ದಿನಾಂಕ: 18-06-2025 ರಂದು ಬೆಳಗಿನ ಜಾವ ವಿಜಯಪುರ ಜಿಲ್ಲೆಯಾದ್ಯಂತ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳ ತಡೆ ಕಾರ್ಯಾಚರಣೆ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಶ್ರೀ ಲಕ್ಷ್ಮಣ ನಿಂಬರಗಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಶ್ರೀ ಶಂಕರ ಮಾರಿಹಾಳ, ಶ್ರೀ ರಾಮನಗೌಡ ಹಟ್ಟಿ ರವರುಗಳ ಮಾರ್ಗದರ್ಶನದಲ್ಲಿ, ಎಲ್ಲ ಉಪ-ವಿಭಾಗಗಳ ಡಿಎಸ್‌ಪಿ ಹಾಗೂ ಸಿಪಿಐ ರವರುಗಳ ನೇತೃತ್ವದಲ್ಲಿ ಈ ದಿನ ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳ ಮೇಲೆ ದಾಳಿ ಕೈಕೊಳ್ಳಲಾಗಿದೆ. ದಾಳಿಯಲ್ಲಿ ಅಕ್ರಮ ಗಾಂಜಾ, ಅಕ್ರಮ ಮದ್ಯ ಹಾಗೂ ಕಳ್ಳಭಟ್ಟಿ ಸರಾಯಿ ಇತ್ಯಾದಿ ವಸ್ತುಗಳನ್ನು ಜಪ್ತಪಡಿಸಿಕೊಳ್ಳಲಾಗಿದೆ.
ದಾಳಿಯಲ್ಲಿ ಈ ಕೆಳಗಿನಂತೆ ಅಕ್ರಮ ವಸ್ತುಗಳನ್ನು ವಶಪಡಿಸಿಕೊಂಡು, ಆರೋಪಿತರ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಿ ಕಾನೂನು ಕ್ರಮ ಕೈಕೊಳ್ಳಲಾಗಿದೆ.
ವಶಪಡಿಸಿಕೊಳ್ಳಲಾದ ಮಾಲು
ವಿವರ
1) ಗಾಂಜಾ : 5.85 ಕೆ.ಜಿ ಮೌಲ್ಯ: 35,100/- ಆರೋಪಿ- 01
ಮಾವಾ: 50 ಗ್ರಾಂ. ಮೌಲ್ಯ: 600/- ಆರೋಪಿ- 01
2) ಅಕ್ರಮ ಮದ್ಯ:
42.71 ಲೀಟರ್, ಮೌಲ್ಯ:
22,835/- ಪ್ರಕರಣಗಳು- 08
ಆರೋಪಿಗಳು – 10
03) ಕಳ್ಳಭಟ್ಟಿ ಸರಾಯಿ
55 ಲೀಟರ್, ಮೌಲ್ಯ: 4,765/-
ಪ್ರಕರಣಗಳು- 11, ಆರೋಪಿಗಳು – 12
ಸದರಿ ದಾಳಿಯಲ್ಲಿ ಕೈಕೊಂಡ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ ಅಧಿಕಾರಿ ಹಾಗೂ ಸಿಬ್ಬಂದಿ ಜನರ ಕರ್ತವ್ಯವನ್ನು ಶ್ಲಾಘಿಸಲಾಗಿದೆ.
ವರದಿ : ದೌಲಪ್ಪ ಮನಗೋಳಿ