ಚಿತ್ತಾಪುರ; ಮುಂಗಾರು ಹಂಗಾಮಿನ ಬೆಳಗಳಿಗೆ ಬಿತ್ತನೆ ಪ್ರಾರಂಭವಾಗಿದ್ದು ಬಿತ್ತನೆ ಮಾಡಿದ ಸೊಯಾ, ಉದ್ದು, ಹೆಸರು ಮತ್ತು ತೊಗರಿ ಬೆಳೆಗಳಿಗೆ 2-3 ಎಲೆಯ ಹಂತದಲ್ಲಿದ್ದಾಗ (ಸುಮಾರು 10 ರಿಂದ 20 ದಿವಸದ ಬೆಳೆಗಳಿರುವಾಗ) ರೈತರ ಹೊಲಗಳಲ್ಲಿ ಬಸವನ ಹುಳುವಿನ (ಶಂಕದ ಹುಳು) ಬಾಧೆ ಕಂಡು ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಅವುಗಳ ನಿರ್ವಹಣೆ ಕ್ರಮಗಳನ್ನು ಅನುಸರಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಸಂಜೀವಕುಮಾರ ಮಾನಕರ್ ತಿಳಿಸಿದ್ದಾರೆ
ಬಸವನ ಹುಳುವಿನ ಲಕ್ಷಣಗಳು: ಈ ಹುಳುಗಳು ಬೆಳೆಯುತ್ತಿರುವ ಗಿಡದ ಪ್ರಥಮ 2 ರಿಂದ 4 ಎಲೆಗಳ ತುದಿ ಚಿಗುರು, ದೇಟುಗಳು ಹಾಗೂ ಕಾಂಡಗಳನ್ನು ಕಾಂಡಗಳನ್ನು ಕೆರದು ತಿನ್ನುವದು ಪೀಡೆ ಭಾದಿತ ನಾಟಿಗಳು ಸರಿಯಾಗಿ ಬೆಳೆಯದೇ ನಶಿಸಿ ಹೊಗುತ್ತದೆ ಮತ್ತು ಮುಂದುವರೆದು ಈ ಪೀಡೆಯ ಭಾಧೆ ಜಾಸ್ತಿಯಾದಲ್ಲಿ ಅಂತಹಭಾದಿತ ಹೊಲಗಳ ರೈತರು ಮತ್ತೊಮ್ಮೆ ಬಿತ್ತನೆ ಕಾರ್ಯ ಮಾಡಿಕೊಳ್ಳಬಹುದು. ಮಳೆಗಾಲದಲ್ಲಿ ತುಂತುರು ಮಳೆ ಹಾಗೂ ಸೂರ್ಯನ ಮಂದ ಪ್ರಕಾಶವಿರುವಾಗ ಹಗಲಿನಲ್ಲಿಯೂ ಇವುಗಳ ಭಾದ ಕಾಣಬಹುದು ಸಾಮಾನ್ಯವಾಗಿ ಸಾಯಂಕಾಲದಿಂದ ಬೆಳಗಿನ ಜಾವದವರೆಗೂ ತಿಂದು ಪುನ: ಬೆಳೆಗಾದ ಕೂಡಲೇ ಅಡುಗುತಾಣಗಳಲ್ಲಿ ಸೇರಿಕೊಳ್ಳುತ್ತವೆ.
ಬಸವನ ಹುಳುವಿನ ನಿರ್ವಹಣೆ: ಪೀಡೆಗೆ ಆಸರೆಯಾಗುವ ಅಡುಗು ತಾಣಗಳಾದ ಹುಲ್ಲು ಬಿದ್ದ ಕಸಕಡ್ಡಿ ಮುಂತಾದವುಗಳನ್ನು ಪ್ರಾರಂಭದಲ್ಲಿ ತೆಗೆದು ಸ್ವಚ್ಚವಾಗಿಡಬೇಕು. ಯಾವಾಗ ಶಂಕದ ಹುಳುವಿನ ಆರ್ಬಟ ಜಾಸ್ತಿಯಾಗಲಿಕ್ಕೆ ಪ್ರಾರಂಭಿಸುವುದು ಆಗ ಹೊಲದಲ್ಲಿ ಅಲ್ಲಲ್ಲಿ ಕೃಷಿ ತ್ಯಾಜ್ಯಗಳ ಗುಂಪಿ ಹಾಕುವುದರಿಂದ ಹುಳುಗಳು ಆಸರೆಗಾಗಿ ಅಡಗಿ ಕೂಡುತ್ತವೆ. ಪ್ರತಿ ದಿನ ಮುಂಜಾನೆ ಆರಿಸಿ ಸಾಬೂನಿನ ನೀರಲ್ಲಿ ಬಕೇಟಿಗೆ ಹಾಕಿ ಮೇಲೆ ಉಪ್ಪು ಹಾಕುವುದರಿಂದ ನಾಶಪಡಿಸಬಹುದು. ಹೊಲದಲ್ಲಿ ಅಲ್ಲಲ್ಲಿ ನೀರಿನಲ್ಲಿ ನೆನೆಸಿದ ಗೊಣಿಚೀಲ ಹರಡಿ ಅಥವಾ ಕೊಳೆತ ಕಸ ಹೊಲದಲ್ಲಿ ಗುಂಪಾಗಿಟ್ಟು ಆಸರೆಗಾಗಿ ಬರುವ ಹುಳುಗಳ ಮೇಲೆ ಬೀಚಿಂಗ್ ಪುಡಿ 8-10ಕಿ.ಗ್ರಾ ಪ್ರತಿ ಎಕರೆಗೆ ಧೂಳಿಕರಿಸಿ ನಾಶಪಡಿಸಬಹುದು. ಅಥವಾ ಮೇಲೆ ಹೇಳಿದ 2 ಪದ್ಧತಿ ಅನುಸರಿಸಿ ನಾಶಪಡಿಸಬಹುದು.
ಸತ್ತ ಹುಳುಗಳನ್ನು ಮರುದಿನವೇ ಆರಿಸಿ 3 ಅಡಿ ಆಳದ ಗುಂಡಿಯಲ್ಲಿ ಹೂಳಬೇಕು. ಈ ರೀತಿ ಮಾಡುವುದರಿಂದ ಸತ್ತ ಹುಳುವಿನ ಹೊಟ್ಟೆಯಲ್ಲಿರುವ ಮೊಟ್ಟೆಗಳನ್ನು ನಾಶ ಮಾಡಿದಂತಾಗುತ್ತದೆ. ಮತ್ತು ಬೆಕ್ಕು, ನಾಯಿ, ಪಕ್ಷಿ ಮತ್ತು ಇತರೆ ಪರ ಭಕ್ಷಕಗಳು ಪಾಷಣ ಯುಕ್ತ ಸತ್ತ ಹುಳುಗಳನ್ನು ತಿಂದು ನಾಶವಾಗದಂತೆ ಕಾಪಾಡಬಹುದು, ಕರ್‌ಬಾರಿಲ್ ವಿಷ ಪಾಷಾಣವನ್ನು ಬಳಸಿದ ಯಾವುದೇ ಬೆಳೆಗಳಲ್ಲಿ ನೀರನ್ನು ಚೆಲ್ಲಿ ನಿಷ್ಕ್ರಿಯಗೊಳಿಸಬೇಕು ಎಂದು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ
ವರದಿ ಮೊಹಮ್ಮದ್ ಅಲಿ ಚಿತ್ತಾಪುರ