ಭೀಮವಾದ್ ದಲಿತ ಸಂಘರ್ಷ ಸಮಿತಿ ವತಿಯಿಂದ ಸದಸ್ಯರ ಮನೆಯ ಬಾಣಂತಿಗೆ ಚೆಕ ವಿತರಣೆ

ಹುಕ್ಕೇರಿ ತಾಲೂಕಿನ ಬಗರನಾಳ ಗ್ರಾಮದಲ್ಲಿ ಭೀಮವಾದ ದಲಿತ ಸಂಘರ್ಷ ಸಮಿತಿ ಬೆಂಗಳೂರು , ಇದರ ರಾಜ್ಯ ಸಂಚಾಲಕರಾದ ಶ್ರೀ ಬಿ ಏನ್ ವೆಂಕಟೇಶ ಅವರ ಘೋಷಣೆ ಮೇರೆಗೆ ಹಾಗೂ ರಾಜ್ಯ ಕೋರ್ ಕಮಿಟಿ ಅಧ್ಯಕ್ಷರಾದ ಸಿದ್ದಾರ್ಥ್ ಸಿಂಗೆ ರಾಜ್ಯ ಸಂಘಟನಾ ಸಂಚಾಲಕರಾದ ಸಂಜೀವ್ ಕಾಂಬಳೆ ಇವರ ಸೂಚನೆ ಮೇರೆಗೆ ಸಂಘಟನೆಯ ಸದಸ್ಯತ್ವ ಪಡೆದ ಕುಟುಂಬದ ಬಾಣಂತಿ ಮಹಿಳೆಯರಿಗೆ ಪೌಷ್ಟಿಕ ಆಹಾರ ಸೇವಿಸುವ ಸಲುವಾಗಿ ₹ 3000 ಗಳನ್ನು ಹುಕ್ಕೇರಿ ಭೀಮವಾದ ದಲಿತ ಸಂಘರ್ಷ ಸಮಿತಿ ಬೆಂಗಳೂರು ಸಂಘಟನೆ ಸದಸ್ಯರ ಮನೆಯಲ್ಲಿ ಮರಣ ಅಥವಾ ಹೆರಿಗೆ ಯಾಗಿದ್ದರೆ ಅಂತ ಸದಸ್ಯರಿಗೆ ಆರ್ಥಿಕ್ ಸಹಾಯದ ಉದ್ದೇಶ ದಿಂದ್ ಈ ರೀತಿ ಸಂಘಟನೆಯು ಸಹಾಯ ಮಾಡುತ್ತದೆ ಎಂದು ತಿಳಿಸಿದರು ಅದರಂತೆ ಸಂಘಟನೆಯ ಸದಸ್ಯರಾದ ಹುಕ್ಕೇರಿ ತಾಲೂಕಿನ ಬಗರನಾಳ ಗ್ರಾಮದ ಶ್ರೀಮತಿ ಮಲ್ಲವ್ವ ಭೀಮರಾಯ ತಳವಾರ್ ಇವರಿಗೆ ಚೆಕ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಸಮೀತಿ ಸದಸ್ಯರಾದ ಕೆಂಪಣ್ಣ ಶಿರಹಟ್ಟಿ ತಾಲೂಕಾ ಸಂಘಟನಾ ಸಂಚಾಲಕರಾದ ಭರಮಣ್ಣ ತಳವಾರ್ ಗ್ರಾಮ ಸಮಿತಿ ಸದಸ್ಯ ಆನಂದ್ ತಳವಾರ್ ಮತ್ತಿತರರು ಉಪಸ್ಥಿತರಿದ್ದರು.

ವರದಿ/ಸದಾನಂದ ಎಚ್

error: Content is protected !!