ಶಿರಡಾನ : ಮಾತಂಗಿ ದೇವಿ ಜಾತ್ರೆ ಹುಕ್ಕೇರಿ ತಾಲೂಕಿನ ಶಿರಡಾನ್ ಗ್ರಾಮದಲ್ಲಿ ಬೆಳಿಗ್ಗೆ ಮಾತಂಗಿ ದೇವಿ ಜಾತ್ರೆ ವಿಜೃಂಭಣೆಯಿಂದ ಜರುಗಿತು ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಮದ ಮಹಿಳೆಯರು ಬಂದು ದೇವಿಗೆ ಉಡಿ ತುಂಬುವ ಕಾರ್ಯ ನಿರ್ವಹಿಸಿದರು ಪಾರಂಪರಿಕ ವಾಗಿ ಜಾತ್ರೆಯನ್ನು ನಡೆಸುಕೊಂಡು ಬಂದಿರುತ್ತಾರೆ ಈ ವರ್ಷವು ಜಾತ್ರೆಯನ್ನು ಹಳೆಯ ವಾದ್ಯಗಳು ಹಿಂತಹ ಜಾತ್ರೆಯಲ್ಲಿ ಮಾತ್ರ ಕಾಣಲಾಗುವದು ಎಂದರು ತಪಾಗಲಾರದು ಹಾಗೂ ವಿವಿಧ ವಾದ್ಯಗಳಿಂದ ಜಾತ್ರೆಯ ಮೆರವು ಹೆಚ್ಚಿತು ಮತ್ತು ಮಧ್ಯಾಹ್ನ ಅನ್ನ ಸಂತರ್ಪಣೆ ಜರುಗಿತು ಮಧ್ಯಾಹ್ನದ ನಂತರ ಕುದುರೆ ಶರತ್ತು ಮತ್ತು ಸೈಕಲ್ ಶರತ್ತು ಜರುಗಿತು ಶರತ್ತುಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತ್ತು ನಂತರ ಮಾತಂಗಿ ದೇವಿಯ ಜಾತ್ರೆಗೆ ಉದ್ಯಮಿ ಸನ್ಮಾನ್ಯ ಶ್ರೀ ಪವನ್ ರಮೇಶ್ ಕತ್ತಿ ಆಗಮಿಸಿ ಆಶೀರ್ವಾದ ಪಡೆದರು…..ಗ್ರಾಮದ ಎಲ್ಲಾ ಜನರು ಭಾಗವಹಿಸಿದ್ದರು ಪ್ರತಿ ವರ್ಷವೂ ಜರುಗುತ್ತಾ ಬಂದಿರುವುದು ವಿಶೇಷ….. ಕೆಂಪಣ್ಣ ಮಾದರ ಇವರು ಜಾತ್ರೆಯ ನೇತೃತ್ವವನ್ನು ವಹಿಸಿದ್ದರು ಈ ಸಂದರ್ಭದಲ್ಲಿ ಕೆಂಪಣ್ಣಾ ಮಾದರ. ರಾಚಯ್ಯಾ ಹಿರೆಮಠ. ಸತಿಗೌಡಾ ಪಾಟೀಲ. ಸಿದ್ದಗೌಡಾ ಪಾಟೀಲ. ಈರಗೌಡಾ ಪಾಟೀಲ. ಸಂದೀಪ ಪಾಟೀಲ. ಊರಿನ ಗಣ್ಯ ಮಾನ್ಯರು ಸಮಸ್ತ ಗ್ರಾಮದ ಜನರು ಉಪಸ್ಥಿತರಿದ್ದರು.
ವರದಿ ಸದಾನಂದ ಎಚ