ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೆ ಹೊಸದಾಗಿ 30 ತಿಂಗಳುಗಳ ಕಾಲ ಗುಡಿಬಂಡೆಯ ಪತ್ರಿಕ ವರದಿಗಾರರಾದ ಮಂಜುನಾಥ ರವರನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು,
ಇದಕ್ಕಿಂತ ಮುಂಚೆ 30 ತಿಂಗಳುಗಳ ಕಾಲ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ್ ಅಧ್ಯಕ್ಷರಾಗಿ ಸುಬ್ಬರಾಯಪ್ಪ ಪ್ರೆಸ್ ರವರು ಇದ್ದು ಈ 30 ತಿಂಗಳ ಅವಧಿಗೆ ಅಧ್ಯಕ್ಷರಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಪ್ರೊಫೆಸರ್ ಕೋಡಿ ರಂಗಪ್ಪನವರು ಚಿಕ್ಕಬಳ್ಳಾಪುರ ಜಿಲ್ಲೆ, ಆಯ್ಕೆ ಮಾಡಿರುತ್ತಾರೆ,
ಈ ಒಂದು ಸಮಾರಂಭಕ್ಕೆ ನಿಕಟ ಪೂರ್ವ ಅಧ್ಯಕ್ಷರುಗಳಾದ ನಾಗೇಂದ್ರ ಸ್ವಾಮಿ, ಅನುರಾಧಾಅವರು ಹಾಗೂ ಸುಬ್ಬರಾಯಪ್ಪನವರು ಯಶಸ್ವಿಯಾಗಿ ತಾಲೂಕು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು ಗುಡಿಬಂಡೆಯ ಮೂರನೇ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಅಧ್ಯಕ್ಷರಾಗಿದ್ದ ರಫೀಕ್ ರವರು ಸಹ ಈ ಕಾರ್ಯಕ್ರಮದಲ್ಲಿ ಹಾಜರಿದ್ದರು ಈ ಸಮಯದಲ್ಲಿ ಹಳೆಯ ಅಧ್ಯಕ್ಷರುಗಳು ಹಾಲಿ ಅಧ್ಯಕ್ಷರಿಗೆ ಕನ್ನಡ ಧ್ವಜವನ್ನು ಹಸ್ತಾಂತರ ಮಾಡಿದರು ಈ ಸಮಾರಂಭವು ಅತಿ ಅದ್ಭುತವಾಗಿ ಮೂಡಿ ಬಂದಿರುತ್ತದೆ ಪ್ರಾರ್ಥನೆಯೊಂದಿಗೆ ಮುಖ್ಯ ಅತಿಥಿಗಳು ಜ್ಯೋತಿ ಬೆಳಗಿಸುವ ಮೂಲಕ ನಾಡಗೀತೆಯೊಂದಿಗೆ ಸಮಾರಂಭವನ್ನು ಪ್ರಾರಂಭ ಮಾಡಲಾಯಿತು,
ಈ ಒಂದು ಕಾರ್ಯಕ್ರಮದಲ್ಲಿ ತಾಲೂಕಿನ ದೈಹಿಕ ಶಿಕ್ಷಕರನ್ನು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಉತ್ತಮ ಸೇವೆ ಸಲ್ಲಿಸಿದ ಊರಿನ ಪ್ರಮುಖರನ್ನು ಸನ್ಮಾನಿಸಲಾಯಿತು,
ನಿಕಟ ಪೂರ್ವ ಕಾರ್ಯದರ್ಶಿಯವರು ಕಾರ್ಯಕ್ರಮಕ್ಕೆ ಬಂದಿರುವ ಸಾಹಿತ್ಯ ಪರಿಷತ್ತಿನ ಸದಸ್ಯರಿಗೆ ಊರಿನ ಹಿರಿಯ ನಾಗರಿಕರಿಗೆ ಹಾಗೂ ಸಾಹಿತ್ಯ ಆಸಕ್ತರಿಗೆ ಕಾರ್ಯಕ್ರಮಕ್ಕೆ ಸ್ವಾಗತವನ್ನು ಕೋರಿದರು ಶ್ರೀರಾಮ್ ಮೇಷ್ಟ್ರು ರವರು ಕಾರ್ಯಕ್ರಮದ ನಿರೂಪಣೆ ಮಾಡಿದರು ಹಾಲಿ ಅಧ್ಯಕ್ಷರು ತಮ್ಮ ಭಾಷಣದಲ್ಲಿ ಈ ಮೊದಲು ಗುಡಿಬಂಡೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳನ್ನು ಹೆಚ್ಚು ಅದ್ಭುತವಾಗಿ ನಿರ್ವಹಣೆ ಮಾಡಿರುವ ರೀತಿಯಲ್ಲಿ ಎಲ್ಲಾ ಸಾಹಿತ್ಯ ಪರಿಷತ್ತಿನ ಸದಸ್ಯರು ತಮಗೆ ಅದೇ ರೀತಿಯಲ್ಲಿ ಸಹಕಾರವನ್ನು ನೀಡಬೇಕೆಂದು ಸಮಾರಂಭದ ಮೂಲಕ ಕೋರಿದರು ಈ ಸಮಾರಂಭದ ಅಧ್ಯಕ್ಷತೆಯನ್ನು ಕೋಡಿ ರಂಗಪ್ಪನವರು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಕೃಷ್ಣಾರೆಡ್ಡಿ ಪತ್ರಿಕ ವರದಿಗಾರರು ಬಾಗೇಪಲ್ಲಿ ಪ್ರೆಸ್ ಸುರೇಶ್ ಚಿಕ್ಕಬಳ್ಳಾಪುರ ಹಾಗೂ ಇಂದು ಅನೇಕ ಗಣ್ಯ ವ್ಯಕ್ತಿಗಳು ಪತ್ರಕರ್ತರು ಮಾಧ್ಯಮ ಮಿತ್ರರು ಹಾಗೂ ಊರಿನ ಹಿರಿಯರು ಪ್ರಮುಖರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ : ಜಿಎನ್ ಶ್ರೀನಿವಾಸ ನಾಯ್ಡು ಗುಡಿಬಂಡೆ