14ನೇ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ

ಕಲಬುರ್ಗಿ ಜಿಲ್ಲೆ ಕಾಳಗಿ ತಾಲೂಕಿನ ಹೊಸಳ್ಳಿ( ಎಚ್) ಕ್ರಾಸ್ ನ ದಿ ll ಶ್ರೀಮತಿ ಶ್ರೀದೇವಿ ಈ ಸ್ಮರಣಾರ್ಥ ಶಿಕ್ಷಣ ಮತ್ತು ಸಾಮಾಜಿಕ ಟ್ರಸ್ಟ್ (ರಿ ) ಮರಪಳ್ಳಿ ಸಂಚಾಲಿತ ಜ್ಞಾನ ಕಾರಂಜಿ ಪೂರ್ವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 14ನೇ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ನಿಮಿತ್ಯವಾಗಿ ಬೆಳಿಗ್ಗೆ ತಾಯಿ ತಂದೆಗೆ ಪಾದ ಪೂಜೆ ಮತ್ತು ಕೈ ತುತ್ತಿನ ಊಟ ಕಾರ್ಯಕ್ರಮ ಜರಗಿತು.
ರೈತ ನಮ್ಮ ದೇಶದ ಬೆನ್ನೆಲುಬು. ರೈತ ಬಿಸಿಲು ಮಳೆ ಎನ್ನದೆ ಹೊಲದಲ್ಲಿ ದುಡಿಯುತ್ತಾನೆ. ರೈತರಿಂದ ನಮ್ಮ ದೇಶ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ. ಈ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ರೈತರ ಮಕ್ಕಳೆ. ಆದ್ದರಿಂದ ಈ ಶಾಲೆಯಲ್ಲಿನ ಮಕ್ಕಳು ಮುಂದಿನ ದಿನಗಳಲ್ಲಿ ಉನ್ನತ ಅಧಿಕಾರಿಗಳಾಗುತ್ತಾ ರೆ. ಎಂದು ಪ್ರಗತಿಪರ ರೈತರಾದ ಶ್ರೀ ವೈಜನಾಥ್ ರೆಡ್ಡಿ ರಾಮಚಂದ್ರ ರೆಡ್ಡಿ ಚಿಂತಕೂಟಾ ಮಾತನಾಡಿದರು.
ಶಿಕ್ಷಣವು ಎಷ್ಟು ಮುಖ್ಯವಾಗಿರುತ್ತದೆ, ಅಷ್ಟೇ ಮುಖ್ಯ ಸಂಸ್ಕಾರವು ಕೂಡ ಮುಖ್ಯ ಆಗಿರುತ್ತದೆ.ಧಾರ್ಮಿಕ, ಸಂಸ್ಕಾರ ಸಂಸ್ಕೃತಿ,ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ, ಈ ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣವು ಮಕ್ಕಳಿಗೆ ದೊರೆಯುತ್ತಿದೆ. ಅನುಭವಿ ಶಿಕ್ಷಕರಿಂದ ಪಾಠ ಬೋಧನೆ ಮಾಡಲಾಗುತ್ತಿದೆ. ಈ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ದೊಡ್ಡ ವ್ಯಕ್ತಿಗಳಾಗಿ ಹೊರಹೊಮ್ಮಿ, ಈ ಶಾಲೆಗೆ ಮತ್ತು ತಂದೆ ತಾಯಿಗಳ ಕೀರ್ತಿಗೆ ಪಾತ್ರರಾಗುತ್ತಾರೆ. ನಮ್ಮ ಈ ಭಾಗದ ರೈತರನ್ನು ಗುರುತಿಸಿ ಸನ್ಮಾನ ಮಾಡಲಾಯಿತು. ಇದರಿಂದ ಈ ಶಾಲೆಯು ಮುಂದಿನ ಹಂತದಲ್ಲಿ ಉನ್ನತ ಮಟ್ಟದಲ್ಲಿ ಬೆಳೆಯುತ್ತದೆ.ಈ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿದ ಶ್ರೀ ಷ. ಬ್ರ ಸಿದ್ದಲಿಂಗ ಶಿವಾಚಾರ್ಯರು ಸುಕ್ಷೇತ್ರ ಹೊಸಳ್ಳಿ (ಎಚ್ ) ಶ್ರೀಗಳು ಮಾತಾಡಿ ಆಶೀರ್ವಚನ ನೀಡಿದರು.
ಈ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿರುವ ಶ್ರೀ ಷ ಬ್ರ. ಸಿದ್ದಲಿಂಗ ಶಿವಾಚಾರ್ಯರು ಸುಕ್ಷೇತ್ರ ಹಿರೇಮಠ ಹೊಸಳ್ಳಿ (ಎಚ್ ), ಶ್ರೀ ಅಣ್ಣಾರಾವ ಶಿವುದೆ ಪ್ರಗತಿಪರ ರೈತರು ಕುಡ್ದಳ್ಳಿ ಶ್ರೀ ವೈಜನಾಥ ರೆಡ್ಡಿ ರಾಮಚಂದ್ರ ರೆಡ್ಡಿ ಪ್ರಗತಿಪರ ರೈತರು ಚಿಂತಕೂಟಾ. ಶ್ರೀಮತಿ ರಂಜಿತಾ ಎಸ್.ಕಲಬುರ್ಗಿ ಅಧ್ಯಕ್ಷರು ಮಾತೃಭಾರತಿ ಸಮಿತಿ, ಶ್ರೀಮತಿ ಚೆನ್ನಮ್ಮ ಎನ್. ಮಠಪತಿ ಸದಸ್ಯರು ಮಾತೃಭಾರತಿ ಸಮಿತಿ, ಉಪಸ್ಥಿತಿರಿದರು.
ಈ ಸಂಸ್ಥೆಯ ಶ್ರೀ ಭೀಮರಾವ್ ಎನ್.ಜಮಾದಾರ ಅಧ್ಯಕ್ಷರು ದಿ ll ಶ್ರೀಮತಿ ಶ್ರೀದೇವಿ ಈ ಸ್ಮರಣಾರ್ಥ ಶಿಕ್ಷಣ ಮತ್ತು ಸಾಮಾಜಿಕ ಟಸ್ಟ್ ರಿ ಮರಪಳ್ಳಿ, ಈ ಸಂಸ್ಥೆಯ ಕಾರ್ಯದರ್ಶಿ ಶ್ರೀ ವೀರೇಶ್ ಬಿ ಜಮಾದಾರ. ಶ್ರೀ ಸಂಜುವಕುಮಾರ್ ಬಿ ಜಮಾದಾರ, ಈ ಕಾರ್ಯಕ್ರಮದ ಶ್ರೀಮತಿ ಕಸ್ತೂರಿ ಶಿಕ್ಷಕಿ ನಿರೂಪಣೆ ಮಾಡಿದರು. ಶ್ರೀ ದಸರಥ ಎಸ್ ದೇವರು ಸ್ವಾಗತಿಸಿದ್ದರು. ಕುಮಾರಿ ರಾಣಿ ವಂದಿಸಿದ್ದರು. ಈ ಶಾಲೆಯ ಮುಖ್ಯ ಗುರುಗಳು, ಶಿಕ್ಷಕರು ಮತ್ತು ಮುದ್ದು ಮಕ್ಕಳು ಪೋಷಕರು ಸರ್ವ ಸೇವಾ ಬಳಗದವರು ಭಾಗವಹಿಸಿದರು. ನಂತರ ಮುದ್ದು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ವರದಿ: ರಮೇಶ್ ಕುಡಹಳ್ಳಿ

error: Content is protected !!