ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದ ಮೇಲೆ ಸಿ.ಸಿ.ಬಿ ರೇಡ್ ಬೀಡಿ, ಸಿಗರೇಟ್, ತಂಬಾಕು, ಗಾಂಜಾ ಸೇದಲು ಉಪಯೋಗಿಸುವ ಕೊಳವೆಗಳು ಹಾಗೂ ನಗದು ಹಣ ಪತ್ತೆ

ಬೆಂಗಳೂರು : ಸಿ.ಸಿ.ಬಿ ಯ ಅಧಿಕಾರಿ ಮತ್ತು ಸಿಬ್ಬಂದಿಯವರು ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಂಡು, ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿ, ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ತಂಗುವ ಬ್ಯಾರಕ್‌ಗಳಲ್ಲಿ ಶೋಧನಾ ಕಾರ್ಯವನ್ನು ಕೈಗೊಳ್ಳಲಾಯಿತು.

ಈ ಶೋಧನಾ ಕಾಲದಲ್ಲಿ ಬ್ಯಾರಕ್‌ಗಳಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದ ವಸ್ತುಗಳಾದ, ಬೀಡಿ, ಸಿಗರೇಟ್, ತಂಬಾಕು ಉತ್ಪನ್ನಗಳಾದ ಚೈನಿ, ಸ್ವಾಗತ್ ಗೋಲ್ಡ್, ಗಾಂಜಾ ಸೇದಲು ಉಪಯೋಗಿಸುವ ಕೊಳವೆಗಳು, ಹರಿತವಾದ ಚಾಕು ರೀತ್ಯಾ ಆಯುಧಗಳು ಅಲ್ಲದೆ ಇಬ್ಬರು ಕೈದಿಗಳ ವಶದಲ್ಲಿದ್ದ ಒಟ್ಟು ₹ 16,180/-ನಗದನ್ನು ವಶಪಡಿಸಿಕೊಳ್ಳಲಾಯಿತು.

ಈ ಸಂಬಂಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ವರದಿ : ಮುಬಾರಕ್

error: Content is protected !!