ಉತ್ಸವ ಪಟೇಲ್ 625ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ

ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು ಹಾಸನ ನಗರದ ವಿಜಯ ಸ್ಕೂಲ್ ನ ವಿದ್ಯಾರ್ಥಿ ಉತ್ಸವ ಪಟೇಲ್ 625ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಡಿ.ಟಿ. ಪ್ರಕಾಶ್ ಮತ್ತು ಆಶಾ ರಾಣಿ ದಂಪತಿಯ ಪುತ್ರನಾದ ಉತ್ಸವ ಪಟೇಲ್ ಸಣ್ಣ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ಅಪೂರ್ವ ಸಾಧನೆ ಮಾಡಿದ್ದಾರೆ,

ಈ ಗೆಲುವು ಹಾಸನ ಜಿಲ್ಲೆಗೆ ಹೆಮ್ಮೆಯ ಕ್ಷಣವಾಗಿದ್ದು ಶಿಕ್ಷಕರು ಪೋಷಕರು ಹಾಗೂ ಸಹಪಾಠಿಗಳು ಉತ್ಸವ ಸಾಧನೆಯನ್ನು ಶ್ಲಾಗಿಸಿದ್ದಾರೆ.

ವಿಜಯ ಸ್ಕೂಲ್ ನ ಆಡಳಿತ ಮಂಡಳಿಯು ಉತ್ಸವ ನ ಈ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

error: Content is protected !!