನಗಳನ್ನು ನೀಡುವುದರೊಂದಿಗೆ ಇನ್ನುಳಿದ ರೈತರಿಗೆ ಖನಿಜ ಮಿಶ್ರಣ ಔಷಧಿಗಳನ್ನು ವಿತರಿಸಲಾಯಿತು.
ಸುಧಾಕಾರ ಮುಗಳೆ ಮಹಾದೇವ ವಾಡಿ ಕೆ ಎಂ ಎಫ್ ಇವರ ವತಿಯಿಂದ ನಗದು ಬಹುಮಾನ ಕೊಡಲಾಗಿತ್ತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರು ಮತ್ತು ಗ್ರಾಮಸ್ಥರು ಅಲ್ಲದೆ ಪಶುವೈದ್ಯಾಧಿಕಾರಿಗಳು ನಿರ್ಣಾಯಕರು ಡಾ ಶ್ರೀಕಾಂತ್ ಬೀರಾದಾರ , ನಾಗೇಶ್ ಗುರು, ಸಂಜು ಕುಮಾರ್ ಪಾಟೀಲ್, ಹಾಗೂ ಅಧಿಕಾರಗಳಾದ ಸುರೇಶ ದಿನಕರ,ಸಂಗಮೇಶ್,ಅಚ್ಯೂತ ಬೀರಾದಾರ , ಸಿದ್ದಾರ್ಥ್ ಜಡೇಶ ಭಜಂತ್ರಿ , ಶ್ರೀನಿವಾಸ್ ಸಂತೋಷ ಸಿದ್ರಾಮ ಪ್ರದೀಪ್ ಉಪಸ್ಥಿತರಿದ್ದರು.
೧ ಬಾಕ್ಸ್ ಮ್ಯಾಟರ್
*”ಸ್ಪರ್ಧೆಯಲ್ಲಿ ವಿಜೇತರಿಗೆ ವಿಶೇಷ ಬಹುಮಾನ
ವಿತರಣೆ “*
“1)ಪ್ರಥಮ ಬಹುಮಾನ ಹರಿದೇವ್ ಸಿಂಧೆ(ಆಕಳು), 2)ಎರಡನೇ ಬಹುಮಾನ ಸುಷ್ಮಾ ರಾಜಕುಮಾರ ಪಾಡೊದೆ(ಆಕಳು ),
3)ಮೂರನೇ ಬಹುಮಾನ ದಯಾನಂದ್ ಪ್ರಕಾಶ್ ಕದಂ(ಆಕಳು)
ಪ್ರಥಮ ಬಹುಮಾನ ಖಾಜಾ ಬಂದೇ ನವಾಜ್ ತಾಜುದ್ದೀನ್ ಪಠಾಣ(ಎಮ್ಮೆ)”ವಿಜೇತರಿಗೆ ಸನ್ಮಾನ ಮಾಡಿ ಬಹುಮಾನ ವಿತರಣೆ ಮಾಡಲಾಯಿತು.
೨ ಬಾಕ್ಸ್ ಮ್ಯಾಟರ್:
*ಭರವಸೆ:ಈಗಾಗಲೇ ನಿಮ್ಮೆಲ್ಲರ ಸಹಕಾರದಿಂದ ರೈತರು ಬೇಡಿಕೆಯಂತೆ ಪಶು ಆಸ್ಪತ್ರೆ ಬಂದಿದ್ದು ಬಹಳ ಸಂತೋಷದ ವಿಷಯ ಮುಂದಿನ ದಿನಗಳಲ್ಲಿ ಪಶುವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗವನ್ನು ಭರ್ತಿ ಮಾಡುವಂತೆ ಪ್ರಯತ್ನ ಮಾಡುತ್ತೇನೆ. —–ಡಾ,ನರಸಪ್ಪ ದೇವಗೊಂಡ ಜಿಲ್ಲಾ ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕರು*
ಕಾರ್ಯಕ್ರಮದ ಮೊದಲಿಗೆ ಡಾ. ನೀಲಕಂಠ ಚನ್ನಶೆಟ್ಟಿ ಸ್ವಾಗತಿಸಿದರು ಡಾ ಅಚ್ಯುತ ಬೀರಾದಾರ ವಂದನಾರ್ಪಣೆ ಮಾಡಿದರು.
ವರದಿ : ರಾಚಯ್ಯ ಸ್ವಾಮಿ