ರಾಯಚೂರು : ತಾಲೂಕಿನ ಮನ್ಸಲಾಪೂರು ಗ್ರಾಮ ಪಂಚಾಯತಿ ವ್ಯಾಪಿಯ ಮರ್ಚೆಡ್ ಗ್ರಾಮ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಕುಡಿಯುವ ನೀರಿನ ಸಮಸ್ಯೆ ಇದ್ದು ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡುತಿದ್ದಾರೆ, ಪಿ.ಡಿ.ಓ., ಇ.ಓ.ತಾಲೂಕ ಪಂಚಾಯತ್ ಇವರಿಗೆ ಮೌಖಿಕ ಹಾಗೂ ವಾಟ್ಸಾಪ್ ಮುಖಾಂತರ ಹಲವು ಬಾರಿ ತಿಳಿಸಿದರು ಯಾವೂದೆ ಪರಿಹಾರ ನೀಡಿರುವುದಿಲ್ಲ ಕಾರಣ ಇಂದು ಮುಜಾಹಿದ್ ಮರ್ಚೆಡ್ ಹಾಗೂ ಮಹೆಬೂಬ್ ಮರ್ಚೆಡ್ ಇವರ ನೇತ್ರತ್ವದಲ್ಲಿ ಗ್ರಾಮಸ್ತರು ಇ.ಒ.ತಾಲೂಕ ಪಂಚಾಯತ್ ರಾಯಚೂರು ಇವತಿಗೆ ಮತ್ತೊಮ್ಮೆ ಮನವಿ ಸಲ್ಲಿಸಿದರು, ಒಂದು ವಾರದ ಒಳಗೆ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡದಿದ್ದಲ್ಲಿ ಗ್ರಾಮ ಪಂಚಾಯತ್ ಮನ್ಸಲಾಪೂರು ಕಛೇರಿಗೆ ಬೀಗ ಹಾಕಿ ಪ್ರತಿಬಟಿಸಲಾಗುವುದು ಎಂದು ಮುಜಾಹಿದ್ ಮರ್ಚೆಡ್ ಇವರು ಆಕ್ರೋಶ ವ್ಯಕ್ತಪಡಿಸಿದರು,ಈ ಸಂದರ್ಭದಲ್ಲಿ ಮಹೇಬೂಬ್ ಮರ್ಚೆಡ್ ಮಾತಮಾಡಿ ಕುಡಿಯುವ ನೀರು ಅತ್ಯವಶ್ಯಕವಾಗಿದೆ ನೀವು ಅಧಿಕಾರಿಗಳು ಶುದ್ಧ ಕುಡಿಯುವ ನೀರು ಕುಡಿಯುತ್ತೀರಿ ಆದ್ರೆ ಸಾರ್ವಜನಿಕರ ನಿಮಗೇನು ಗೊತ್ತು ಎಂದು ಆವೇಶದಲ್ಲಿ ಹೇಳಿದರು ಹಾಗೂ ಜೈ ಕರುನಾಡು ರಕ್ಷಣಾ ಸೇನೆಯ ಜಿಲ್ಲಾಧ್ಯಕ್ಷರಾದ ಸೈಯದ್ ಸಾಬೀರ್ ಅಲಿ, ರೈತ ಘಟಕದ ಜಿಲ್ಲಾದ್ಯಕ್ಷರಾದ ಆನಂದ ಮಡಿವಾಳ, ನಾಗೇಶ್ ಪಿ.ಕೆ., ಬಾಬು, ಮಲ್ಲೆಶ್, ಹಾಗೂ ಗ್ರಾಮಸ್ಥರು ಹಾಜರಿದ್ದು ಮನವಿ ಸಲ್ಲಿಸಿದರು ಇದಕ್ಕೆ ಇ.ಓ..ಪರಿಹಾರ ಒದಗಿಸುವ ಭರವಸೆ ನೀಡಿದರು.