ದೇಶ ವಿರೋಧಿ ಹೇಳಿಕೆ ನೀಡಿದ ಐವನ್ ರ ಮೇಲೆ ಪ್ರಕರಣ ದಾಖಲಿಸಿ: ಹರೀಶ್ ಪೂಂಜ

ಬೆಳ್ತಂಗಡಿ: ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ಇದರ ವತಿಯಿಂದ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಮತ್ತು ರಾಜ್ಯಪಾಲರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಐವನ್ ಡಿ’ಸೋಜ ರವರ ಮೇಲೆ ದೂರು ದಾಖಲಿಸಲು ಒತ್ತಾಯಿಸಿ ಆ. 28ರಂದು ಬೆಳ್ತಂಗಡಿಯ ಮೂರು ಮಾರ್ಗದ ಬಳಿ ರಸ್ತೆ ತಡೆ ಮೂಲಕ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ

ಶಾಸಕ ಹರೀಶ್ ಪೂಂಜ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಭ್ರಷ್ಟಾಚಾರವನ್ನು ಯಾವ ರೀತಿಯಲ್ಲಿ ಮಾಡಬಹುದು ಎನ್ನುವಂತಹ ಮಾದರಿಯಾಗಿ ದೇಶಕ್ಕೆ ತೋರಿಸಿಕೊಟ್ಟಿದೆ.

ಈ ಭ್ರಷ್ಟಾಚಾರವನ್ನು ಎಳೆ ಎಳೆಯಾಗಿ ಜನರಿಗೆ ತೋರಿಸುವಂತಹ ಕೆಲಸವನ್ನು ಬಿ.ಎಸ್‌. ವಿಜಯೇಂದ್ರ ರವರ ನೇತೃತ್ವದಲ್ಲಿ ಪ್ರಾರಂಭ ಮಾಡಿದ ನಂತರ, ವಾಲ್ಮೀಕಿ ಹಗರಣ ಇರಬಹುದು, ಮೂಡ ಹಗರಣ ಇರಬಹುದು, ಈ ರಾಜ್ಯದ ಸಚಿವರು, ಮುಖ್ಯ ಮಂತ್ರಿಗಳು ಒಳಗೊಂಡಿರುವಂತಹ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಜನರ ಮುಂದೆ ತೆರೆದಿಡುವಂತಹ ಕೆಲಸವನ್ನು ಮಾಡಿದೆ.

ಮೂಡ ಹಗರಣದಲ್ಲಿ ಸಾವಿರಾರು ಕೋಟಿಯ ಹಗರಣವನ್ನು ಮಾಡಿದಂತಹ ಸಂದರ್ಭದಲ್ಲಿ ಸ್ವತಃ ಮುಖ್ಯ ಮಂತ್ರಿಗಳೇ ಇದರಲ್ಲಿ ಭಾಗಿಯಾಗಿದ್ದಾರೆ ಎನ್ನುವಂತಹ ಆರೋಪಗಳು ಬಂದಂತಹ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು, ಈ ಪ್ರಕರಣದಲ್ಲಿ ಸಿದ್ದರಾಮಯ್ಯ ನವರ ಮೇಲೆ ಎಫ್ ಐ ಆರ್ ನ್ನು ದಾಖಲು ಮಾಡಬೇಕು ಎನ್ನುವಂತಹ ಬೇಡಿಕೆಯನ್ನು ಇಟ್ಟಾಗ, ಮುಖ್ಯಮಂತ್ರಿಗಳ ಮೇಲೆ ಎಫ್ ಐ ಆರ್ ಮಾಡಬೇಕು ಎನ್ನುವ ಸಂದರ್ಭ ಬಂದಾಗ, ರಾಜ್ಯಪಾಲರು ರಾಜ್ಯ ಭವನದಲ್ಲಿ ಕಾನೂನು ಪಂಡಿತರ ಅಭಿಪ್ರಾಯವನ್ನು ಪಡಕೊಂಡು ಪ್ರಾಸಿಕ್ಯೂಶನ್ ಗೆ ಪರ್ಮಿಷನ್ ಕೊಡುತ್ತಾರೆ.

ಸಂವಿಧಾನ ವಿರೋಧಿ ಕೆಲಸವನ್ನು ನೆಪದಲ್ಲಿ ಕಾಂಗ್ರೆಸ್‌ ಜಿಲ್ಲಾವಾರು ಪ್ರತಿಭಟನೆಗಳು ಮಾಡಿತ್ತು. ಆ ಸಂದರ್ಭದಲ್ಲಿ ಈ ಜಿಲ್ಲೆಯ ವಿಧಾನ ಪರಿಷತ್ ನ ಸದಸ್ಯರಾದ ಐವನ್ ಡಿಸೋಜಾ ರವರು ಆಡಿರುವಂತಹ ಮಾತು, ರಾಜ್ಯ ಭವನದಲ್ಲಿ ಬಾಂಗ್ಲ ದೇಶದ ರೀತಿಯಲ್ಲಿ ನಾವು ರಾಜ್ಯಭವನ ಮುತ್ತಿಗೆ ಹಾಕಿ, ರಾಜ್ಯಪಾಲರನ್ನು ಓಡಿಸುತ್ತುವೆ ಎನ್ನುವ ರೀತಿಯ ಮಾತುಗಳನ್ನು ಐವನ್ ಡಿಸೋಜಾ ರವರು ಹೇಳುವ ಮೂಲಕ ಈ ರಾಜ್ಯದಲ್ಲಿ ಧಂಗೆಯನ್ನು ಎಬ್ಬಿಸುತ್ತಾರೆ ಎನ್ನುವ ಸೂಚನೆಯ ನ್ನು ಕೊಟ್ಟಿರುವಂತಹದ್ದು ದೇಶ ವಿರೋಧಿ ಯಾದಂತಹ ಹೇಳಿಕೆ. ಈ ಹೇಳಿಕೆಯನ್ನು ಖಂಡಿಸಿ ಅನೇಕ ಜನರು ಐವನ್ ಡಿಸೋಜಾ ರವರ ಮೇಲೆ ಎಫ್ ಐ ಆರ್ ಮಾಡಬೇಕು ಎನ್ನುವಂತಹ ಕಂಪ್ಲೇಂಟ್ ನ್ನು ಪೊಲೀಸ್‌ ಠಾಣೆಯಲ್ಲಿ ಕೊಟ್ಟಿದ್ದರು. ಆದರೆ ಕಾಂಗ್ರೆಸ್ ಸರಕಾರದ ಒತ್ತಡಕ್ಕೆ ಪೊಲೀಸರು ಮಣಿದು, ದೇಶ ವಿರೋಧಿ ಹೇಳಿಕೆ ಕೊಟ್ಟಿರುವಂತಹ ವ್ಯಕ್ತಿಯ ಮೇಲೆ ಮೊಕದ್ದಮೆಯನ್ನು ಹೂಡದ ರೀತಿಯಲ್ಲಿ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಜಯಾನಂದ ಗೌಡ, ಪ್ರಶಾಂತ್ ಪಾರೆಂಕಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಗಣೇಶ್‌ ಗೌಡ ನಾವೂರು, ಉಮೇಶ್‌ ಕುಲಾಲ್, ರಾಜೇಶ್, ಸೀತಾರಾಮ್ ಬೆಳಾಲು, ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ, ಲಾಯಿಲ ಗ್ರಾ.ಪಂ. ಅಧ್ಯಕ್ಷ ಗಣೇಶ್‌, ರಾಮಣ್ಣ ಕುಂಬಾರ, ಗಣೇಶ್ ನಾವರ, ಶಿವಾನಂದ ರಾವ್ ಕಕ್ಕೆನೇಜಿ ಹಾಗೂ ಯುವ ಮೊರ್ಚಾದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.