ಅಕ್ರಮವಾಗಿ ಕಳ್ಳಬಟ್ಟಿ ಮಾರಾಟ ಮಾಡುವಾಗ ಪೊಲೀಸರ ವಶಕ್ಕೆ

ವಿಜಯಪುರ: ನಗರದ ಗೋಳಗುಮ್ಮಟ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ಮದ್ಯ ಮಾರಾಟ ಮಾಡುವಾಗ ಪೊಲೀಸರು ದಾಳಿಗೈದು ಕಳ್ಳಬಟ್ಟಿ ಮದ್ಯ ಜಪ್ತಿಗೈದಿದ್ದಾರೆ.

ವಿಜಯಪುರ ನಗರದ ಗೋಳಗುಮ್ಮಟ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ಮದ್ಯ ಮಾರಾಟ ಮಾಡಲಾಗುತ್ತಿತ್ತು.

ಖಚಿತ ಮಾಹಿತಿ ಆಧರಿಸಿ ಗೋಳಗುಮ್ಮಟ್ ಹಾಗೂ ಜಲನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮ ಮದ್ಯ ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನು ಕಳ್ಳಬಟ್ಟಿ ಮದ್ಯವನ್ನು ಕೊಡ, ನೀರಿನ ಬಾಟಲ್‌ನಲ್ಲಿ ಮಾರಾಟ ಮಾಡಲಾಗುತ್ತಿತ್ತು.

ಗೋಳಗುಮ್ಮಟ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ : ದೌಲಪ್ಪ ಮನಗೂಳಿ
JK ಕನ್ನಡ ನ್ಯೂಸ್
ವಿಜಯಪುರ

error: Content is protected !!