ಸುರಗ ಜಕ್ಕನಹಳ್ಳಿ ಗ್ರಾಮ ಪಂಚಾಯತಿಯನ್ನು ಕ್ಷುಲ್ಲಕ ಕಾರಣ ಇಟ್ಟುಕೊಂಡು ಮಾಧ್ಯಮಗಳಲ್ಲಿ ವೈಭವಿಕರಿಸುವುದಾಗಲಿ ಅಥವಾ ತೇಜೋವಧೆ ಮಾಡುವುದಾಗಲಿ ಬೇಡ – ಗ್ರಾಮ ಪಂಚಾಯತಿ ಅಧ್ಯಕ್ಷ

ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಮುನಿಕೃಷ್ಣ ದಿನಾಂಕ 17.05.2025 ರಂದು ಶನಿವಾರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗ್ರಾಮ ಪಂಚಾಯತಿ ಅಧ್ಯಕ್ಷ ಮುನಿಕೃಷ್ಣ ರವರು ಮಾಧ್ಯಮಗಳಲ್ಲಿ ನಮ್ಮ ಪಂಚಾಯಿತಿಯನ್ನು ವಿವಿಧ ರೀತಿಯಲ್ಲಿ ಕಾಣದ ಕೈಗಳ ಕೈವಾಡದಿಂದ ಒಂದಲ್ಲಾ ಒಂದು ರೀತಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವುದು ಬೇಸರದ ವಿಷಯವಾಗಿದೆ. ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾನ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಗ್ರೇಟರ್ ಬೆಂಗಳೂರು ಮಾಡಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಆಡಳಿತ ಅಧಿಕಾರಿಗಳ ನೇಮಕ ಮಾಡುತ್ತಿದ್ದಾರೆ.
ಗ್ರಾಮ ಪಂಚಾಯಿತಿಗಳು ಎಷ್ಟು ದಿನಗಳ ಕಾಲ ಇರುತ್ತದೆ ಗೊತ್ತಿಲ್ಲ, ಆದರೆ ಯಾವುದೇ ತಮ್ಮ ಮಾಧ್ಯಮಗಳಿಗೆ ದೂರು ಬಂದರೂ ನನ್ನನ್ನು ಭೇಟಿ ಮಾಡಿ ಯಾವುದೇ ತಪ್ಪುಗಳಿದ್ದರೂ ಮುಖಾಮುಖಿ ಚರ್ಚಿಸಿ ನಂತರ ಸುದ್ದಿ ಮಾಡಿ, ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವುದರಿಂದ ನೀವು ಸುದ್ದಿ ಮಾಡುವುದಕ್ಕೆ ನನ್ನ ಅಭ್ಯಂತರವಿಲ್ಲ ಆದರೆ ನಮ್ಮ ಪಂಚಾಯ್ತಿಯ ಯಾವುದೇ ವಿಷಯ ಬಂದಲ್ಲಿ ನನ್ನಲ್ಲಿ ಚರ್ಚಿಸಿ ಸುದ್ದಿಮಾಡಿ ಎಂದು ಮನವಿ ಮಾಡಿದರು
ಕ್ರಿಮಿನಲ್ ಕೇಸ್ ವುಳ್ಳ ಬಿಲ್ ಕಲೆಕ್ಟರ್ ರೂಪ ರವರನ್ನು ಗ್ರಾಮ ಪಂಚಾಯಿತಿಯಲ್ಲಿ ಪುನರ್ ಆಯ್ಕೆ ಮಾಡಲು ಬರುವುದಿಲ್ಲ.

ಜಿಲ್ಲಾ ಪಂಚಾಯಿತಿ ಆದೇಶದಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ನಿರ್ದೇಶನದಂತೆ ಸುರುಗಜಕ್ಕನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರೂಪ ಅವರ ನನ್ನ ಮೇಲೆ ಯಾವುದೇ ರೀತಿಯ ದೂರುಗಳು ಲಿಖಿತ ರೂಪದಲ್ಲಿ ಇಲ್ಲದಿರುವುದ ರಿಂದ ನನ್ನನ್ನು ಕರ್ತವ್ಯಕ್ಕೆ ತೆಗೆದುಕೊಳ್ಳಿ ಎಂದು ಗ್ರಾಮ ಪಂಚಾಯಿತಿಗೆ ಲಿಖಿತ ದೂರ ಅರ್ಜಿ ಸಲ್ಲಿಸಿದ್ದು,

ಈ ಮನವಿಯಲ್ಲಿ ನನ್ನ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು ನನ್ನನ್ನು ಕರ್ತವ್ಯಕ್ಕೆ ಹಾಜರು ಮಾಡವಂತೆ ಮನೆ ಮಾಡಿದರು ಆದ್ದರಿಂದ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಎಲ್ಲಾ ಸದಸ್ಯರ ತೀರ್ಮಾನದಂತೆ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಅನುಮೋದಿಸಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶಕ್ಕಾಗಿ ಕಳಿಸಿದ್ದೇವೆ.
ಬಿಲ್ ಕಲೆಕ್ಟರ್ ರೂಪವರನ್ನು ಕರ್ತವ್ಯಕ್ಕೆ ಮರು ಆಯ್ಕೆ ಮಾಡಲು ಮಾನ್ಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಲಿಖಿತ ರೂಪದ ಆದೇಶ ಬಂದರೆ ಮಾತ್ರ ಪರಿಗಣಿಸಲಾಗುವುದು ಇಲ್ಲವಾದಲ್ಲಿ ನನಗೆ ವೈಯಕ್ತಿಕ ರೂಪಾರವನ್ನು ತೆಗೆದುಕೊಳ್ಳುವ ಇಚ್ಛಾಶಕ್ತಿ ಇಲ್ಲ, ನಾನು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮೂರು ಆಗಿದ್ದು, ಇದುವರೆಗೂ ಪಂಚಾಯಿತಿಯಲ್ಲಿ ಬೇಸಿಗೆಯ ಕಾಲವಾಗಿರುವುದರಿಂದ ಪಂಚಾಯತಿಯ ಪ್ರತಿ ಗ್ರಾಮದಲ್ಲೂ ನೀರಿನ ತತ್ವಾರ ಸಮಸ್ಯೆಗಳು ಉಂಟಾಗಿದ್ದರಿಂದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶದಂತೆ ಸಮಾಜದ ಸಾಮಾನ್ಯ ಜನತೆಗೆ ನೀರಿನ ಭವಣೆಯನ್ನು ನೀಗಿಸುವ ಸಲುವಾಗಿ ಸುರಗ ಜಕ್ಕನಹಳ್ಳಿ ಗ್ರಾಮ ಪಂಚಾಯಿತಿ ಟೊಂಕ ಕಟ್ಟಿ ನಿಂತಿದೆ. ಪಂಚಾಯತಿ ಎಲ್ಲಾ ಸದಸ್ಯರನ್ನು ಒಗ್ಗೂಡಿಸಿಕೊಂಡು ಪಕ್ಷಭೇದ ಮರೆತು ಪಂಚಾಯತ್ ರಾಜ್ ಕಾಯ್ದೆ ಉಲ್ಲಂಘಿಸದೆ, ಸಂವಿಧಾನಾತ್ಮಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನನಗೆ ಸಿಕ್ಕ ಅವಕಾಶದಲ್ಲಿ ನನಗೆ ಮತ ಹಾಕಿದ ಪ್ರತಿ ಮತದಾರರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಮುನಿಕೃಷ್ಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

error: Content is protected !!