ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ್ ನಗರದಲ್ಲಿ ಗಾಂಧಿ ಸರ್ಕಲ್ ನಿಂದ ಚನ್ನಮ್ಮ ಸರ್ಕಲ್ ವರೆಗೆ ಕ್ಯಾಂಡಲ್ ಮತ್ತು ಟಾರ್ಚ್ ಹಚ್ಚಿ ಪ್ರತಿಭಟನೆ : ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 27 ಮಂದಿ ಅಮಾಯಕರ ಸಾವಿಗೀಡಾಗಿರುವ ಘಟನೆಗೆ ಎಸ್‌ಡಿಪಿಐ ತೇರದಾಳ್ ವಿಧಾನಸಭಾ ಕ್ಷೇತ್ರದ ವತಿಯಿಂದ ತೀವ್ರ ಖಂಡನೆ ವ್ಯಕ್ತಪಡಿಸಲಾಯಿತು ಹಾಗೂ ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಸಂತಾಪ ಸೂಚಿಸಲಾಯಿತು.
ದೇಶದ ಶಾಂತತೆ ಮತ್ತು ಭದ್ರತೆಯನ್ನು ಭಂಗಗೊಳಿಸುವ, ಅಮಾಯಕರ ರಕ್ತ ಹರಿಸಲು ಹಿಂದೆ ಮುಂದೆ ನೋಡುವುದಿಲ್ಲದ ಭಯೋತ್ಪಾದಕರ ವಿರುದ್ಧ ದೇಶದ ಪ್ರತಿಯೊಬ್ಬ ನಾಗರಿಕನು ಏಕಕಟ್ಟಾಗಿ ನಿಲ್ಲಬೇಕಾದ ಅವಶ್ಯಕತೆಯಿದೆ.
“ಭಯೋತ್ಪಾದಕರಿಗೆ ಯಾವುದೇ ಜಾತಿ ಅಥವಾ ಧರ್ಮವಿಲ್ಲ. ಇಂತಹ ಕ್ರೂರ ಕೃತ್ಯಗಳು ಇವರ ಧರ್ಮವಾಗಿದೆ. ನಾವು ಎಲ್ಲರೂ ಮೊದಲು ಭಾರತಿಯರಾಗಬೇಕು. ಧರ್ಮ, ಜಾತಿ, ಭಾಷೆ ಎಂಬ ಭೇದಗಳನ್ನು ಮರೆತು ದೇಶದ ಏಕತೆ ಮತ್ತು ಸಹೋದರತೆಯನ್ನು ಕಾಪಾಡಬೇಕು,” ಎಂದು ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಬಾರಕ್ ಅಲ್ಲಾಖಾನ್ ಹೇಳಿದರು.“2019 ರ ಪುಲ್ವಾಮಾ ದಾಳಿಯಲ್ಲಿ 350 ಕೆಜಿ RDX ಹೇಗೆ ಬಂದಿತು ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಇತ್ತೀಚಿನ ದಾಳಿಯಲ್ಲಿಯೂ ಗುಪ್ತಚರ ಇಲಾಖೆಯ ವೈಫಲ್ಯ ಸ್ಫುಟವಾಗಿದೆ. ದೇಶದ ವಿರೋಧಿಗಳ ವಿರುದ್ಧ ಪ್ರತಿಯೊಬ್ಬರೂ ಒಗ್ಗಟ್ಟಾಗಿ ನಿಲ್ಲಬೇಕು” ಎಂದು ಜಿಲ್ಲಾ ಕಾರ್ಯದರ್ಶಿ ಉಮರ್ ಕಾಲಿಖಾನ್ ಮತ್ತು ಆಫೀಸ್ ಆಬಿದ್ ನದಾಫ್ ಹೇಳಿದರು. ಕ್ಯಾಂಡಲ್ ಮಾರ್ಚ್ ಪ್ರತಿಭಟನೆಯಲ್ಲಿ ಗೌಸ್ ನದಾಫ್ ಯಾಸಿನ್ ಬಳಗಾರ ಮೌಲಾನ ರಂಜಾನ್ ಫಾರೂಕ್ ಪಕಾಲಿ ದಸ್ತಗೀರ್ ನದಾಫ್ ಶಾನೂರ್ ಚಿತವಾಡಗಿ ಮತ್ತು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ಅಕ್ರಮ ಜಮಾದಾರ್