ಚಿಂಚೋಳಿ ಚಂದಾಪುರ ಪಟ್ಟಣದ ಜೈ ಭೀಮ ನಿವಾಸಿಗಳ ಗೋಳು ಕೇಳುವರು ಯಾರು ಇಲ್ಲದಂತಾಗಿದೆ, ರಸ್ತೆ ಅಕ್ಕಪಕ್ಕದಲ್ಲಿ ಗಿಡ ಗಂಟೆಗಳು ತುಂಬಾ ಬೆಳೆದಿದ್ದು ಪುರಸಭೆ ಸಿಬ್ಬಂದಿಗಳು ಸ್ವಚ್ಛತಾ ಕ್ರಮ ಕೈಗೊಳ್ಳದೆ ಸಾರ್ವಜನಿಕರು ಓಡಾಡಲು ಅಂಜುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಮುಖ್ಯ ವಿಷಯವೇನೆಂದರೆ ಪುರಸಭೆ ಅಧ್ಯಕ್ಷರು ಕೂಡ ಅದೇ ಜೈ ಭೀಮ ನಗರದಲ್ಲಿ ವಾಸಿಸುತ್ತಿದ್ದು ಅವರು ಕೂಡ ಇಂಥ ಒಂದು ಸಣ್ಣ ಸಮಸ್ಯೆ ಬಗೆಹರಿಸಿರುವುದು ! ವಿಷ ಜಂತುಗಳು ಅದರಲ್ಲಿ ಕುಂತಿದ್ದು ಇದರಿಂದ ನಿವಾಸಿಗಳು ರಾತ್ರಿಯ ಸಮಯದಲ್ಲಿ ಓಡಾಡಲು ತುಂಬಾ ಹೆದರುತ್ತಿದ್ದಾರೆ, ಪುರಸಭೆ ಸಿಬ್ಬಂದಿಗಳ ನಿರ್ಲಕ್ಷದಿಂದ ಜೈ ಭೀಮ ನಗರದ ನಿವಾಸಿಗಳು ರಸ್ತೆ ಅಕ್ಕ ಪಕ್ಕದಲ್ಲಿರುವಂತ ಗಿಡಗಂಟೆಗಳನ್ನು ತಾವೇ ಸ್ವಚ್ಛಗೊಳಿಸುವಂತಹ ಕೆಲಸ ಮಾಡುತ್ತಿದ್ದಾರೆ. ಈಗಲಾದರೂ ಜನ ಪ್ರತಿನಿಧಿಗಳಾಗಲಿ, ಪುರಸಭೆ ಮುಖ್ಯ ಅಧಿಕಾರಿಗಳಾಗಲಿ, ಪುರಸಭೆ ಸಿಬ್ಬಂದಿಗಳಾಗಲಿ, ನಿದ್ದೆಯಿಂದ ಎದ್ದು ಜೈ ಭೀಮ ನಗರ ನಿವಾಸಿಗಳ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು. ವಾರ್ಡ್ ನಂಬರ್ 16 ರ ನಿವಾಸಿ ಪ್ರಶಾಂತ್ ಕಟ್ಟಿ ಪ್ರತಿಕ್ರಿಯಿಸಿ ಜೈ ಭೀಮ ನಗರದಲ್ಲಿ ಗಿಡ ಮುಳ್ಳುಗಳು ದಾರಿಯ ಪಕ್ಕ ತುಂಬಾ ಬೆಳದಿದೆ ಮತ್ತು ನಾಲೆಗಳು ಸ್ವಚ್ಛಗೊಳಿಸದೆ ವಾಸನೆ ಬರುತ್ತಿದೆ, ಪುರಸಭೆಯ ಸಿಬ್ಬಂದಿ ವರ್ಗ ಎಷ್ಟು ಸಾರಿ ಹೇಳಿದರು ಕೂಡ ನಿರ್ಲಕ್ಷ್ಯ ಮಾಡುತ್ತಿದೆ ಇದಕ್ಕೆ ಪರಿಹಾರವೇ ಇಲ್ಲ ಎಂಬತೆ ನಮ್ಮ ಕೆಲಸ ನಾವೇ ಮಾಡಿಕೊಳ್ಳಬೇಕು ಎಂದು ನಾವೇ ರಸ್ತೆ ಅಕ್ಕ ಪಕ್ಕದಲ್ಲಿರುವ ಗಿಡ ಗಂಟೆಗಳನ್ನು ಸ್ವಚ್ಛಗೊಳಿಸುತ್ತಿದ್ದೇವೆ, ನಮ್ಮ ಸ್ಥಿತಿ ಹೇಗೆ ಆಗಿದೆ ಎಂದರೆ ಹೇಳೋರು ಇಲ್ಲ ಕೇಳೋರು ಇಲ್ಲ ಪರಿಸ್ಥಿತಿ ನಿರ್ಮಾಣವಾಗಿದೆ. ಪುರಸಭೆ ಮುಖ್ಯ ಅಧಿಕಾರಿ ಕಾಶಿನಾಥ ಧನ್ನಿ ಪ್ರತಿಕ್ರಿಯಿಸಿ ಪುರಸಭೆ ಸಿಬ್ಬಂದಿಗಳ ಮುಷ್ಕರದಿಂದ ಸ್ವಲ್ಪ ದಿನಗಳಲ್ಲಿ ಸ್ವಚ್ಛತೆ ಮಾಡದೆ ಸಮಸ್ಯೆ ಆಗಿದೆ ಮುಂದಿನ ದಿನಗಳಲ್ಲಿ ಪುರಸಭೆ ಸಿಬ್ಬಂದಿಗಳಿಂದ ಆದಷ್ಟು ಸ್ವಚ್ಛತಾ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳಿದರು.
ವರದಿ : ರಾಜೇಂದ್ರ ಪ್ರಸಾದ್