ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್‌ನ ನೂತನ ಸಂಘದ ಉದ್ಘಾಟನಾ ಸಮಾರಂಭ

ಬೆಳಗಾವಿ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ ಅಣ್ಣಾ ಜಾರಕಿಹೊಳಿ ಅವರು ಬೆಳಗಾವಿ ಶಿವಬಸವ ‌ನಗರದಲ್ಲಿ‌ ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್‌ನ ನೂತನ ಸಂಘದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು

ಇಂದು ಜಗತ್ತು ಅತ್ಯಂತ ವೇಗದಿಂದ ಬದಲಾಗುತ್ತಿದೆ. ಜನರು ತಕ್ಷಣದ ಮಾಹಿತಿಗೆ, ನಿಖರವಾದ ವರದಿಗೆ ನಿರೀಕ್ಷಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಾಧ್ಯಮಗಳು ಸತ್ಯದ ದೀಪದಂತೆ ಕೆಲಸ ಮಾಡಬೇಕು. ಸತ್ಯ, ನೈತಿಕತೆ, ನಿಷ್ಠೆ ಮತ್ತು ಜನಪರ ಹಿತವೆಂಬುದು ಮಾಧ್ಯಮದ ಮೂಲತತ್ವವಾಗಿರಬೇಕು. ಮಾಧ್ಯಮವು ಕೇವಲ ಸುದ್ದಿ ಪ್ರಸಾರ ಮಾಡುವ ಸಾಧನವಾಗಿಲ್ಲ. ಅದು ಸಮಾಜದ ಪ್ರತಿಬಿಂಬ, ಸರಕಾರ ಮತ್ತು ಜನತೆ ನಡುವೆ ಸೇತುವೆಯಾಗಿದೆ. ಸಕಾರಾತ್ಮಕ ಬೆಳವಣಿಗೆ, ಜನಜಾಗೃತಿ, ಮತ್ತು ಸಾರ್ವಜನಿಕ ಹಿತಕ್ಕಾಗಿ ಮಾಧ್ಯಮದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಮಾತನಾಡಿದರು ಮಾಧ್ಯಮ ಯಾರಿಗೆ ಸೀಮಿತ್ ವಲ್ಲ ಅದು ಎಲ್ಲರಿಗೂ ವಂದೇ ಯಾಗಿರಬೇಕು ಸಮಾಜದ ಏಳಿಗಾಗಿ ಹಗಲಿರುಳು ಮಾಧ್ಯಮದ ದವರು ದುಡಿಯಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ.
ಜಗದೇಶ್ ಶೆಟ್ಟರ್.ಮೊಹಮ್ಮದ್ ರೋಷನ್. ಹಾಗೂ ಆಡಳಿತ ಅಧಿಕಾರಿಗಳು ಗಣ್ಯಮಾನ್ಯರು ಮಾಧ್ಯಮ ಮಿತ್ರರು.ರಾಜಕೀಯ ಪ್ರಾಮುಖ್ಯರು ಭಾಗಿಯಾಗಿದ್ದರು ಹಾಗೂ ಮತ್ತಿತರು ಉಪಸ್ಥಿತರಿದ್ದರು.

ವರದಿ : ಸದಾನಂದ ಎಚ್

error: Content is protected !!