ಹಿಡಕಲ್ ಡಾಮ್ : ಹುಕ್ಕೇರಿ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಆಶ್ರಯದಲ್ಲಿ, ವಿಶ್ವ ಕಾರ್ಮಿಕ ದಿನಾಚರಣೆಯ ಅಂಗವಾಗಿ, ಮಹಿಳಾ ಕಲ್ಯಾಣ ಸಂಸ್ಥೆಯ ಆಶ್ರಯ ಶಕ್ತಿ ಸದನದ ಸಭಾ ಭವನದಲ್ಲಿ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ವೃದ್ಧಾಶ್ರಮದ ಮಹಿಳೆಯರಿಗೆ ಆತ್ಮವಿಶ್ವಾಸ ತುಂಬುವ, ಕಾರ್ಮಿಕ ಇಲಾಖೆ ಸವಲತ್ತುಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಯಿತು. ಕಾರ್ಮಿಕ ಘಟಕದ ಅಧ್ಯಕ್ಷ ಸತೀಶ ಪ್ರಕಾಶ್ ದಿನ್ನಿಮನಿ ಅಧ್ಯಕ್ಷತೆ ವಹಿಸಿದ್ದರು.ವೇದಿಕೆ ಮೇಲೆ ಉಪಾಧ್ಯಕ್ಷರಾದ ಶ್ರೀಮತಿ ಕವಿತಾ ಬೇವಿನಕಟ್ಟಿ, ಲಕ್ಷ್ಮಣ ಪಾಟೀಲ, ಪ್ರಧಾನ ಕಾರ್ಯದರ್ಶಿ ಭೀಮಾನಂದ ಮುದಕಣ್ಣವರ, ಸಹ ಕಾರ್ಯದರ್ಶಿ ಲಗಮಣ್ಣ ಜಯಕರ, ಸುಪರಿಂಟೆಂಡೆಂಟ್ ಶ್ರೀಮತಿ ದಾಕ್ಷಾಯಿಣಿ ಮಠಪತಿ,ಟೇಲರಿಂಗ ವಿಭಾಗದ ಮಂದಾಕಿನಿ ಹಟ್ಟಿ, ಕಿರಣ ಬಾಗೇವಾಡಿ, ಜಿಲ್ಲಾ ಕಮೀಟಿಯ ವಾಸುದೇವ ನಿಂಗಪ್ಪಗೋಳ, ವಿಠಲ ತಳವಾರ, ಅನಿಲಕುಮಾರ ಕಾಂಬಳೆ, ಹುಕ್ಕೇರಿ ನಗರ ಉಪಾಧ್ಯಕ್ಷ ಇಬ್ರಾಹಿಂ ಮುಲ್ಲಾ ವೇದಿಕೆ ಮೇಲಿದ್ದರು. ಆರಂಭದಲ್ಲಿ ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಾಯಿತು. ವಿದ್ಯಾರ್ಥಿಗಳ ಹೆಸರಿನಲ್ಲಿ ಕೇಕ್ ಕಟ್ ಮಾಡಲಾಯಿತು. ಶಂಕರ ಖಾತೇದಾರ, ಲಕ್ಷ್ಮೀ, ಶಾಂತಾ ಹೆಳವಿ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಶಕೀಲ ಮೋಮಿನದಾದಾ, ಭೀಮಾನಂದ ಮುದಕಣ್ಣವರ ಮಾತನಾಡಿದರು. ನಂತರ ಭೀಮಪ್ಪ ಮುದಕಣ್ಣವರ ಕಾರ್ಯಕ್ರಮ ನಿರೂಪಿಸಿದರು. ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ವರದಿ : ಸದಾನಂದ್ ಹೆಚ್