ಕಾಳಗಿ ತಾಲೂಕಿನ ಕಲಗುರ್ತಿ ಗ್ರಾಮದಲ್ಲಿ ಮಂಗಳವಾರ ನವಚೇತನ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ಕಲಬುರಗಿ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಚಿತ್ತಾಪೂರ ಗ್ರಾಮ ಪಂಚಾಯತ ಕಾರ್ಯಲಯ ಕೋರವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲಗುರ್ತಿ ಇವರುಗಳ ಸಂಯುಕ್ತಾಶ್ರಯದಲ್ಲಿ ” ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನ ಕಾರ್ಯಕ್ರಮ ಶಾಲೆಯ ಮಕ್ಕಳು ಹಾಗೂ ಶಿಕ್ಷಕರು , ಸಂಸ್ಥೆಯ ವತಿಯಿಂದ ಗ್ರಾಮದಲ್ಲಿ ಎಲ್ಲರೂ ಸೇರಿ 1ನೇ ತರಗತಿ ಧಾಖಲಾತಿ ಮತ್ತು ಶಾಲೆ ಬಿಟ್ಟ ಮಕ್ಕಳ ಕರೆ ತರಲು ಗ್ರಾಮದ ಮುಖಂಡರು, ಗ್ರಾಮದ ಸದಸ್ಯರು ಶಿಕ್ಷಣ ಪ್ರೇಮಿಗಳು ಹಾಗೂ ವಾಹನಕ್ಕೆ ತೋರಣ ಕಟ್ಟಿ ಬಲೂನ್ ಕಟ್ಟಿ ಸಿಂಗಾರ ಮಾಡಿ ಮನೆಯಲ್ಲಿದ್ದ 5 ವರ್ಷ 5 ತಿಂಗಳ ಮಕ್ಕಳಿಗೆ ಕರೆದುಕೊಂಡು ಬಂದು ವಾಹನದ ಒಳಗಡೆ ಕೂಡಿಸಿ ಮೆರವಣಿಗೆಯ ಮುಖಾಂತರ 1ನೇ ತರಗತಿಯಲ್ಲಿ ಧಾಖಲಾತಿ ಮಾಡಿಕೊಳ್ಳಲು ಶಾಲೆ ಬಿಟ್ಟ ಮಗುವನ್ನು ಶಾಲೆಗೆ ಕರೆದುಕೊಂಡು ಬರಲು ಮಕ್ಕಳ ಕೂಗು ಧ್ವನಿಯಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕಳುಹಿಸಿ, ಶಿಕ್ಷಣವೆ ಶಕ್ತಿ ಎಂದು ಪ್ರಭಾತ ಫೇರಿ ಮುಖಾಂತರ ಎಲ್ಲರೂ ಭಾಗವಹಿಸಿ ಗ್ರಾಮದ ಒಳಗಡೆಯಿಂದ ಶಾಲೆಯವರಗೆ ಪ್ರಭಾತ ಫೇರಿ ನೆರವೇರಿಸಲಾಯಿತು ಈ ಸಂದರ್ಭದಲ್ಲಿ ನವಚೇತನ ಸಂಸ್ಥೆಯ ನಿರ್ದೇಶಕರಾದ ರಾಹುಲ್ ಮಾಳಗೆ, ಅಧ್ಯಕ್ಷರು ದೀಪಿಕಾ, ಸಂಯೋಜಕರು ವಿಜಯಲಕ್ಷ್ಮೀ, ನರಸಿಂಹರಾವ, ಶಾಲೆಯ ಮುಖ್ಯಗುರುಗಳಾದ ಅನಿತಾ , ಶಾಲೆ ಶಿಕ್ಷಕರು ಶಿವುಪುತ್ರ, ನಾಗಪ್ಪ, ಗ್ರಾಮದ ಸದಸ್ಯರು ಮುಕ್ತರ ಪಾಶಾ, SDMS ಅಧಕ್ಷರಾದ ದೇವಣ್ಣ ಹಾಗೂ ಗ್ರಾಮದ ಮುಖಂಡರು ಇತರರು ಉಪಸ್ಥಿತರಿದ್ದರು.
ವರದಿ ರಮೇಶ್ ಎಸ್ ಕುಡಹಳ್ಳಿ jk ಕನ್ನಡ ನ್ಯೂಸ್ ಕಾಳಗಿ