ಬೆಳಗಾವಿ ಜಿಲ್ಲೆ ರಾಮದುರ್ಗ ತಹಶೀಲ್ದಾರ ಇವರ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಪಹಲ್ಯಾಮ್‌ನಲ್ಲಿ ನಡೆದ ಉಗ್ರರ ದಾಳಿ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ವಿಧ್ಯಾರ್ಥಿಗಳ ಜನಿವಾರ ತೆಗೆಸಿದ ಕ್ರಮವನ್ನು ಖಂಡಿಸಿ ಮನವಿ ನೀಡಿದರು.
ಪಹಲ್ಯಾಮ್‌ನಲ್ಲಿ ಇಬ್ಬರು ಕನ್ನಡಿಗರು ಹಾಗೂ ವಿದೇಶಿಯರು ಸೇರಿ ಒಟ್ಟು 26 ಅಮಾಯಕ ಜನರು ಉಗ್ರರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಅಲ್ಲಿ ಭಯದ ವಾತಾವತವರಣ ಉಂಟಾಗಿದೆ. ವಿಶೇಷವಾಗಿ ಪುರುಷರನ್ನು ಹಿಂದುಗಳೆಂದು ಖಚಿತಪಡಿಸಿಕೊಂಡು ಗುಂಡಿನದಾಳಿ ಮಾಡಿ ಕೊಲೆ ಮಾಡಿದ್ದು ಅತ್ಯಂತ ಖಂಡನೀಯ.
ಶಾಂತಿ ನೆಲೆಸಿದ ಕಾಶ್ಮೀರದಲ್ಲಿ ಸಹಿಸದ ಉಗ್ರರು ಮನುಷತ್ವ ಮರೆತು ದಾಳಿ ಮಾಡಿದ್ದು ಭಾರತಾಂಬೆಯ ಮಕ್ಕಾಳಾದ ನಾವು ಸಹಿಸುವದಿಲ್ಲ. ಈ ಘಟನೆಯಿಂದ ಪ್ರತಿಯೊಬ್ಬ ಪ್ರಜೆಗೂ ನೋವುಂಟು ಮಾಡಿ ಕಿಚ್ಚನ್ನು ಎಬ್ಬಿಸಿದೆ. ಹಿಂಸೆಯ ಬೀಜವನ್ನು ಬಿತ್ತುತ್ತುರುವವರನ್ನು ಪತ್ತೆ ಹಚ್ಚಿ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕು.
ಅಲ್ಲದೇ ಕರ್ನಾಟಕ ಸರಕಾರ ಶಿವಮೊಗ್ಗ, ಬೀದರ ಹಾಗೂ ಧಾರವಾಡ ಸಿ.ಇ.ಟಿ. ಪರೀಕ್ಷಾ ಕೇಂದ್ರಗಳಲ್ಲಿ ಪವಿತ್ರ ಜನಿವಾರ ಧರಿಸಿದ ವಿಧ್ಯಾರ್ಥಿಗಳನ್ನು ಸಿ.ಇ.ಟಿ. ಪರೀಕ್ಷಾ ಬರೆಯುವದಕ್ಕೆ ಅವಕಾಶ ನೀಡದೇ ಇರುವುದು ಮತ್ತು ವಿಧ್ಯಾರ್ಥಿಗಳ ವಿರೋಧದ ನಡುವೆಯೂ ಜನಿವಾರ ಕತ್ತರಿಸಿ ತೆಗೆಯಿಸಿದ ಸರಕಾರ ಕ್ರಮ ಅತ್ಯಂತ ಖಂಡನೀಯ ಹಾಗೂ ಅಕ್ಷಮ್ಯ ಅಪರಾಧ. ಸರಕಾರದ ನಡುವಳಿಕೆಯನ್ನು ತೀರ್ವವಾಗಿ ರಾಮದುರ್ಗ ಮಂಡಳದ ವಿಶ್ವಹಿಂದೂ ಪರಿಷದ್, ಭಜರಂಗದಳ ಮತ್ತು ಹಿಂದೂ ಪರ ಸಂಘಟನೆಗಳು ತೀರ್ವವಾಗಿ ಖಂಡಿಸುತ್ತೇವೆ. ಸಂಬಂಧ ಪಟ್ಟ ಅಧಿಕಾರಿಗಳ ಮೇಲೆ ಕರ್ನಾಟಕ ಸರಕಾರ ಕಠಿಣ ಕ್ರಮ ಜರುಗಿಸಿ ವಿಧ್ಯಾರ್ಥಿಗಳಿಗೆ ನ್ಯಾಯ ಒದಗಿಸಿ ಕೊಡಬೇಕು. ಈ ತರಹದ ಘಟನೆ ಮರುಕಳಸದಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಪ್ರಕಾಶ. ರಾ. ಸುಳಿಭಾಂವಿ
ಅಧ್ಯಕ್ಷರು ವಿಶ್ವ ಹಿಂದೂ ಪರಿಷದ್,ವಿ ಕೆ ಜೋಶಿ, ಅಮರ್ ದೂತ,S N ಸರಡಗಿ ಇನ್ನಿತರರು ಉಪಸ್ಥಿತರಿದ್ದರು
ವರದಿ, : md ಸೋಹಿಲ ಭೈರಕದಾರ ಜೆಕೆ
